• 08251 236599
  • 08251 236444
  • vvsputtur@gmail.com

ಗ್ರಾಮ ವಿಕಾಸ ಸಮಾಲೋಚನಾ ಸಭೆ

ಪೆರ್ಲಂಪಾಡಿ : ಷಣ್ಮುಖದೇವ ಪ್ರೌಢಶಾಲೆಯನ್ನು ಕೇಂದ್ರವಾಗಿಟ್ಟು ನಡೆಯಲಿರುವ ಕೊಳ್ತಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಸಭೆ ಶಾಲಾ ಸಭಾಭವನದಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳು ಒಂದೊಂದು ಗ್ರಾಮ ಆಯ್ಕೆ ಮಾಡಿ ಗ್ರಾಮ ವಿಕಾಸ ಯೋಜನೆ ನಡೆಸುವ ತೀರ್ಮಾನದಂತೆ ಷಣ್ಮುಖದೇವ ಪ್ರೌಢಶಾಲೆ ಆಯ್ಕೆ ಮಾಡಿದ ಕೊಳ್ತಿಗೆ ಗ್ರಾಮದಲ್ಲಿ ಈ ಯೋಜನೆಯನ್ನು ಏಕೆ, ಹೇಗೆ ಜಾರಿಗೊಳಿಸಬಹುದು ಎಂಬ ವಿಸ್ತೃತ ಚರ್ಚೆ ನಡೆಸಲಾಯಿತು.

ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯಲ್ಲಿ ನಡೆದ ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಡಾ| ಕೃಷ್ಣ ಭಟ್ ಕೊಂಕೋಡಿ ಮಾಹಿತಿ ನೀಡಿದರು. ’ನಿಜವಾದ ರಾಮರಾಜ್ಯ ಗ್ರಾಮರಾಜ್ಯವನ್ನು ಅವಲಂಬಿಸಿದೆ ಎಂದು ಅಭಿಪ್ರಾಯಪಟ್ಟು, ಗಾಂಧಿ ಜಯಂತಿಯ ದಿನವೇ ಈ ಸಭೆ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಗ್ರಾಮ ವಿಕಾಸ ಅತಿ ಸುಲಭವೆಂಬುದನ್ನು ’ಇಡ್ಕಿದು ಗ್ರಾಮ’ ಉದಾಹರಣೆಯೊಂದಿಗೆ ವಿವರಿಸಿದರು. ಶಿಕ್ಷಣ, ಸಂಸ್ಕಾರ, ಆರೋಗ್ಯ, ಸ್ವಾವಲಂಬನೆ, ಮಹಿಳಾ ಕಾರ್ಯ, ಸುರಕ್ಷೆ ಮತ್ತು ಗೋಸಾಕಾಣಿಕೆ ಮೊದಲಾದ ಪ್ರಕಲ್ಪಗಳ ಚಟುವಟಿಕೆಗಳ ಬಗ್ಗೆ ಅಭಿಪ್ರಾಯ ವಿನಿಮಯ ನಡೆಯಿತು. ಕೊಳ್ತಿಗೆ ಗ್ರಾಮ ವಿಕಾಸ ಸಮಿತಿಯನ್ನು ರಚಿಸಲಾಯಿತು.

ಸಂಚಾಲಕರಾಗಿ ಶ್ರೀ ದಿವಾಕರ ರೈ ಕೆರೆಮೂಲೆ ಮತ್ತು ಶ್ರೀ ಕೆ. ಸುಬ್ಬಯ್ಯ ಗೌಡ, ಕುದ್ಕುಳಿ(ಶಿಕ್ಷಣ), ಶ್ರೀ ಕೆ. ಸೀತಾರಾಮ ಅಮಳ(ಸಂಸ್ಕಾರ), ಶ್ರೀಮತಿ ಶಾರದಾ ಪುಳ್ಳಾಜೆ(ಆರೋಗ್ಯ), ಶ್ರೀ ರಾಮಚಂದ್ರ ನಾಯಕ್, ಆನಡ್ಕ(ಸ್ವಾವಲಂಬನೆ), ಶ್ರೀ ವೆಂಕಪ್ಪ ನಾಯ್ಕ, ಕಣ್ಣಕಜೆ(ಸುರಕ್ಷೆ) ಮತ್ತು ಎಸ್.ಪಿ.ಮುರಲೀಧರ ಕೆಮ್ಮಾರ(ಗೋಸೇವೆ) ಇವರನ್ನೊಳಗೊಂಡ ’ಗ್ರಾಮವಿಕಾಸ ಸಮಿತಿ’ಯನ್ನು ರಚಿಸಲಾಯಿತು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಆರ್. ಲಕ್ಷ್ಮಣ ಗೌಡ ಕುಂಟಿಕಾನ, ಇವರ ಅಧ್ಷಕ್ಷತೆಯಲ್ಲಿ ಸಮಾರಂಭ ನಡೆಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಧನಂಜಯ ಪೂಜಾರಿ, ಶಾಲಾ ಸಂಚಾಲಕರಾದ ಶ್ರೀ ಗಣೇಶ ಭಟ್ ಮಾಫಲಮಜಲು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಧರ ಪೂಜಾರಿ ಚಾಲೆಪಡ್ಪು ಉಪಸ್ಥಿತರಿದ್ದರು. ಗ್ರಾಮದ ವಿವಿಧ ಸಂಘ ಸಂಸ್ಥೆಗಳ 40 ಜನ ಪ್ರತಿನಿಧಿಗಳು ಹಾಜರಿದ್ದರು. ಸಮಿತಿಯ ಮುಂದಿನ ಸಭೆ ದಿ.: 19-10-2015  ರಂದು ಪೂರ್ವಾಹ್ಣ 9.30 ಕ್ಕೆ ನಡೆಯಲಿರುವುದು. ಮುಖ್ಯೋಪಾಧ್ಯಾಯ ಶ್ರೀ ಲೋಕಯ್ಯ ಡಿ, ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Highslide for Wordpress Plugin