• 08251 236599
  • 08251 236444
  • vvsputtur@gmail.com

ಗ್ರಾಮ ವಿಕಾಸ-ಒಂದು ಪರಿಕಲ್ಪನೆ

ಆಲಂಕಾರು ಭಾರತಿ ಶಾಲೆಯಲ್ಲಿ ಸಮಲೋಚನಾ ಸಭೆ

ಆಲಂಕಾರು: ಗ್ರಾಮ ವಿಕಾಸ-ಒಂದು ಪರಿಕಲ್ಪನೆ ಎಂಬ ವಿಶೇಷ ಕಾರ್ಯಕ್ರಮ ಆಲಂಕಾರು ಭಾರತಿ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣರಾವ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಗ್ರಾಮದಲ್ಲಿ ಅನಕ್ಷರತೆಯನ್ನು ದೂರಗೊಳಿಸಬೇಕು. ಆ ಗ್ರಾಮಗಳ ಸ್ವಚ್ಛತೆ ಎಲ್ಲರೂ ಮಾಡಬೇಕು ಎಂದರು. ಊರಿನ ಸಮಸ್ಯೆಗಳನ್ನು ಕೋರ್ಟು/ಕಛೇರಿಗಳಿಲ್ಲದೆಯೇ ಮುಗಿಸುವ ಪ್ರಯತ್ನಗಳು ಗ್ರಾಮದಲ್ಲಿ ಆಗಬೇಕು ಎಂದು ತಿಳಿಸಿದರು. ಮರಗಳನ್ನು ನೆಡುವ ಕಾರ್ಯದಲ್ಲಿ ನಮ್ಮನ್ನು ತೊಡಗಿಸಬೇಕು. ಆ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಎಲ್ಲರೂ ಇಚ್ಛಾ ಶಕ್ತಿಯಿಂದ ಭಾಗವಹಿಸಬೇಕು ಎಂದರು.

ಸಮಾರಂಭದಲ್ಲಿ ಶಾಲಾ ಮುಖ್ಯ ಮಾತಾಜಿ ಕನಕಲತಾ ಎಸ್.ಎನ್. ಭಟ್, ಗ್ರಾಮವಿಕಾಸನ ಪ್ರಮುಖ ಇಂದುಶೇಖರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ದಯಾನಂದಗೌಡ ಆಲಡ್ಕ, ಆಲಂಕಾರು ಬಿಜೆಪಿ ಗ್ರಾಮಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ದನಗೌಡ ಕಯ್ಯಪ್ಪೆ, ಆಲಂಕಾರುಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಗೌಡ ಬಡ್ಡಮೆ, ಶಾಲಾ ಆಡಳಿತ ಮಂಡಳಿ ಸದಸ್ಯ ಈಶ್ವರ ಭಟ್ ಕೊಂಡಾಡ್ತಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನ ಸೇವಾಪ್ರತಿನಿಧಿ ಶಾರದಾ ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ಭವಾನಿ, ಶಿಶುಮಂದಿರದ ಕಾರ್ಯದರ್ಶಿ ಜ್ಞಾನಪ್ರಾಭಾ, ಮಾತಾಜಿ ಅನಂತಾವತಿ, ಶಾಲಿನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಯದುಶ್ರೀ ಆನೆಗುಂಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತ ಮಾಡಿದರು. ಶಿಕ್ಷಕ ಚಂದ್ರಹಾಸ್ ಕೆ.ಸಿ. ಧನ್ಯವಾದ ನೀಡಿದರು.

Highslide for Wordpress Plugin