ಆಲಂಕಾರು;-ಇಲ್ಲಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿ -ಭಾರತಿ ಎಂಬ ಪತ್ರಿಕಾಸಂಘ ಸೋಮವಾರಉದ್ಘಾಟನೆಗೊಂಡಿತು.
ಕಡಬ ವಲಯ ಪತ್ರಕರ್ತರ ಸಂಘದಅಧ್ಯಕ್ಷಕೆ.ಎಸ್ ಬಾಲಕೃಷ್ಣ ಕೊಲ ದೀಪ ಬೆಳಗಿಸಿ ಸಂಘ ಉದ್ಘಾಟಿಸಿದರು. ನಂತರ ನಡೆದಕಾರ್ಯಕ್ರಮದಲ್ಲಿ ಸುದ್ದಿ ಭಾರತಿ ಸಂಘವನ್ನು ಉದ್ದೇಶಿಸಿ ಮಾತನಾಡಿದರು.
ಪತ್ರಿಕೆಗಳು ಸ್ವಾತಂತ್ಯ್ರಕಾಲದಲ್ಲಿ ಹೋರಾಟಗಾರರಿಗೆ ಪ್ರೇರಣೆ ನೀಡುವುದು,ನಾವು ಪತ್ರಿಕೆಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಮತ್ತು ಪತ್ರಿಕೆಯನ್ನು ಮಾರುಕಟ್ಟೆಯಿಂದಕೊಂಡುಓದುವ ಸಂಸ್ಕ್ರತಿ ನಮ್ಮದಾಗಬೇಕುಎಂದರು. ಜ್ಞಾನದದಾಹ ನಮ್ಮಲ್ಲಿರಬೇಕು.ಸಾಹಿತ್ಯದ ಬರವಣಿಗೆಗೆ ಪುಸ್ತಕ ಓದಬೇಕು. ಪುಸ್ತಕ ಓದದೆ ವರದಿ ಮಾಡಲು ಸಾಧ್ಯವಿಲ್ಲ ಎಂದುಅಭಿಪ್ರಾಯವ್ಯಕ್ತ ಪಡಿಸಿದರು.ನಂತರ ಸುದ್ದಿ ಭಾರತಿ ಸಂಘದವರುಆರಂಭಶೂರತ್ವದ ಕೆಲಸ ಮಾಡಬೇಡಿಎಂದು ಕಿವಿ ಮಾತು ಹೇಳಿದರು. ಭಾರತಿ ಶಾಲೆಯಿಂದ ಬಹಳಷ್ಟು ಲೇಖನ,ಕಥೆ, ವರದಿಗಳು ಬರುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಮುಖ್ಯಮಾತಾಜಿಕನಕಲತಾಎಸ್.ಎನ್ ಭಟ್‌ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಶ್ರೀಮಾನ್ ಯದುಶ್ರೀ ಆನೆಗುಂಡಿ, ಮಾತಾಜಿಆಶಾ.ಎನ್.ರೈ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಶ್ರೀಮಾನ್ ಚಂದ್ರಹಾಸ್ ಕೆ.ಸಿ ಸ್ವಾಗತಿಸಿ, ಶ್ರೀಮಾನ್ ಮಹೇಶ್.ಯನ್ ನಿರೂಪಿಸಿದರು.ಶ್ರೀಮಾನ್ ಹರೀಶ್‌ಧನ್ಯವಾದವನ್ನು ನೀಡಿದರು.