ಇತಿಹಾಸ:
ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳಿಗೆ ಅನುಗುಣವಾಗಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ತತ್ವ ಆದರ್ಶಗಳ ಪಾರಂಪರಿಕ ಹಿನ್ನಲೆಯಲ್ಲಿ ಆರಂಭವಾದ ವಿದ್ಯಾಸಂಸ್ಥೆಯು ಶ್ರೀರಾಮ ವಿದ್ಯಾಕೇಂದ್ರ. ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಹಾರ್ದಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಶಿಕ್ಷಣ ಸಂಸ್ಥೆ ನಿರಂತರವಾಗಿ ಬೆಳೆದು ಬಂದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಣ್ಣ ಊರು ಕಲ್ಲಡ್ಕ. ಬಾಳ್ತಿಲ ಗ್ರಾಮದ ಹನುಮಾನ್ ನಗರದಲ್ಲಿರುವ ಪ್ರಶಾಂತ ವಾತವರಣದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಿವಿಧ ತರಗತಿಗಳು ಕಾರ್ಯನಿರ್ವಹಿಸುತ್ತಿವೆ.
ಶ್ರೀರಾಮ ಭಜನಾ ಮಂದಿರವು ಊರಿನ ಶ್ರದ್ಧಾ ಕೇಂದ್ರವಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆಯ ಸ್ಥಳವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆ ಕೇಂದ್ರವಾಗಿ ನೂರಾರು ಯುವಕರಿಗೆ ರಾಷ್ಟ್ರೀಯ ಕಾರ್ಯದಲ್ಲಿ ಸ್ಪೂರ್ತಿಯನ್ನು ನೀಡಿದೆ. ರಾಷ್ಟ್ರ ಜಾಗೃತಿಯ ಹೋರಾಟದಲ್ಲಿ ಹಲವು ನಾಯಕರನ್ನು ತೊಡಗಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ಇಲ್ಲಿಂದ ಸಿಕ್ಕಿದೆ.
1980ರಲ್ಲಿ ಇಲ್ಲಿನ ಕಾರ್ಯಕರ್ತರ ಚಿಂತನೆಯ ಫಲವಾಗಿ ಊರಿಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಪ್ರೌಢಶಾಲೆಯ ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಸುತ್ತುಮುತ್ತಲಿನ ಜನ ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕೊಡಬೇಕೆಂಬ ಹೃದಯವಂತಿಕೆಯನ್ನು ಹೊಂದಿದ್ದರು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಆರಂಭದಲ್ಲಿ ಶಿಕ್ಷಣ ಸಂಸ್ಥೆಗೆ ಕಲ್ಲಡ್ಕ ಪೇಟೆಯ ಸಮೀಪದ ೯ ಎಕ್ರೆ ಸ್ಥಳವನ್ನು ಸಂಸ್ಥೆಗೆ ಪಡೆಯುವಲ್ಲಿ ಹಲವು ಹೋರಾಟವನ್ನೇ ಮಾಡಬೇಕಾಯಿತು. ಮತೀಯ ಹಾಗೂ ರಾಜಕೀಯ ಶಕ್ತಿಗಳ ಹಲವು ಅಡೆತಡೆಗಳನ್ನು ಎದುರಿಸಿ ಪ್ರಕೃತಿಯ ಸುಂದರ ಪರಿಸರದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀಶ್ರೀಶ್ರೀ ವಿಶ್ವೇಶ್ವತೀರ್ಥ ಶ್ರೀ ಪಾದಂಗಳವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯನ್ನು ಕಾರ್ಯಕ್ರಮಯು ನಡೆಯದಂತೆ ಮತೀಯ ರಾಜಕೀಯ ಒತ್ತಡಕ್ಕೆ ಮಣಿದು ಸರಕಾರವು ೧೪೪ನೇ ಸೆಕ್ಷನ್ ಜಾರಿಗೊಳಿಸಿದ್ದು, ಒಂದು ಕಹಿ ನೆನಪಾಗಿದೆ. ಕೊನೆಗೂ ಆಡಳಿತ ಮಂಡಳಿಯು ಯಶಸ್ವಿಯಾಗಿ ನಿವೇಶನವನ್ನು ಪಡೆದು ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣದ ಅನುಕೂಲವನ್ನು ಪೂರೈಸಿರುವುದು ಒಂದು ಇತಿಹಾಸ.
ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಸಿಗಬೇಕು ಆ ಮೂಲಕ ಸಮಾಜ ರಾಷ್ಟ್ರಕ್ಕೆ ಶಕ್ತಿಯಾಗಬೇಕು ಭಾರತಿಯ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಮಕ್ಕಳಿಗೆ ಸಿಗಬೇಕು ಎಂಬುದನ್ನು ವಿದ್ಯಾಕೇಂದ್ರದ ಆಡಳಿತ ಮಂಡಳಿಯು ಮನಗಂಡು ೧೯೮೮ರಲ್ಲಿ ಶ್ರೀರಾಮ ಶಿಶುಮಂದಿರವನ್ನು ಪ್ರಾರಂಭಿಸಿತು. ಸ್ಥಳೀಯರ ಉತ್ತಮ ಪ್ರತಿಕ್ರಿಯೆಯೊಂದಿಗೆ ೧೯೮೯ರಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯು ಆರಂಭಗೊಂಡಿತು.
ಹನುಮಾನ್ ನಗರದ ಪ್ರಕೃತಿಯ ಮಡಿಲಲ್ಲಿ ಗುರುಕುಲ ಮಾದರಿಯ ವಿಶಿಷ್ಟ ಕಟೀರಗಳಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯು ತರಗತಿಗಳನ್ನು ನಡೆಸುತ್ತಿದೆ. ಮಕ್ಕಳಿಗೆ ಆನಂದದಾಯಕ ಕಲಿಕೆಗೆ ಬೇಕಾದ ಪರಿಸರವನ್ನು ಒದಗಿಸಿವೆ. ಶಾಲಾ ಉದ್ಯಾನ ಸಹಿತ ಪ್ರಾಣಿ ಪಕ್ಷಿಗಳ ಒಡನಾಟವು ಮಕ್ಕಳಲ್ಲಿ ಜೈವಿಕ ಪರಿಸರದ ಸಂಬಂಧವನ್ನು ಬೆಸೆಯುವಂತೆ ಮಾಡಿದೆ.
ಇಲ್ಲಿ ತರಗತಿಯ ಕೊಠಡಿಗಳು ಮಹಾ ಪುರುಷರ ನಿತ್ಯ ಸ್ಮರಣೆಗೆ ಅನುಕೂಲವಾಗುವಂತೆ ಶಬರಿ, ಅಬ್ಬಕ್ಕ, ಬಾಹುಬಲಿ, ಶಿವಾಜಿ, ಶ್ರೀಕೃಷ್ಣ, ಶಾರದಾ, ಕೇಶವ, ಮಾಧವ, ಯಾದವ, ಈ ಹೆಸರುಗಳಿಂದ ಗುರುತಿಸಲಾಗುತ್ತಿದೆ. ತರಗತಿಗಳಲ್ಲಿ ಕುಟೀರದ ಪರಿಸರವು ಗುರುಕುಲದಂತಿದ್ದು ಇಲ್ಲಿ ಶ್ರೀಮಾನ್ ಹಾಗೂ ಮಾತಾಜಿಯವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾರೆ. ಪುರಾತನವಾಗಿದ್ದು ದೇವ ಭಾಷೆಯೆಂದು ಪರಿಗಣಿಸಲ್ಪಟ್ಟ ಸಂಸ್ಕೃತವನ್ನು ಎಲ್ಲಾ ಮಕ್ಕಳಿಗೆ ಕಲಿಯುವ ಅವಕಾಶವಿದೆ.
ಪ್ರತಿದಿನ ಸರಸ್ವತಿ ವಂದನೆಯೊಂದಿಗೆ ನಿತ್ಯ ಪ್ರಾರ್ಥನೆ ನಡೆಯುತ್ತದೆ. ಭಗವದ್ಗೀತೆ, ವೇದಗಳ ಮಂತ್ರೋಚ್ಚಾರಣೆ, ಸ್ತೋತ್ರಗಳು ಹಾಗೂ ಸೂಕ್ತಿಗಳು ನಿತ್ಯ ಪ್ರಾರ್ಥನೆಯಲ್ಲಿ ಹೇಳುವ ಮೂಲಕ ಮಕ್ಕಳಲ್ಲಿ ಉತ್ತಮ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ.
ರಾಷ್ಟ್ರಿಯ ಹಬ್ಬಗಳು ಮತ್ತು ಧಾರ್ಮಿಕ ಹಬ್ಬಗಳ ಆಚರಣೆಯ ಮೂಲಕ ಸಂಸ್ಕೃತಿ ಹಾಗೂ ಭಾವೈಕ್ಯವನ್ನು ಮಕ್ಕಳು ಬೆಳೆಸಿಕೊಳ್ಳುವುದಕ್ಕೆ ಅವಕಾಶವಾಗಿದೆ.
ವಿದ್ಯಾಕೇಂದ್ರವು ಸಾಮಾಜಿಕ ಪರಿವರ್ತನೆಯ ಮತ್ತು ಸಂಸ್ಕಾರದ ಕೇಂದ್ರವಾಗಿರಬೇಕೆಂಬುದು ವಿದ್ಯಾಕೇಂದ್ರದ ಸಂಸ್ಥಾಪಕರ ಆಶಯವಾಗಿದೆ. ಅಶನ, ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಗಬೇಕು ಎಂಬ ಆರ್ಷೇಯ ಚಿಂತನೆಯಂತೆ ವಿದ್ಯಾಕೇಂದ್ರವನ್ನು ನಡೆಸಿಕೊಂಡು ಬರಬೇಕೆಂದು ಆಡಳಿತ ಮಂಡಳಿಯ ದೂರದೃಷ್ಟಿಯಾಗಿದೆ. ಆ ಹಿನ್ನಲೆಯಲ್ಲಿ ಸಜ್ಜನರ ಸಹಕಾರ ಮತ್ತು ಕೊಡುಗೈ ದಾನಿಗಳ ಉದಾರತೆಯಿಂದ ಶಿಕ್ಷಣ ಸಂಸ್ಥೆಯು ವಿವಿಧ ಹಂತಗಳಲ್ಲಿ ವಿಸ್ತರಿಸಿಕೊಳ್ಳುತ್ತಿದೆ.
2006ರಲ್ಲಿ ಪದವಿ ಪೂರ್ವ ತರಗತಿಗಳು ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳೊಂದಿಗೆ ಆರಂಭಗೊಂಡಿದೆ.2009ರಲ್ಲಿ ಬಿ.ಬಿ.ಯಂ ಮತ್ತು ಬಿ.ಕಾಂ ಪದವಿ ತರಗತಿಗಳು ಆರಂಭಗೊಂಡಿವೆ.
ಸುಮಾರು 20ಎಕ್ರೆ ಪ್ರದೇಶದಲ್ಲಿ ವಿಶಾಲ ಆಟದ ಮೈದಾನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಹಾಗೂ ಪದವಿ ತರಗತಿಳಿಗೆ ಪ್ರತ್ಯೇಕ ಕಟ್ಟಡಗಳು ಇವೆ. ವೇದವ್ಯಾಸ, ಮಧುಕರ, ಅಜಿತ ಸಭಾಂಗಣಗಳು ಸಾಮೂಹಿಕ ಪ್ರಾರ್ಥನೆ ಹಾಗೂ ಸಭೆ ಸಮಾರಂಭಗಳಿಗಾಗಿ ನಿರ್ಮಾಣವಾಗಿದೆ.
———————————————-
ಆಡಳಿತ ಮಂಡಳಿ
ಕ್ರ.ಸಂ. | ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ | ||
1 | ಶ್ರೀ ನಾರಾಯಣ ಸೋಮಯಾಜಿ | ಅಧ್ಯಕ್ಷರು | |
2 | ಶ್ರೀ ಡಾ. ಪ್ರಭಾಕರ ಭಟ್ | ಕಾರ್ಯದರ್ಶಿ | |
3 | ಶ್ರೀ ಪದ್ಮನಾಭ ಕೊಟ್ಟಾರಿ | ಸದಸ್ಯರು | |
4 | ಶ್ರೀ ಕಜಂಪಾಡಿ ಸುಬ್ರಹಣ್ಯ ಭಟ್ | ಸದಸ್ಯರು | |
5 | ಶ್ರೀ ಜಯಶ್ಯಾಮ | ಸದಸ್ಯರು | |
6 | ಶ್ರೀ ಗೋಪಾಲ ಶೆಣೈ | ಸದಸ್ಯರು | |
7 | ಶ್ರೀ ಮಹೇಶ್ವರ ಭಟ್ | ಸದಸ್ಯರು | |
8 | ಶ್ರೀ ನಳಿನ್ ಕುಮಾರ್ ಕಟೀಲ್ | ಸದಸ್ಯರು | |
9 | ಶ್ರೀ ವಿಪಿನ್ ಕುಮಾರ್ | ಸದಸ್ಯರು | |
10 |
|
ಸದಸ್ಯರು | |
11 | ಶ್ರೀಮತಿ ಮಲ್ಲಿಕಾ ಶೆಟ್ಟಿ | ಸದಸ್ಯರು | |
12 | ಶ್ರೀ ಜಗದೀಶ್ | ಸದಸ್ಯರು | |
13 | ಶ್ರೀ ನಾಗೇಶ್ | ಸದಸ್ಯರು | |
14 | ಶ್ರೀ ಚೆನ್ನಪ್ಪ ಕೋಟ್ಯಾನ್ | ಸದಸ್ಯರು | |
15 | ಸದಸ್ಯರು |
ಶಾಲಾಭಿವೃದ್ದಿ ಸಮಿತಿ
ಕ್ರ.ಸಂ. | ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ | ||
1 | ಶ್ರೀ ಸತೀಶ ಭಟ್ ಶಿವಗಿರಿ | ಅಧ್ಯಕ್ಷರು | |
2 | ಶ್ರೀ ಜಯರಾಮ ರೈ | ಕಾರ್ಯದರ್ಶಿ | |
3 | ಶ್ರೀ ರಾಕೊಡಿ ಈಶ್ವರ ಭಟ್ | ಸದಸ್ಯರು | |
4 | ಶ್ರೀ ಗಿಲ್ಕಿನ್ಜ ಕೃಷ್ಣ ಭಟ್ | ಸದಸ್ಯರು | |
5 | ಶ್ರೀ ಶಂಬು ಭಟ್ | ಸದಸ್ಯರು | |
6 | ಶ್ರೀ ಪದ್ಮನಾಭ ಪಿ .ಕೆ | ಸದಸ್ಯರು | |
7 | ಶ್ರೀ ಸುಬ್ರಹ್ಮಣ್ಯ ಭಟ್ | ಸದಸ್ಯರು | |
8 | ಶ್ರೀ ಆನಂದ ಶೆಟ್ಟಿ | ಸದಸ್ಯರು | |
9 | ಶ್ರೀ ನಾಗರಾಜ | ಸದಸ್ಯರು | |
10 |
|
ಸದಸ್ಯರು | |
11 | ಶ್ರೀ ಲಕ್ಷ್ಮಣ | ಸದಸ್ಯರು | |
12 | ಶ್ರೀ ಜಯರಾಮ ಸುದೆಕಾರ್ | ಸದಸ್ಯರು | |
13 | ಶ್ರೀ ದಯಾನಂದ | ಸದಸ್ಯರು | |
14 | ಶ್ರೀ ಶಿವಶಂಕರ ಭಟ್ | ಸದಸ್ಯರು | |
15 | ಶ್ರೀಮತಿ ಪುಷ್ಪ ಪರ್ಕಳ | ಸದಸ್ಯರು | |
16 | ಶ್ರೀಮತಿ ಚಿನ್ನಮ್ಮ | ಸದಸ್ಯರು |
ದಿನಾಂಕ 31-08-2015 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶಾರದ ರಾವ್ ನಿವೃತ್ತ ಶಿಕ್ಷಕಿ ರಕ್ಷಬಂಧನದ ಮಹತ್ವವನ್ನು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಶ್ರೀರಾಮ ಪೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ರೋಹಿತ್ ಸಂಸ್ಕೃತ ಭಾಷೆಯ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿದರು. ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾ ಸ್ಫರ್ಧೆಯಲ್ಲಿ ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಪ್ರಸ್ತುತ ಸರಸ್ವತಿ ಕೋ-ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಇಲ್ಲಿ ವ್ಯವಸ್ಥಾಪಕರಾಗಿರುವ ಕಿರಣ್ ಕೊಟ್ಟರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಗಿರಿ ಸತೀಶ್ ಭಟ್, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅರ್ಚನಾ 7 ನೇ ತರಗತಿ ನಿರೂಪಿಸಿ, ಅಖಿಲ್ 7 ನೇ ತರಗತಿ ಸ್ವಾಗತಿಸಿ, ಕೀರ್ತಿ 7 ನೇ ತರಗತಿ ವಂದಿಸಿದರು.
ದಿನಾಂಕ 25-08-2015 ರಂದು ಬಿ.ಎ.ಪದವಿ ಪೂರ್ವ ಕಾಲೇಜು ತುಂಬೆ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವಿದ್ಯಾರ್ಥಿಗಳಾದ ಆದಿತ್ಯಕೃಷ್ಣ 4ನೇ ತರಗತಿ ಧಾರ್ಮಿಕ ಪಠಣ ಪ್ರಥಮ, ಶಮಿತ 7ನೇ ತರಗತಿ ಸಂಸ್ಕೃತ ಕಂಠಪಾಠ ಪ್ರಥಮ, ಸುಧಾಂಶು ಕೆ.ಹೆಚ್. 7ನೇ ತರಗತಿ ಯಕ್ಷಗಾನ ಪ್ರಥಮ, ಹಾಗೂ ಕಿರಿಯ ವಿಭಾಗದ ದೇಶಭಕ್ತಿ ಗೀತೆ ಪ್ರಥಮ, ಹಿರಿಯ ವಿಭಾಗದ ಪದ್ಮಶ್ರೀ ಧಾರ್ಮಿಕ ಪಠಣ ದ್ವಿತೀಯ ಮತ್ತು ಕಥೆ ಹೇಳುವುದು ತೃತೀಯ, ದೇಶಭಕ್ತಿಗೀತೆ ತೃತೀಯ, ಕಿರಿಯ ವಿಭಾಗದಲ್ಲಿ ಅನನ್ಯ ಕೆ. ಹಿಂದಿ ಕಂಠಪಾಠ ದ್ವಿತೀಯ, ಜನಪದ ನೃತ್ಯ ತೃತೀಯ ಸ್ಥಾನಪಡೆದಿರುತ್ತದೆ.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ದಿನಾಂಕ 15-08-2015 ಶನಿವಾರದಂದು ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ (ರಿ) , ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ, ವಿವೇಕ್ ಟ್ರೇಡರ್ಸ್, ಸೇವಾಂಜಲಿ ಟ್ರಸ್ಟ್, ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯ ಶಾಲಾ , ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದಿಕ್ ವೈದ್ಯಕೀಯ ಶಿಬಿರ ನಡೆಯಿತು.
ಬೆಳಿಗ್ಗೆ 9.30 ಕ್ಕೆ ವೇದವ್ಯಾಸ ಸಭಾಂಗಣದಲ್ಲಿ ಶಿಬಿರದ ಉದ್ಘಾಟನೆಯನ್ನು ಶ್ರೀಯುತ ಪ್ರಕಾಶ್ ಕುಕ್ಕಿ ನಿವೃತ್ತ ಸೇನಾನಿ ಕೋಡಪದವು ಇವರು ನೆರವೇರಿಸಿದರು. ಸಮಾರಂಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡುತ್ತಾ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿರುವುದು ನಮ್ಮ ತನವನ್ನು ಉಳಿಸಿಕೊಳ್ಳುವುದಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ದಿನದಂದು ನಾವು ಆಯುರ್ವೇದಿಕ್ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿರುವುದು ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತದೆ ನಮ್ಮ ಪರಂಪರೆಯ ಆಯುರ್ವೇದವನ್ನು ನೆನಪು ಮಾಡಿಕೊಳ್ಳುವ ಸುಸಂಧರ್ಭ ಒದಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಅಮೃತಬಳ್ಳಿಯನ್ನು ವಿತರಿಸಿದರು.
ವೇದಿಕೆಯಲ್ಲಿ ವೈದ್ಯರಾದ ಮೋಹನ್ ಕಿಶೋರ್ , ಎಮ್.ಎಸ್ ಕಾಮತ್, ಕಾತ್ಯಾಯಿನಿ, ರಾಜೀವ ಶೆಣೈ, ಚೈತ್ರಾ, ಸುಷ್ಮಾ ಹಾಗೂ ವಿವೇಕ ಟ್ರೇಡರ್‍ಸ್ ನ ಶ್ರೀ ದಯಾನಂದ್, ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಸಂದೇಶ್ ಕಾಮತ್ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಜಿ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ವಿವಿಧ ಕೊಠಡಿಗಳಲ್ಲಿ ವೈದ್ಯಕೀಯ ತಪಾಸಣೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಶ್ರೀ ಶಿವಗಿರಿ ಸತೀಶ್ ಭಟ್ ಸ್ವಾಗತಿಸಿ ರೇಣುಕಾ ಮಾತಾಜಿ ನಿರೂಪಿಸಿ ಧನ್ಯವಾದಗೈದರು.
ದಿನಾಂಕ 7-8-2015 ರಂದು ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ 11 ಪ್ರಥಮ, 3 ದ್ವಿತೀಯ, 1 ತೃತೀಯ ಹಾಗೂ ಕಿರಿಯ ವಿಭಾಗದಲ್ಲಿ 5 ಪ್ರಥಮ, 3 ದ್ವಿತೀಯ ಒಟ್ಟು 23 ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ದಿನಾಂಕ 25-07-2015 ರಂದು ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಹುಟ್ಟುಹಬ್ಬ ಆಚರಿಸುತ್ತಿರುವ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ಅಕ್ಷತೆ ಹಾಕಿ ತಿಲಕ ಇಟ್ಟು ಆಶೀರ್ವದಿಸಿದರು.
ಕಾರ್ಯಕ್ರಮದ ಅತಿಥಿಗಳಾದ ನೆಟ್ಲ ಸರಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತ ಪ್ರವೀಣ್ ಇವರು ಮಾತನಾಡುತ್ತಾ ಸಾಮೂಹಿ ಹುಟ್ಟುಹಬ್ಬ ಆಚರಿಸಿ ಅನಗತ್ಯ ಖರ್ಚನ್ನು ಉಳಿಸಿ ನಿಧಿ ಸಮರ್ಪಣೆ ಮಾಡುವ ಮೂಲಕ ನಿರಾಶ್ರಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗುವುದು ಉತ್ತಮ ಕಾರ್ಯ ಎಲ್ಲರೂ ಅನಾವಶ್ಯಕ ದುಂದು ವೆಚ್ಚವನ್ನು ಸಮಾಜದ ಕಾರ್ಯದಲ್ಲಿ ವಿನಿಯೋಗಿಸಿದರೆ ನಮ್ಮ ದೇಶ ಒಂದು ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಇನ್ನೋರ್ವ ಅತಿಥಿಯಾದ ಶ್ರೀರಾಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾದ ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಇಂಜಿನಿಯರ್ ಪದವಿಯನ್ನು ಪಡೆದು ಪ್ರಸ್ತುತ ದೆಹಲಿಯಲ್ಲಿ ವಾಸ್ತವ್ಯ ಮಾಡುತ್ತಿರುವ ಶ್ರೀಮತಿ ಶುಭಲಕ್ಷ್ಮೀ ಇವರು ತಮ್ಮ ಪ್ರಾಥಮಿಕ ಶಾಲಾದಿನಗಳನ್ನು ನೆನಪಿಸುತ್ತಾ ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಪ್ರಗತಿಪರ ಕೃಷಿಕರಾದ ಶ್ರೀ ಗಿಲ್ಕಿಂಜ ಕೃಷ್ಣಭಟ್ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾ ಮಾತಾಜಿ ನಿರೂಪಿಸಿ, ತೇಜಾಕ್ಷಿ ಮಾತಾಜಿ ಸ್ವಾಗತಿಸಿ, ರವಿರಾಜ್ ಶ್ರೀಮಾನ್ ಧನ್ಯವಾದಗೈದರು.