ಮಂಗಳೂರು ವಿವಿ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆ: ವಿವೇಕಾನಂದ ಕಾಲೇಜಿಗೆ ಪ್ರಶಸ್ತಿ

Leaf
Leaf

ಪುತ್ತೂರು: ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ತೃತೀಯ ಬಿಸಿಎ ವಿಭಾಗದ ರಕ್ಷಾ.ಜಿ 87 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ದ್ವಿತೀಯ ಬಿಎ ವಿಭಾಗದ ರಿತೇಶ್ 81 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ತೃತೀಯ ಬಿಎ ವಿಭಾಗದ ಗಣೇಶ್ ಪ್ರಸಾದ್ 89 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಹಾಗೂ ದ್ವಿತೀಯ ಬಿಕಾಂ ನ ಆಶಾ ಕಿರಣ 71 ಕೆಜಿ ವಿಭಾಗದಲ್ಲಿ ಐದನೇಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್, ಡಾ.ಜ್ಯೋತಿಕುಮಾರಿ ಪಿ.ಸಿ ಹಾಗೂ ಯತೀಶ್ ಬಾರ್ತಿಕುಮೇರು ತರಬೇತಿಯನ್ನು ನೀಡಿರುತ್ತಾರೆ. ಸಾಧನೆಗೈದ ಕ್ರೀಡಾಪಟುಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕ ವೃಂದದವರು ವಿಶೇಷವಾಗಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

Related News

News
25/09/2026

ತೆಂಕಿಲ ವಿವೇಕಾನಂದ ಆ.ಮಾ. ಶಾಲೆಯ ಕ್ಷಮೇತ್ ಜೈನ್ ರಾಷ್ಟ್ರೀಯ ಮಟ್ಟಕ್ಕೆ.

Events
21/09/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)

News
18/08/2026

80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ- ಧ್ವಜಾರೋಹಣ