• 08251 236599
  • 08251 236444
  • vvsputtur@gmail.com

ಗ್ರಾಮ ವಿಕಾಸ-ಒಂದು ಪರಿಕಲ್ಪನೆ

ಆಲಂಕಾರು ಭಾರತಿ ಶಾಲೆಯಲ್ಲಿ ಸಮಲೋಚನಾ ಸಭೆ ಆಲಂಕಾರು: ಗ್ರಾಮ ವಿಕಾಸ-ಒಂದು ಪರಿಕಲ್ಪನೆ ಎಂಬ ವಿಶೇಷ ಕಾರ್ಯಕ್ರಮ ಆಲಂಕಾರು ಭಾರತಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣರಾವ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಗ್ರಾಮದಲ್ಲಿ ಅನಕ್ಷರತೆಯನ್ನು ದೂರಗೊಳಿಸಬೇಕು. ಆ ಗ್ರಾಮಗಳ ಸ್ವಚ್ಛತೆ ಎಲ್ಲರೂ ಮಾಡಬೇಕು ಎಂದರು. ಊರಿನ ಸಮಸ್ಯೆಗಳನ್ನು ಕೋರ್ಟು/ಕಛೇರಿಗಳಿಲ್ಲದೆಯೇ ಮುಗಿಸುವ ಪ್ರಯತ್ನಗಳು ಗ್ರಾಮದಲ್ಲಿ ಆಗಬೇಕು ಎಂದು ತಿಳಿಸಿದರು. ಮರಗಳನ್ನು ನೆಡುವ ಕಾರ್ಯದಲ್ಲಿ ನಮ್ಮನ್ನು ತೊಡಗಿಸಬೇಕು. ಆ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಬೇಕು

Read More

ಗ್ರಾಮ ವಿಕಾಸ ಸಮಾಲೋಚನಾ ಸಭೆ

ಪೆರ್ಲಂಪಾಡಿ : ಷಣ್ಮುಖದೇವ ಪ್ರೌಢಶಾಲೆಯನ್ನು ಕೇಂದ್ರವಾಗಿಟ್ಟು ನಡೆಯಲಿರುವ ಕೊಳ್ತಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಸಭೆ ಶಾಲಾ ಸಭಾಭವನದಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳು ಒಂದೊಂದು ಗ್ರಾಮ ಆಯ್ಕೆ ಮಾಡಿ ಗ್ರಾಮ ವಿಕಾಸ ಯೋಜನೆ ನಡೆಸುವ ತೀರ್ಮಾನದಂತೆ ಷಣ್ಮುಖದೇವ ಪ್ರೌಢಶಾಲೆ ಆಯ್ಕೆ ಮಾಡಿದ ಕೊಳ್ತಿಗೆ ಗ್ರಾಮದಲ್ಲಿ ಈ ಯೋಜನೆಯನ್ನು ಏಕೆ, ಹೇಗೆ ಜಾರಿಗೊಳಿಸಬಹುದು ಎಂಬ ವಿಸ್ತೃತ ಚರ್ಚೆ ನಡೆಸಲಾಯಿತು. ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯಲ್ಲಿ ನಡೆದ ಈ ಸಭೆಯಲ್ಲಿ

Read More

ಗಾಂಧಿ ಜಯಂತಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಚ್ಛತಾ ಕಾರ್ಯ

ಶ್ರೀರಾಮ ವಿದ್ಯಾಲಯ ನೆಲ್ಯಾಡಿ ಇಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು. ಶಾಲೆಯ ಆಡಳಿತ ಸಮಿತಿ, ಶಿಕ್ಷಕರು ಹಾಗೂ ಊರವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಶಾಲೆಯ ಸುತ್ತ ಮುತ್ತ ಬೆಳೆದಿದ್ದ ಅನಗತ್ಯ ಕಾಡು ಕಡಿಯುವ ಹಾಗೂ ಕಸ ವಿಲೇವಾರಿ ಕಾರ್ಯ ಮಾಡಿದರು. ಶಾಲೆಯ ಅಧ್ಯಕ್ಷರಾದ ಜಯಪ್ರಕಾಶ್ ನೆಕ್ರಾಜೆ, ಶಾಲಾ ಮುಖ್ಯ ಗುರುಗಳಾದ ಪ್ರಕಾಶ್ ಎನ್, ಸದಸ್ಯರಾದ ಜಯಂತ ಅಂಬರ್ಜೆ, ಮೂಲಚಂದ್ರ ಕಾಂಚನ, ಸ್ಥಳೀಯರಾದ ರಘುನಾಥ ತಿರ್ಲೆ, ಸಂಧ್ಯಾ, ಶಿಕ್ಷಕರಾದ ಧನಂಜಯ ಬಿ, ಕು|

Read More

ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಶಾಲೆಯಲ್ಲಿ ಸಾಮೂಹಿಕ  ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

Read More

ಗಣೇಶೋತ್ಸವ ಆಚರಣೆ

ಮಕ್ಕಳಿಂದ ಸಂಭ್ರಮದ ಗಣೇಶೋತ್ಸವ ಆಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಟ್ಯಾಬ್ಲೋ ಮೆರವಣಿಗೆ ನಡೆಯಿತು.

Read More

ಶ್ರೀ ಭಾರತಿ ಶಾಲೆ ಆಲಂಕಾರಿನಲ್ಲಿ ಸುದ್ದಿ ಭಾರತಿ ಉದ್ಘಾಟನೆ

ಆಲಂಕಾರು;-ಇಲ್ಲಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿ -ಭಾರತಿ ಎಂಬ ಪತ್ರಿಕಾಸಂಘ ಸೋಮವಾರಉದ್ಘಾಟನೆಗೊಂಡಿತು. ಕಡಬ ವಲಯ ಪತ್ರಕರ್ತರ ಸಂಘದಅಧ್ಯಕ್ಷಕೆ.ಎಸ್ ಬಾಲಕೃಷ್ಣ ಕೊಲ ದೀಪ ಬೆಳಗಿಸಿ ಸಂಘ ಉದ್ಘಾಟಿಸಿದರು. ನಂತರ ನಡೆದಕಾರ್ಯಕ್ರಮದಲ್ಲಿ ಸುದ್ದಿ ಭಾರತಿ ಸಂಘವನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕೆಗಳು ಸ್ವಾತಂತ್ಯ್ರಕಾಲದಲ್ಲಿ ಹೋರಾಟಗಾರರಿಗೆ ಪ್ರೇರಣೆ ನೀಡುವುದು,ನಾವು ಪತ್ರಿಕೆಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಮತ್ತು ಪತ್ರಿಕೆಯನ್ನು ಮಾರುಕಟ್ಟೆಯಿಂದಕೊಂಡುಓದುವ ಸಂಸ್ಕ್ರತಿ ನಮ್ಮದಾಗಬೇಕುಎಂದರು. ಜ್ಞಾನದದಾಹ ನಮ್ಮಲ್ಲಿರಬೇಕು.ಸಾಹಿತ್ಯದ ಬರವಣಿಗೆಗೆ ಪುಸ್ತಕ ಓದಬೇಕು. ಪುಸ್ತಕ ಓದದೆ ವರದಿ ಮಾಡಲು ಸಾಧ್ಯವಿಲ್ಲ ಎಂದುಅಭಿಪ್ರಾಯವ್ಯಕ್ತ ಪಡಿಸಿದರು.ನಂತರ ಸುದ್ದಿ ಭಾರತಿ

Read More

ಶಿಕ್ಷಕರ ದಿನಾಚರಣೆ

ಶಿಕ್ಷಕರು ಕೇವಲ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡುವುದಲ್ಲ ವಿದ್ಯಾರ್ಥಿಗಳ ಮನದಲ್ಲಿ ಉತ್ತಮ ಭಾವ ಉದ್ದೀಪನ ಮಾಡುವ ಕಾರ್ಯವನ್ನು ಮಾಡಬೇಕು. ಶಿಕ್ಷಕ ವಿದ್ಯಾರ್ಥಿಗಳ ಜೀವನಕ್ಕೆ ಕೇವಲ ಬೆಳಕನ್ನು ನೀಡುವುದಲ್ಲದೇ ಸಮಾಜಕ್ಕೆ ಆದರ್ಶವಾಗಿ ಸಮಾಜವನ್ನು ತಿದ್ದುವ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು. ಈ ರೀತಿಯ ಆದರ್ಶವನ್ನು ಬೆಳೆಸಿಕೊಂಡವರು ಸರ್ವಪಲ್ಲಿ ರಾಧಾಕೃಷ್ಣನ್‌ರವರು. ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಮಧುಕರ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ವಿನೋದ್ ತಿಳಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿ ಪ್ರಮುಖರು ಎಲ್ಲಾ ಶಿಕ್ಷಕರಿಗೆ ಹೂಗುಚ್ಚ ನೀಡಿ

Read More

ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ

ದಿನಾಂಕ 31-08-2015 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶಾರದ ರಾವ್ ನಿವೃತ್ತ ಶಿಕ್ಷಕಿ ರಕ್ಷಬಂಧನದ ಮಹತ್ವವನ್ನು ತಿಳಿಸಿದರು. ಇನ್ನೋರ್ವ ಅತಿಥಿಗಳಾದ ಶ್ರೀರಾಮ ಪೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ರೋಹಿತ್ ಸಂಸ್ಕೃತ ಭಾಷೆಯ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿದರು. ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾ ಸ್ಫರ್ಧೆಯಲ್ಲಿ ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ

Read More

ರಕ್ಷಾಬಂಧನ

ನಿರ್ಮಲ ಪ್ರೇಮ ಭ್ರಾತೃತ್ವದ ಸಂಕೇತ ರಕ್ಷಾಬಂಧನ, ಬಿಡಿಬಿಡಿಯಾದ ರೇಷ್ಮೆಯ ಎಸಳುಗಳನ್ನು ದಾರದಿಂದ ಪೋಣಿಸಿದಾಗ ಅದು ರಕ್ಷೆಯಾಗುತ್ತದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ರಾಜರಾಮವರ್ಮ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು – ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದಕ್ಕೆ, ವಿದ್ಯಾರ್ಥಿ-ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ರಕ್ಷಾಬಂಧನದ

Read More

ರಕ್ಷಾಬಂಧನ, ಸಂಸ್ಕೃತೋತ್ಸವ ಕಾರ್ಯಕ್ರಮ

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಭಾರತೀಯರೆಲ್ಲರೂ ಸಹೋದರರಂತೆ ಪರಸ್ಪರ ಸಾಮರಸ್ಯದಿಂದ ಜೀವಿಸಿದರೆ ಭಾರತ ಅಭಿವೃದ್ಧಿಯಾಗುವುದು. ರಕ್ಷಾಬಂಧನ ಉತ್ಸವ ಆಚರಿಸುವ ಮೂಲಕ ಜಾತಿ, ಮತ, ಭಾಷೆ ಎಂಬ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಾಗಬೇಕು, ಒಳಗಿನ ಭಿನ್ನಮತಗಳನ್ನು ಹೊರಗಿನ ಶತ್ರುಗಳನ್ನು ಏಕತೆಯಿಂದ ಎದುರಿಸಬೇಕೆಂದು ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಹೆಗ್ಡೆ ಹೇಳಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ರಕ್ಷಾಬಂಧನ ಮತ್ತು ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಸ್ಕೃತ ಕಲಿಯುವುದರಿಂದ ಸುಸಂಸ್ಕೃತರಾಗುತ್ತೇವೆ. ಭಾಷೆಯ ಬಳಕೆಯಿಂದ ಭಾಷೆ ಉಳಿಯುತ್ತದೆ.

Read More

Highslide for Wordpress Plugin