ದಿನಾಂಕ 31-08-2015 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶಾರದ ರಾವ್ ನಿವೃತ್ತ ಶಿಕ್ಷಕಿ ರಕ್ಷಬಂಧನದ ಮಹತ್ವವನ್ನು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಶ್ರೀರಾಮ ಪೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ರೋಹಿತ್ ಸಂಸ್ಕೃತ ಭಾಷೆಯ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿದರು. ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾ ಸ್ಫರ್ಧೆಯಲ್ಲಿ ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಪ್ರಸ್ತುತ ಸರಸ್ವತಿ ಕೋ-ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಇಲ್ಲಿ ವ್ಯವಸ್ಥಾಪಕರಾಗಿರುವ ಕಿರಣ್ ಕೊಟ್ಟರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಗಿರಿ ಸತೀಶ್ ಭಟ್, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅರ್ಚನಾ 7 ನೇ ತರಗತಿ ನಿರೂಪಿಸಿ, ಅಖಿಲ್ 7 ನೇ ತರಗತಿ ಸ್ವಾಗತಿಸಿ, ಕೀರ್ತಿ 7 ನೇ ತರಗತಿ ವಂದಿಸಿದರು.