• 08251 236599
  • 08251 236444
  • vvsputtur@gmail.com

Sri Rama Pre University College, Hanuman Nagar, Kalladka

ಶ್ರೀ ರಾಮ ಪದವಿಪೂರ್ವ ಕಾಲೇಜು, ಹನುಮಾನ್ ನಗರ, ಕಲ್ಕಡ್ಕ

Phone No :

About

ಇತಿಹಾಸ:

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳಿಗೆ ಅನುಗುಣವಾಗಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ತತ್ವ ಆದರ್ಶಗಳ ಪಾರಂಪರಿಕ ಹಿನ್ನಲೆಯಲ್ಲಿ ಆರಂಭವಾದ ವಿದ್ಯಾಸಂಸ್ಥೆಯು ಶ್ರೀರಾಮ ವಿದ್ಯಾಕೇಂದ್ರ. ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಹಾರ್ದಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಶಿಕ್ಷಣ ಸಂಸ್ಥೆ ನಿರಂತರವಾಗಿ ಬೆಳೆದು ಬಂದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಣ್ಣ ಊರು ಕಲ್ಲಡ್ಕ. ಬಾಳ್ತಿಲ ಗ್ರಾಮದ ಹನುಮಾನ್ ನಗರದಲ್ಲಿರುವ ಪ್ರಶಾಂತ ವಾತವರಣದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಿವಿಧ ತರಗತಿಗಳು ಕಾರ್ಯನಿರ್ವಹಿಸುತ್ತಿವೆ.

ಶ್ರೀರಾಮ ಭಜನಾ ಮಂದಿರವು ಊರಿನ ಶ್ರದ್ಧಾ ಕೇಂದ್ರವಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆಯ ಸ್ಥಳವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆ ಕೇಂದ್ರವಾಗಿ ನೂರಾರು ಯುವಕರಿಗೆ ರಾಷ್ಟ್ರೀಯ ಕಾರ್ಯದಲ್ಲಿ ಸ್ಪೂರ್ತಿಯನ್ನು ನೀಡಿದೆ. ರಾಷ್ಟ್ರ ಜಾಗೃತಿಯ ಹೋರಾಟದಲ್ಲಿ ಹಲವು ನಾಯಕರನ್ನು ತೊಡಗಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ಇಲ್ಲಿಂದ ಸಿಕ್ಕಿದೆ.

1980ರಲ್ಲಿ  ಇಲ್ಲಿನ ಕಾರ್ಯಕರ್ತರ ಚಿಂತನೆಯ ಫಲವಾಗಿ ಊರಿಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಪ್ರೌಢಶಾಲೆಯ ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಸುತ್ತುಮುತ್ತಲಿನ ಜನ ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕೊಡಬೇಕೆಂಬ ಹೃದಯವಂತಿಕೆಯನ್ನು ಹೊಂದಿದ್ದರು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಆರಂಭದಲ್ಲಿ ಶಿಕ್ಷಣ ಸಂಸ್ಥೆಗೆ ಕಲ್ಲಡ್ಕ ಪೇಟೆಯ ಸಮೀಪದ ೯ ಎಕ್ರೆ ಸ್ಥಳವನ್ನು ಸಂಸ್ಥೆಗೆ ಪಡೆಯುವಲ್ಲಿ ಹಲವು ಹೋರಾಟವನ್ನೇ ಮಾಡಬೇಕಾಯಿತು. ಮತೀಯ ಹಾಗೂ ರಾಜಕೀಯ ಶಕ್ತಿಗಳ ಹಲವು ಅಡೆತಡೆಗಳನ್ನು ಎದುರಿಸಿ ಪ್ರಕೃತಿಯ ಸುಂದರ ಪರಿಸರದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀಶ್ರೀಶ್ರೀ ವಿಶ್ವೇಶ್ವತೀರ್ಥ ಶ್ರೀ ಪಾದಂಗಳವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯನ್ನು ಕಾರ್ಯಕ್ರಮಯು ನಡೆಯದಂತೆ ಮತೀಯ ರಾಜಕೀಯ ಒತ್ತಡಕ್ಕೆ ಮಣಿದು ಸರಕಾರವು ೧೪೪ನೇ ಸೆಕ್ಷನ್ ಜಾರಿಗೊಳಿಸಿದ್ದು, ಒಂದು ಕಹಿ ನೆನಪಾಗಿದೆ. ಕೊನೆಗೂ ಆಡಳಿತ ಮಂಡಳಿಯು ಯಶಸ್ವಿಯಾಗಿ ನಿವೇಶನವನ್ನು ಪಡೆದು ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣದ ಅನುಕೂಲವನ್ನು ಪೂರೈಸಿರುವುದು ಒಂದು ಇತಿಹಾಸ.

ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಸಿಗಬೇಕು ಆ ಮೂಲಕ ಸಮಾಜ ರಾಷ್ಟ್ರಕ್ಕೆ ಶಕ್ತಿಯಾಗಬೇಕು ಭಾರತಿಯ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಮಕ್ಕಳಿಗೆ ಸಿಗಬೇಕು ಎಂಬುದನ್ನು ವಿದ್ಯಾಕೇಂದ್ರದ ಆಡಳಿತ ಮಂಡಳಿಯು ಮನಗಂಡು ೧೯೮೮ರಲ್ಲಿ ಶ್ರೀರಾಮ ಶಿಶುಮಂದಿರವನ್ನು ಪ್ರಾರಂಭಿಸಿತು. ಸ್ಥಳೀಯರ ಉತ್ತಮ ಪ್ರತಿಕ್ರಿಯೆಯೊಂದಿಗೆ ೧೯೮೯ರಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯು ಆರಂಭಗೊಂಡಿತು.
ಹನುಮಾನ್ ನಗರದ ಪ್ರಕೃತಿಯ ಮಡಿಲಲ್ಲಿ ಗುರುಕುಲ ಮಾದರಿಯ ವಿಶಿಷ್ಟ ಕಟೀರಗಳಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯು ತರಗತಿಗಳನ್ನು ನಡೆಸುತ್ತಿದೆ.  ಮಕ್ಕಳಿಗೆ ಆನಂದದಾಯಕ ಕಲಿಕೆಗೆ ಬೇಕಾದ ಪರಿಸರವನ್ನು ಒದಗಿಸಿವೆ. ಶಾಲಾ ಉದ್ಯಾನ ಸಹಿತ ಪ್ರಾಣಿ ಪಕ್ಷಿಗಳ ಒಡನಾಟವು ಮಕ್ಕಳಲ್ಲಿ ಜೈವಿಕ ಪರಿಸರದ ಸಂಬಂಧವನ್ನು ಬೆಸೆಯುವಂತೆ ಮಾಡಿದೆ.

ಇಲ್ಲಿ ತರಗತಿಯ ಕೊಠಡಿಗಳು ಮಹಾ ಪುರುಷರ ನಿತ್ಯ ಸ್ಮರಣೆಗೆ ಅನುಕೂಲವಾಗುವಂತೆ ಶಬರಿ, ಅಬ್ಬಕ್ಕ, ಬಾಹುಬಲಿ, ಶಿವಾಜಿ, ಶ್ರೀಕೃಷ್ಣ, ಶಾರದಾ, ಕೇಶವ, ಮಾಧವ, ಯಾದವ, ಈ ಹೆಸರುಗಳಿಂದ ಗುರುತಿಸಲಾಗುತ್ತಿದೆ. ತರಗತಿಗಳಲ್ಲಿ ಕುಟೀರದ ಪರಿಸರವು ಗುರುಕುಲದಂತಿದ್ದು ಇಲ್ಲಿ ಶ್ರೀಮಾನ್ ಹಾಗೂ ಮಾತಾಜಿಯವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾರೆ. ಪುರಾತನವಾಗಿದ್ದು ದೇವ ಭಾಷೆಯೆಂದು ಪರಿಗಣಿಸಲ್ಪಟ್ಟ ಸಂಸ್ಕೃತವನ್ನು ಎಲ್ಲಾ ಮಕ್ಕಳಿಗೆ ಕಲಿಯುವ ಅವಕಾಶವಿದೆ.

ಪ್ರತಿದಿನ ಸರಸ್ವತಿ ವಂದನೆಯೊಂದಿಗೆ ನಿತ್ಯ ಪ್ರಾರ್ಥನೆ ನಡೆಯುತ್ತದೆ. ಭಗವದ್ಗೀತೆ, ವೇದಗಳ ಮಂತ್ರೋಚ್ಚಾರಣೆ, ಸ್ತೋತ್ರಗಳು ಹಾಗೂ ಸೂಕ್ತಿಗಳು ನಿತ್ಯ ಪ್ರಾರ್ಥನೆಯಲ್ಲಿ ಹೇಳುವ ಮೂಲಕ ಮಕ್ಕಳಲ್ಲಿ ಉತ್ತಮ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ.

ರಾಷ್ಟ್ರಿಯ ಹಬ್ಬಗಳು ಮತ್ತು ಧಾರ್ಮಿಕ ಹಬ್ಬಗಳ ಆಚರಣೆಯ ಮೂಲಕ ಸಂಸ್ಕೃತಿ ಹಾಗೂ ಭಾವೈಕ್ಯವನ್ನು ಮಕ್ಕಳು ಬೆಳೆಸಿಕೊಳ್ಳುವುದಕ್ಕೆ ಅವಕಾಶವಾಗಿದೆ.

ವಿದ್ಯಾಕೇಂದ್ರವು ಸಾಮಾಜಿಕ ಪರಿವರ್ತನೆಯ ಮತ್ತು ಸಂಸ್ಕಾರದ ಕೇಂದ್ರವಾಗಿರಬೇಕೆಂಬುದು ವಿದ್ಯಾಕೇಂದ್ರದ ಸಂಸ್ಥಾಪಕರ ಆಶಯವಾಗಿದೆ. ಅಶನ, ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಗಬೇಕು ಎಂಬ ಆರ್ಷೇಯ  ಚಿಂತನೆಯಂತೆ ವಿದ್ಯಾಕೇಂದ್ರವನ್ನು ನಡೆಸಿಕೊಂಡು ಬರಬೇಕೆಂದು ಆಡಳಿತ ಮಂಡಳಿಯ ದೂರದೃಷ್ಟಿಯಾಗಿದೆ. ಆ ಹಿನ್ನಲೆಯಲ್ಲಿ ಸಜ್ಜನರ ಸಹಕಾರ ಮತ್ತು ಕೊಡುಗೈ ದಾನಿಗಳ ಉದಾರತೆಯಿಂದ ಶಿಕ್ಷಣ ಸಂಸ್ಥೆಯು ವಿವಿಧ ಹಂತಗಳಲ್ಲಿ ವಿಸ್ತರಿಸಿಕೊಳ್ಳುತ್ತಿದೆ.

2006ರಲ್ಲಿ ಪದವಿ ಪೂರ್ವ ತರಗತಿಗಳು ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳೊಂದಿಗೆ ಆರಂಭಗೊಂಡಿದೆ.2009ರಲ್ಲಿ ಬಿ.ಬಿ.ಯಂ ಮತ್ತು ಬಿ.ಕಾಂ ಪದವಿ ತರಗತಿಗಳು ಆರಂಭಗೊಂಡಿವೆ.
ಸುಮಾರು 20ಎಕ್ರೆ ಪ್ರದೇಶದಲ್ಲಿ ವಿಶಾಲ ಆಟದ ಮೈದಾನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಹಾಗೂ ಪದವಿ ತರಗತಿಳಿಗೆ ಪ್ರತ್ಯೇಕ ಕಟ್ಟಡಗಳು ಇವೆ. ವೇದವ್ಯಾಸ, ಮಧುಕರ, ಅಜಿತ ಸಭಾಂಗಣಗಳು ಸಾಮೂಹಿಕ ಪ್ರಾರ್ಥನೆ ಹಾಗೂ ಸಭೆ ಸಮಾರಂಭಗಳಿಗಾಗಿ ನಿರ್ಮಾಣವಾಗಿದೆ.

———————————————-

ಆಡಳಿತ ಮಂಡಳಿ

ಕ್ರ.ಸಂ. ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ
1 ಶ್ರೀ ನಾರಾಯಣ ಸೋಮಯಾಜಿ ಅಧ್ಯಕ್ಷರು
2 ಶ್ರೀ ಡಾ. ಪ್ರಭಾಕರ ಭಟ್ ಕಾರ್ಯದರ್ಶಿ
3 ಶ್ರೀ ಪದ್ಮನಾಭ ಕೊಟ್ಟಾರಿ ಸದಸ್ಯರು
4 ಶ್ರೀ ಕಜಂಪಾಡಿ ಸುಬ್ರಹಣ್ಯ ಭಟ್ ಸದಸ್ಯರು
5 ಶ್ರೀ ಜಯಶ್ಯಾಮ ಸದಸ್ಯರು
6 ಶ್ರೀ ಗೋಪಾಲ ಶೆಣೈ ಸದಸ್ಯರು
7 ಶ್ರೀ ಮಹೇಶ್ವರ ಭಟ್ ಸದಸ್ಯರು
8 ಶ್ರೀ ನಳಿನ್ ಕುಮಾರ್ ಕಟೀಲ್ ಸದಸ್ಯರು
9 ಶ್ರೀ ವಿಪಿನ್ ಕುಮಾರ್ ಸದಸ್ಯರು
10
ಶ್ರೀ ಜ್ಯೋತಿ ನಾಯಕ್
ಸದಸ್ಯರು
11 ಶ್ರೀಮತಿ ಮಲ್ಲಿಕಾ ಶೆಟ್ಟಿ ಸದಸ್ಯರು
12 ಶ್ರೀ ಜಗದೀಶ್ ಸದಸ್ಯರು
13 ಶ್ರೀ ನಾಗೇಶ್ ಸದಸ್ಯರು
14 ಶ್ರೀ ಚೆನ್ನಪ್ಪ ಕೋಟ್ಯಾನ್ ಸದಸ್ಯರು
15 ಸದಸ್ಯರು

 ಶಾಲಾಭಿವೃದ್ದಿ ಸಮಿತಿ

ಕ್ರ.ಸಂ. ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ
1 ಶ್ರೀ ಸತೀಶ ಭಟ್ ಶಿವಗಿರಿ ಅಧ್ಯಕ್ಷರು
2 ಶ್ರೀ ಜಯರಾಮ ರೈ ಕಾರ್ಯದರ್ಶಿ
3 ಶ್ರೀ ರಾಕೊಡಿ   ಈಶ್ವರ ಭಟ್ ಸದಸ್ಯರು
4 ಶ್ರೀ  ಗಿಲ್ಕಿನ್ಜ ಕೃಷ್ಣ  ಭಟ್ ಸದಸ್ಯರು
5 ಶ್ರೀ ಶಂಬು ಭಟ್ ಸದಸ್ಯರು
6 ಶ್ರೀ ಪದ್ಮನಾಭ ಪಿ .ಕೆ ಸದಸ್ಯರು
7 ಶ್ರೀ ಸುಬ್ರಹ್ಮಣ್ಯ ಭಟ್ ಸದಸ್ಯರು
8 ಶ್ರೀ ಆನಂದ ಶೆಟ್ಟಿ ಸದಸ್ಯರು
9 ಶ್ರೀ ನಾಗರಾಜ ಸದಸ್ಯರು
10
ಶ್ರೀ ನಾರಾಯಣ ಗೌಡ
ಸದಸ್ಯರು
11 ಶ್ರೀ ಲಕ್ಷ್ಮಣ ಸದಸ್ಯರು
12 ಶ್ರೀ ಜಯರಾಮ ಸುದೆಕಾರ್ ಸದಸ್ಯರು
13 ಶ್ರೀ ದಯಾನಂದ ಸದಸ್ಯರು
14 ಶ್ರೀ ಶಿವಶಂಕರ ಭಟ್ ಸದಸ್ಯರು
15 ಶ್ರೀಮತಿ ಪುಷ್ಪ ಪರ್ಕಳ ಸದಸ್ಯರು
16 ಶ್ರೀಮತಿ ಚಿನ್ನಮ್ಮ ಸದಸ್ಯರು

Photos

PU-College-Photo

News & Events

ರಕ್ಷಾಬಂಧನ

ನಿರ್ಮಲ ಪ್ರೇಮ ಭ್ರಾತೃತ್ವದ ಸಂಕೇತ ರಕ್ಷಾಬಂಧನ, ಬಿಡಿಬಿಡಿಯಾದ ರೇಷ್ಮೆಯ ಎಸಳುಗಳನ್ನು ದಾರದಿಂದ ಪೋಣಿಸಿದಾಗ ಅದು ರಕ್ಷೆಯಾಗುತ್ತದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ರಾಜರಾಮವರ್ಮ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

1-(99)

1-(143)

ಶ್ರೀರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು – ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದಕ್ಕೆ, ವಿದ್ಯಾರ್ಥಿ-ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ರಕ್ಷಾಬಂಧನದ ಶುಭಾಶಯ ಕೋರಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ, ಹಿಂದಿ ಉಪನ್ಯಾಸಕಿ ಶೋಭಾ ವಿ.ಶೆಟ್ಟಿ ಉಪಸ್ಥಿತರಿದ್ದರು.

ಭಾರತೀಯ ಸೇನೆ ಮತ್ತು ರಕ್ಷಣಾ ಪಡೆ – ಮಾಹಿತಿ ಕಾರ್ಯಾಗಾರ

ಕಲ್ಲಡ್ಕ ಶ್ರೀ ರಾಮ ಪದವಿ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ನಡೆದ ಭಾರತೀಯ ಸೇನೆ ಮತ್ತು ರಕ್ಷಣಾ ಪಡೆಯ ಎಂಬ ವಿಷಯದ ಬಗ್ಗೆ ಯುವ ಬ್ರಿಗೇಡ್‌ಯರ್ ಮಹಾರಕ್ಷಕ ವಿಭಾಗದ ರಾಜ್ಯ ಸಂಚಾಲಕರಾದ ಸುಮುಖ ಬೆಲಗೇರಿ ಇವರು ಮಾಹಿತಿ ನೀಡಿ ಮಾತನಾಡಿದ ಅವರು ಕರ್ನಾಟಕದಿಂದ 100 ವಿದ್ಯಾರ್ಥಿಗಳನ್ನು ಸೇನೆಗೆ ಸೇರಿಸುವುದು ಯುವ ಬ್ರಿಗೇಡ್‌ಯರ್‌ನ ಮುಖ್ಯ ಗುರಿಯಾಗಿದೆ. ದೇಶ ಕಟ್ಟುವ, ದೇಶದ ರಕ್ಷಣೆಗೆ ಯುವ ಪೀಳಿಗೆಯು ಮುಂದಾಗಬೇಕು ಎನ್ನುವುದೇ ನಮ್ಮ ತಂಡದ ಉದ್ದೇಶ ಎಂದರು.

DSCN0394

DSCN0390

ಈ ಸಂದರ್ಭದಲ್ಲಿ ಯುವ ಬ್ರಿಗೇಡಿಯರ್‌ನ ಸದ್ಯಸರುಗಳಾದ ಹೇಮಂತ್ ಕುಮಾರ್, ಸಮಿತ್ ರಾವ್, ಮೋಹನ್‌ಕುಮಾರ್, ಪಾಲಾಕ್ಷ ಉಪಸ್ಥಿತರಿದ್ದರು.  ಇತಿಹಾಸ ಉಪನ್ಯಾಸಕಿ ರೇಖಾ ಸ್ವಾಗತಿಸಿ, ವಂದಿಸಿದರು.

ರಕ್ಷಾಬಂಧನ

ರಕ್ಷಾಬಂಧನವು ಹಿಂದು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುತ್ತಾ ಒಗ್ಗಟ್ಟಿನ ಚಿಂತನೆಯೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮುನ್ನುಡಿಯಾಗಿದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿ ಸದೃಢ ಸಮಾಜವನ್ನು ಕಟ್ಟಲು ಇಂತಹ ದಿನಗಳು ಸಹಾಯಕವಾಗುತ್ತದೆ ಎಂದು ಶ್ರೀರಾಮ ಪದವಿ ಪೂರ್ವ ಕಾಲೇಜಿನ ಗಣಕ ಯಂತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ರಶ್ಮಿ ಹೇಳಿದರು.

DSCN9933

DSCN9950

DSCN9952

ಅವರು ಶ್ರೀರಾಮ ಪದವಿ ಕಾಲೇಜಿನ ಪ್ರಣವ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು – ಉಪನ್ಯಾಸಕ ಮತ್ತು ಉಪನ್ಯಾಕೇತರ ವೃಂದಕ್ಕೆ, ವಿದ್ಯಾರ್ಥಿ-ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ, ಸಿಹಿ ತಿನ್ನಿಸಿ ರಕ್ಷಾಬಂಧನದ ಶುಭಾಶಯ ಕೋರಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ , ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಮೋಹಿನಿ ಎ. ಬಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಶ್ರೀ ರಾಮ್ ವಂದಿಸಿ, ಜೊತೆ ಕಾರ್ಯದರ್ಶಿ ಶರಣ್ ಕುಮಾರ್ ಸ್ವಾಗತಿಸಿ, ವಿದ್ಯಾರ್ಥಿ ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.

ಓಣಂ ಆಚರಣೆ

ದಿನಾಂಕ 28-08-2015 ರ ಶುಕ್ರವಾರದಂದು ಪದವಿ ವಿಭಾಗದ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ದೀಪ ಬೆಳಗಿಸುವುದರ ಮೂಲಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಓಣಂ ಕಾರ್ಯಕ್ರಮವನ್ನು ಆಚರಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

onam

ಪೋಷಕರ ಸಮಾವೇಶ

ಬಂಟ್ವಾಳ,ಆಗಸ್ಟ್ 24: ಜಗತ್ತು ಆಧುನಿಕ ದೃಷ್ಟಿಕೋನದತ್ತ ಚಿತ್ತ ಹಾಯಿಸುತ್ತಿದೆ . ಆಚಾರ ವಿಚಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಉತ್ತಮ ಶಿಕ್ಷಣ ನೀಡುವಲ್ಲಿ ಸಂಸ್ಥೆ ಸತತ ಪ್ರಯತ್ನ ಮಾಡುತ್ತಿದೆ. ಪೋಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಯು ಕಲಿತ ವಿಚಾರವನ್ನು ತನ್ನೊಳಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಉನ್ನತಿ ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಹಾಗೂ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್‍ಯಕಾರಿಣಿ ಸದಸ್ಯ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಇವರು ಶ್ರೀರಾಮ ಪದವಿ ಕಾಲೇಜಿನ ಪಾಲಕರ ಸಮಾವೇಶವನ್ಮು ಉದ್ದೇಶಿಸಿ ಮಾತನಾಡಿದರು.

DSCN0418

ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಶ್ರೀವಿವೇಕ ಚೈತನ್ಯಾನಂದ ಜೀ ಮಹಾರಾಜ್, ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಾಹಣಾಧಿಕಾರಿ ವಸಂತ ಮಾಧವ ಹಾಗೂ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.

DSCN0417

ವಿದ್ಯಾರ್ಥಿಗಳ ಅಭಿವೃದ್ಧಿಯ ಧ್ಯೇಯದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಕುಂದುಕೊರತಗಳ ಹಾಗೂ ಅವಶ್ಯಕತೆಗಳ ಬಗ್ಗೆ , ಅಭಿವೃದ್ಧಿಗೆ ಪೂರಕವಾದ ಮಾಹಿತಿಗಳನ್ನು ಪೋಷಕರು ಚರ್ಚಿಸಿದರು.

ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮೀ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಪ್ರಾರ್ಥಿಸಿ, ವಾಣಿಜ್ಯ ಉಪನ್ಯಾಸಕಿ ಶೈಲಜಾ ವಂದಿಸಿ, ಕನ್ನಡ ಉಪನ್ಯಾಸಕ ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.

ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್‌ನ ಅಗತ್ಯತೆಯ ಮಾಹಿತಿ ಕಾರ್ಯಾಗಾರ

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್‌ನ ಅಗತ್ಯತೆಯ ಮಾಹಿತಿಯನ್ನು ಮಂಗಳೂರಿನ ಅರುಣ್ ಅಸೋಸಿಯೇಟ್‌ನ ಮಾಲಕರಾದ ಅರುಣ್ ಪ್ರಸಾದ್ ರೈ ನೀಡಿದರು.

passpoert

ಬಳಿಕ ಮಾತನಾಡಿದ ಅವರು ಪಾನ್‌ಕಾರ್ಡ್ ಹಣದ ವಹಿವಾಟುನ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ಇದನ್ನು ನಾವು ಒಂದು ಗುರುತಿನ ಚೀಟಿಯಾಗಿ ಬಳಸಬಹುದು ಎಂದರು. ವೇದಿಕೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಎನ್.ಎಸ್.ಎಸ್. ಘಟಕಾಧಿಕಾರಿ ಹರೀಶ್ ಉಪಸ್ಥಿತರಿದ್ದರು. ಸುಮಾರು 80 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪಾನ್ ಕಾರ್ಡ್‌ನ ಪ್ರಯೋಜನವನ್ನು ಮತ್ತು 10 ವಿದ್ಯಾರ್ಥಿಗಳು ಪಾಸ್‌ಪೋರ್ಟ್‌ನ ಸದುಪಯೋಗವನ್ನು ಪಡೆದರು.

ಪ್ರದೀಪ್ತ ಸಾಂಸ್ಕೃತಿಕ ಸಂಘ ಉದ್ಘಾಟನೆ 

ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಂದೇಶ ನೀಡುವ ಚಿತ್ರವನ್ನು ಪರದೆ ಸರಿಸುವ ಮೂಲಕ ಉಧ್ಘಾಟಿಸಿದರು.

pradeeptha

ಅದೇ ದಿನ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಲೋಕ ಹಿತಂ ಮಮಕರಣೀಯಂ ಎಂಬ ಸಂದೇಶದಲ್ಲಿ ವಿವಿಧ ರೀತಿಯ ಲೋಕಕ್ಕೇ ಉತ್ತಮ ಮಾಹಿತಿ ನೀಡುವ ಸ್ವಚ್ಚತೆ, ತಾಯಿ ಬಾಂದವ್ಯ, ವಿವಿಧ ನ್ಯತ್ಯ, ನಾಟಕಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಡಾ. ಕಮಲ .ಪ್ರಭಾಕರ ಭಟ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿ, ನಿರೂಪಿಸಿದರು.

ಕಾರ್ಗಿಲ್ ವಿಜಯೋತ್ಸವ

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಸ್ಮರಣೆ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಹಿಸಿರುತ್ತಾರೆ. ಮುಖ್ಯ ಅತಿಥಿಯಾಗಿ ಬಂದಿರುವವರು ಆಶಾಪ್ರಸಾದ್ ರೈ, ವಿಲಾಸ್ ನಾಯಕ್ ಉಡುಪಿ, ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.

DSCN0025

ಈ ಸಂದರ್ಭದಲ್ಲಿ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಷ ಮೌನಪ್ರಾರ್ಥನೆಯೊಂದಿಗೆ ವಿಜಯ ದಿವಸವನ್ನು ಆಚರಿಸಲಾಯಿತು. ಆಶಾಪ್ರಸಾದ್ ರೈ ಯವರು ಹಲವಾರು ವೀರಯೋಧರ ಕಥೆಗಳನ್ನು ತಿಳಿಸುತ್ತಾ ಇಂತಹ ಕಾರ್ಯಕ್ರಮವನ್ನು ಮಾಡಿ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಬೇಕೆಂದು ತಿಳಿಸಿಕೊಟ್ಟರು.

ಮಾನವಿಕ ಸಂಘದ ವಿದ್ಯಾರ್ಥಿನಿಯರಿಂದ ದೇಶ ಭಕ್ತಿಗೀತೆಯನ್ನು ಹಾಡಿದರು.ಇತಿಹಾಸ ಉಪನ್ಯಾಸಕಿ ಶ್ರೀಮತಿ ರೇಖಾ ಸ್ವಾಗತಿಸಿ, ವಿದ್ಯಾರ್ಥಿ ಭಾಗ್ಯಶ್ರೀ ನಿರೂಪಿಸಿ, ಹರ್ಷಿತಾ ಕುಮಾರಿ ವಂದಿಸಿದರು.

ಭಗೀರಥ ಪಾರಂಪರಿಕ ಕೂಟದ ಉದ್ಘಾಟನೆ

ಇತಿಹಾಸ ಕೇವಲ ಪರೀಕ್ಷೆಗಾಗಿ ಓದುವ ವಿಷಯ ಅಲ್ಲ. ಮಾನವನ ವರ್ತಮಾನ ಸರಿಯಾಗಿರಬೇಕಾದರೆ ಇತಿಹಾಸ ಅಧ್ಯಯನದ ಅಗತ್ಯವಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಸಹಪ್ರಾಧ್ಯಾಪಕರಾದ ಸುರೇಶ್ ರೈ.ಕೆ. ತಿಳಿಸಿದರು. ಅವರು ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಭಗೀರಥ ಪಾರಂಪರಿಕ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಉಪನ್ಯಾಸ ನೀಡಿದರು.

ಅವರು ಭಾರತದ ಇತಿಹಾಸವನ್ನು ಪ್ರಸ್ತಾಪಿಸುತ್ತಾ ಭಾರತದ ಬಗ್ಗೆ ಇರುವ ಐತಿಹಾಸಿಕ ಬೆಳವಣಿಗೆಗಳ ಕುರಿತಾಗಿ ಉಪನ್ಯಾಸ ನೀಡಿದರು.

IMG_20150722_153755

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಮಾತನಾಡಿ ಭಾರತ ಒಂದು ಮೃತ್ಯುಂಜಯ ರಾಷ್ಟ್ರ. ಅದಕ್ಕೆ ಕಾರಣ ಭಾರತದ ಹಿರಿಯರು ನಡೆದುಕೊಂಡು ಬಂದ ಪರಂಪರೆ.ಇತಿಹಾಸದಲ್ಲಿ ವಿಕೃತಿ ಇದ್ದರೂ ನಾವು ಅದನ್ನು ಮನಗಂಡು ಮುಂದೆ ಸುಗಮವಾದ ನಡೆ ಇರುವಂತೆ ನೋಡಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಹಾಗೂ ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ವಸಂತ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಗೀರಥ ಪಾರಂಪರಿಕ ಕೂಟದ ನಿರ್ದೇಶಕರಾಗಿರುವ ಕಾಲೇಜಿನ ಇತಿಹಾಸ ಉಪನ್ಯಾಸಕ ತಿರುಮಲೇಶ್ವರ ಪ್ರಶಾಂತ್ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶೋಭಿತ್ ವಂದಿಸಿ, ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

ಸಹಸ್ರ ವೃಕ್ಷಾರೋಪಣ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಠಾರದಲ್ಲಿ ಲಯನ್ಸ್ ಕ್ಲಬ್‌ನ 100 ವರ್ಷಾಚರಣೆಯ ಸಂದರ್ಭ ನಿಮಿತ್ತ ಗಿಡನೆಡುವ ಕಾರ್ಯಕ್ರಮವು ದಿನಾಂಕ 15-7-2015 ರಂದು ನಡೆಯಿತು.

ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ಡಾ|| ಪ್ರಭಾಕರ ಭಟ್ ಇವರು ಮಾತನಾಡಿ ಪ್ರಕೃತಿಯ ಸಮತೋಲನತೆಯನ್ನು ಕಾಯ್ದುಕೊಳ್ಳುವುದರ ಬಗ್ಗೆ ಅರಿವು ಮೂಡಿಸಿದರು. ಪರಿಸರ ನಮಗೆ ಜೀವಕೊಟ್ಟರೆ ನಾವು ಅದಕ್ಕೆ ಜೀವನಾಶಕಗಳನ್ನು ನೀಡಿ ಮರಣಶಾಸನವನ್ನು ಬರೆಯುತ್ತಿದ್ದೇವೆ. ವೈಭವದ ಜೀವನಕ್ಕಾಗಿ ಪ್ರಕೃತಿಯನ್ನು ನಾಶಮಾಡುತ್ತಾ ನಮ್ಮ ಅಳಿವಿಗೆ ನಾವೇ ಕಾರಣಕರ್ತರಾಗುತ್ತಿದ್ದೇವೆ. ನಮ್ಮೊಳಗೆ ಜಾಗೃತಿಯಾಗದ ಹೊರತು ಸಮೃದ್ಧ ಪರಿಸರ ನಿರ್ಮಾಣ ಅಸಾಧ್ಯ. ಪ್ರಕೃತಿಯನ್ನು ಬೆಳೆಸುತ್ತಾ ಜೀವನವನ್ನೂ ಸಮೃದ್ಧಗೊಳಿಸೋಣ ಎಂದರು.

lion-stage

ಕಾರ್ಯಕ್ರಮದ ಮುಖ್ಯ ಅತಿಥಿ ಲಯನ್ಸ್ ಗವರ್ನರ್ ಕವಿತಾ ಎಸ್. ಶಾಸ್ತ್ರಿ ಮಾತನಾಡಿ ಪ್ರಕೃತಿಗೆ ನಮ್ಮ ಅಗತ್ಯತೆ ಇರುವುದಿಲ್ಲ. ಆದರೆ ನಮಗೆ ಪ್ರಕೃತಿಯ ಅಗತ್ಯವಿದೆ. ಇದೆಲ್ಲವೂ ನಮ್ಮ ಕೈಯಲ್ಲಿದೆ. ಯುವ ಜನತೆಯೂ ಈ ಪೃಕೃತಿಯನ್ನು ಬೆಳೆಸುವ ನಿಟ್ಟಿನಿಂದ ಆಸಕ್ತಿಯಿಂದ ಮುಂದುವರೆಯಬೇಕಾಗಿದೆ ಎಂದು ಕರೆ ನೀಡಿದರು.

ಪರಿಸರ ಸಂರಕ್ಷಣೆ ಎಂದರೆ ಭೂಮಿ ತಾಯಿಯ ರಕ್ಷಣೆ ಇಂದು ಪಾಶ್ಚಾತ್ಯರು ಕೂಡ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಎಲ್ಲಾ ಜೀವರಾಶಿಗಳನ್ನು ದೇವರೆಂದು ಪೂಜಿಸುವ ಭಾರತೀಯರೇ ಇಂದು ಪರಿಸರದ ಬಗ್ಗೆ ಕಾಳಜಿ ಇಲ್ಲದವರಾಗಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿ ಪೇಪರ್ ಬಳಕೆಯಾಗುತ್ತಿದೆ ಆದರೆ ಭಾರತದಲ್ಲಿ ಇಂದು ಪ್ಲಾಸ್ಟಿಕ್ ಬಳಕೆಯೇ ಜಾಸ್ತಿಯಾಗಿದೆ ಇದನ್ನು ಬದಲಿಸಬೇಕಾಗಿದೆ ಎಂದರು.

ಲಯನ್ಸ್‌ನ ಮಾಜಿ ಗವರ್ನರ್ ಲಯನ್ ಕೆ.ಸಿ.ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ ಲಯನ್ಸ್ ಕ್ಲಬ್‌ನ ನಾಲ್ಕು ಧೋರಣೆಗಳಲ್ಲಿ ಪ್ರಮುಖವಾದುದು ಪರಿಸರ ಸಂರಕ್ಷಣೆ ಅದಕ್ಕಾಗಿ ಒಟ್ಟು 1000 ಗಿಡಗಳನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ನೆಡುವ ಬಗ್ಗೆ ಪ್ರಸ್ತಾಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ನಾರಾಯಣ ಸೋಮಯಾಜಿ ವಹಿಸಿದ್ದರು.

ವೇದಿಕೆಯಲ್ಲಿ ಪರಿಸರ ಪ್ರೇಮಿ, ಸಸ್ಯ ತಜ್ಞ ದಿನೇಶ್ ನಾಯಕ್, ಲಯನ್ ಆಶಾ ಡಿ.ಶೆಟ್ಟಿ ಮಾಡಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಸಂತ ಮಾಧವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ 25 ಮಂದಿ ಸದಸ್ಯರು, ಸುಮಾರು 500 ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕಾಲೇಜಿನ ದೈನಂದಿನ ಪ್ರಾರ್ಥನೆ ಸರಸ್ವತಿ ವಂದನೆಯನ್ನು ಹಾಡಿದರು. ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ಲಯನ್ ಆಶಾ ಡಿ.ಶೆಟ್ಟಿ ವಂದಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಎನ್.ಎಸ್.ಎಸ್. ಉದ್ಘಾಟನೆ

ಯುವ ಜನತೆಯನ್ನು ಧ್ಯೇಯವಾಗಿಟ್ಟುಕೊಂಡು ಆರಂಭವಾದ ಯೋಜನೆಯೇ ರಾಷ್ಟ್ರೀಯ ಸೇವಾಯೋಜನೆ. ದೇವಸ್ಥಾನದಲ್ಲಿ ಉಳಿ ಪೆಟ್ಟು ತಿಂದ ಕಲ್ಲು ಹೇಗೆ ಒಂದು ಸುಂದರ ಶಿಲೆಯಾಗಿ ರೂಪುಗೊಂಡು ಎಲ್ಲರೂ ಪೂಜಿಸುವಂತಾಗುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ತಮ್ಮನ್ನು ತಾವು ಎನ್.ಎಸ್.ಎಸ್.ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಆದರ್ಶ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಅವಕಾಶಗಳನ್ನು ಜೀವನದಲ್ಲಿ ಉಪಯೋಗಿಸಿದಲ್ಲಿ ಅವರು ಮುಂದೆ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದು ಎಸ್.ವಿ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಕಿಟ್ಟು ರಾಮಕುಂಜ ಹೇಳಿದರು.

DSC06980

ಇವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2015-16 ನೇ ಸಾಲಿನ ಕಾಲೇಜಿನ ಎನ್.ಎಸ್.ಎಸ್. ಘಟಕವನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟನೆಗೈದು ಮಾತನಾಡಿದರು.

ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಸಂತ ಬಲ್ಲಾಳ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಕೃಷ್ಣಪ್ರಸಾದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್.ನ ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡಿದರು. ಎನ್.ಎಸ್.ಎಸ್.ನ ಸಂಯೋಜನಾಧಿಕಾರಿಯಾದ ಅರ್ಥಶಾಸ್ತ್ರ ಉಪನ್ಯಾಸಕ ಹರೀಶ್ ವಿಟ್ಲ ಸ್ವಾಗತಿಸಿ, ರಾಜಕೀಯಶಾಸ್ತ್ರ ಉಪನ್ಯಾಸಕಿ ಸುನೀತಾ ವಂದಿಸಿ, ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಭೋಧ ವಾಣಿಜ್ಯ ಸಂಘ ಉದ್ಘಾಟನೆ

ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಾಧಾನ್ಯತೆ ಹೆಚ್ಚು. ಇಂದು ಕರ್ನಾಟಕದಲ್ಲಿಯೇ ಸುಮಾರು 2 ಲಕ್ಷಕ್ಕೂ ಮೀರಿ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ.

ಪದವಿ ಶಿಕ್ಷಣ ಮುಗಿಸಿದ ನಂತರ ಮುಂದೇನು? ಎಂಬ ಪ್ರಶ್ನೆ ಕಾಡುವುದು ಸಹಜ ಆ ನಿಟ್ಟಿನಲ್ಲಿ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾಗಿರುವ ವೃತ್ತಿ ಶಿಕ್ಷಣದ ತರಬೇತಿ ಕೊಡುವ ವಿವಿಧ ಕಾರ್ಯಕ್ರಮ ಮಾಡಿದಾಗ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.

commerce-club

ಹಣ ಸಂಪಾದನೆ ಮಾತ್ರ ಮೂಲ ಮಂತ್ರವಾಗದೆ ಸಾಮಾಜಿಕ ದೃಷ್ಟಿಕೋನದಿಂದಲೂ ವಿದ್ಯಾರ್ಥಿಗಳ ಯೋಚನೆ ಮಾಡುವವರಾಗಬೇಕು ಎಂದು ಉಪ್ಪಿನಂಗಡಿ ಪದವಿಪೂರ್ವ ವಿದ್ಯಾಲಯದ ಲೋಕೇಶ್‌ನಾಥ್ ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭೋಧ ವಾಣಿಜ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ವಾಣಿಜ್ಯದ ಬೇರೆ ಬೇರೆ ವಿಭಾಗದಲ್ಲಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಒಂದೇ ಕ್ಷೇತ್ರದಲ್ಲಿ ಎಲ್ಲರೂ ಮುನ್ನುಗ್ಗಿದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗದ ಅಭಾವ ಕಂಡುಬರುತ್ತದೆ. ಆದ್ದರಿಂದ ಐ.ಎ.ಎಸ್., ಐ.ಪಿ.ಎಸ್. ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ಮುಂದುವರಿಯಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಿ.ಇ.ಒ ವಸಂತ ಮಾಧವ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ವದೇಶಿ ವಿಷಯದ ಬಗ್ಗೆ ಚಿಂತನೆಯು ಬೆಳೆಯಬೇಕು. ಸಾಮಾಜಿಕ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು ಆಗ ಮಾತ್ರ ನಮ್ಮ ದೇಶದಲ್ಲಿ ಇನ್ನು ಕಂಪೆನಿಗಳು ತಲೆ ಎತ್ತುವುದು ಎಂದರು.

ವೇದಿಕೆಯಲ್ಲಿ ಪ್ರಾಂಶುಪಾಲ ಕೃಷ್ಣಪ್ರಸಾದ ಹಾಗೂ ವಾಣಿಜ್ಯ ಉಪನ್ಯಾಸಕಿ ಸೌಮ್ಯಶ್ರೀ ಜೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ನಿಶಾ ಕುಮಾರಿ ಸ್ವಾಗತಿಸಿ, ಸೂರಜ್ ವಂದಿಸಿ ನಿತಿನ್ ಕುಮಾರ್ ಕಾರ್ಯಕ್ರಮ ವಂದಿಸಿದರು.

ಕೆಸರು ಗದ್ದೆ ಕ್ರೀಡಾಕೂಟ

ಶ್ರೀರಾಮ ಪದವಿ ವಿದ್ಯಾಲಯ ಕಲ್ಲಡ್ಕದಲ್ಲಿ ಪ್ರಭೋಧ ವಾಣಿಜ್ಯ ಸಂಘ ಉದ್ಘಾಟನೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಯಿತು.

File0119

ಕ್ರೀಡಾಕೂಟವನ್ನು ಚಿತ್ತರಂಜನ್ ಹೊಸಕಟ್ಟ ಮತ್ತು ಪ್ರಭೋಧ ವಾಣಿಜ್ಯ ಸಂಘವನ್ನು ರಾಜೀವ ಸಪಲ್ಯ ಮತ್ತು ಆನಂದ ಶೆಟ್ಟಿ ಇವರುಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಕಮಲಾ ಪ್ರಭಾಕರ ಭಟ್, ಯತೀನ್ ಕುಮಾರ್ ಏಳ್ತಿಮಾರ್, ಗಂಗಾ ಮಾತಾಜಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರು ವಸಂತ ಬಲ್ಲಾಳ್, ಪದವಿ ವಿಭಾಗದ ಪ್ರಾಂಶುಪಾಲರು ಕೃಷ್ಣಪ್ರಸಾದ್, ಹಾಗೂ ಉಪನ್ಯಾಸಕರು, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

Highslide for Wordpress Plugin