ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕದಲ್ಲಿರುವ, ಹನೂಮಾನ್ ನಗರದ ಶ್ರೀರಾಮ ವಿದ್ಯಾಕೇಂದ್ರದ ಆವರಣದಲ್ಲಿದೆ.
ಸಂಪರ್ಕ ವಿಳಾಸ
ಮುಖ್ಯ ಮಾತಾಜಿ
ಶ್ರೀ ರಾಮ ಶಿಶು ಮಂದಿರ
ಕಲ್ಲಡ್ಕ, ಬಂಟ್ವಾಳ ತಾಲೂಕು, ದ.ಕ. 574285
ದೂರವಾಣಿ: 08255-275479
ಮಿಂಚಂಚೆ: info@srvk.org
ವೆಬ್‍ಸೈಟ್: www.srvk.org
ದಿನಾಂಕ: 3-7-2017 ರಂದು ಶುಕ್ರವಾರದಂದು ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಶಿಶುಮಂದಿರದ ವರ್ಷದ ಮೊದಲನೇ ಪಾಲಕರ ಸಭೆಯನ್ನು ಮಾಡಲಾಯಿತು. ಮಾರ್ಗದರ್ಶಕರಾಗಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀಯುತ ಡಾ|| ಪ್ರಭಾಕರ ಭಟ್ ಆಗಮಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಸೋಮಯಾಜಿ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಯುತ ವಸಂತ ಮಾಧವ ಉಪಸ್ಥಿತರಿದ್ದರು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾರಂಭದಲ್ಲಿ ಪಾಲಕರು ತಮ್ಮ ಮಕ್ಕಳಲ್ಲಿ ಆದಂತಹ ಬದಲಾವಣೆಗಳನ್ನು ಹೇಳುತ್ತಾ ಮಗುವಿನಲ್ಲಿ ಹಂಚಿ ತಿನ್ನುವ ಅಭ್ಯಾಸ, ನಡವಳಿಕೆಯಲ್ಲಿ ಬದಲಾವಣೆ, ಬಟ್ಟೆಗಳನ್ನು ನೀಟಾಗಿ ಮಡಚಿ ಇಡುವುದು, ಕೆಟ್ಟ ಶಬ್ಧಗಳಿಂದ ಬೈಯುವುದು ದೂರವಾಗಿದೆ. ತಿಳುವಳಿಕೆ ಬಂದಿದೆ. ಪೇಪರ್‌ನಲ್ಲಿರುವ ಅಕ್ಷರಗಳನ್ನು ಗುರುತಿಸಿ ಓದುತ್ತಾನೆ. ಹೀಗೆ ಅನೇಕ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಂತರ ಹಿರಿಯರು ಮಾರ್ಗದರ್ಶನ ಮಾಡುತ್ತಾ ಉಳಿದೆಲ್ಲಾ ಶಿಕ್ಷಣಗಳಿಗಿಂತ ಶಿಶುಶಿಕ್ಷಣ ಬೇರೆ ರೀತಿ ಇರುತ್ತದೆ. ಮಗುವನ್ನು ಮಗುವಾಗಿ ಬೆಳೆಯಲು ಶಿಶುಮಂದಿರ ಸಹಾಯ ಮಾಡುತ್ತದೆ. ಮನೆಯಲ್ಲಿ ಮಕ್ಕಳ ಚಟುವಟಿಕೆಗಳಿಗೆ ಸಹಾಯ ಮಾಡಿ ಶಿಶುಮಂದಿರದಲ್ಲಿ ಸ್ವಾತಂತ್ರ್ಯ ಇದೆ. ತಪ್ಪಿದಲ್ಲಿ ತಿದ್ದುವಂತಹ ಶಿಕ್ಷಣ ಸಿಗುತ್ತದೆ. 3 ವರ್ಷದಿಂದ 6 ವರ್ಷದವರೆಗಿನ ಮಕ್ಕಳು ಒಟ್ಟಿಗೆ ಇರುವುದರಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆಳೆಯುತ್ತಾರೆ. ಆಂಗ್ಲ ಮಾಧ್ಯಮಕ್ಕೆ ಮಾರು ಹೋಗದಿರಿ ಎಂದರು. ಒಟ್ಟು 101 ಪಾಲಕರು ಮತ್ತು 5 ಮಂದಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುಪ್ರಿಯಾ ಪ್ರಾರ್ಥಿಸಿ, ಶ್ರೀಮತಿ ಮಂಜುಳಾ ಸ್ವಾಗತಿಸಿ, ಶ್ರೀಮತಿ ಮಧುರ ನಿರೂಪಿಸಿ ಶ್ರೀಮತಿ ಲಕ್ಷ್ಮೀ ವಂದಿಸಿದರು.
ದಿನಾಂಕ 7-8-2015 ರಂದು ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ 11 ಪ್ರಥಮ, 3 ದ್ವಿತೀಯ, 1 ತೃತೀಯ ಹಾಗೂ ಕಿರಿಯ ವಿಭಾಗದಲ್ಲಿ 5 ಪ್ರಥಮ, 3 ದ್ವಿತೀಯ ಒಟ್ಟು 23 ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.