ತೆಂಕಿಲ ವಿವೇಕಾನಂದ ಆ.ಮಾ. ಶಾಲೆಯ ಕ್ಷಮೇತ್ ಜೈನ್ ರಾಷ್ಟ್ರೀಯ ಮಟ್ಟಕ್ಕೆ.

Leaf
Leaf

ಪುತ್ತೂರು: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ ವತಿಯಿಂದ ನಡೆಸಲ್ಪಡುವ 53 ನೇ ರಾಷ್ಟ್ರೀಯ ಬಾಲ ವೈಜ್ಞಾನಿಕ ಪ್ರದರ್ಶನಿ 2026 ರ ಅಂಗವಾಗಿ ನಡೆದ ರಾಜ್ಯ ಮಟ್ಟದ ಬಾಲ ವೈಜ್ಞಾನಿಕ ಪ್ರದರ್ಶನಿ 2025-26 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿ ಕ್ಷಮೇತ್ ಜೈನ್ (ಹನೀಶ್ ಕುಮಾರ್ ಜೈನ್ ಮತ್ತು ಶೃತಿ ಕುಮಾರಿ ದಂಪತಿಯ ಪುತ್ರ) ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಸೆ. 18, 19ರಂದು ನಡೆದ ಡಿಎಸ್‌ಇಆ‌ಟಿ ಹೊಸಕೆರೆಹಳ್ಳಿ ಮೂರನೇ ಹಂತ ಬನಶಂಕರಿ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ‘ಹೆಲ್ತ್ ಆ್ಯಂಡ್ ಹೈಜಿನ್’ ಎಂಬ ಉಪ ವಿಷಯದಲ್ಲಿ ಉತ್ತಮ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ರಾಷ್ಟ್ರಮಟ್ಟದ ಸ್ಪರ್ಧೆಗಳು ನವ ದೆಹಲಿಯಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

Related News

Events
21/09/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)

News
18/08/2026

80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ- ಧ್ವಜಾರೋಹಣ

News
21/07/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಅಧ್ಯಕ್ಷರಾಗಿ ಕೃಷ್ಣಕುಮಾರ್ ಶೆಟ್ಟಿ ಕಡಬ, ಕಾರ್ಯದರ್ಶಿಯಾಗಿ ವಿಜಯನಾರಾಯಣ ಕೆ.ಎಂ. ಆಯ್ಕೆ