ಉಪ್ಪಿನಂಗಡಿ : ಭಕ್ತಿ ಮತ್ತು ಶಕ್ತಿ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಮಗೆಲ್ಲವನ್ನ್ನೂ ನೀಡಿರುವ ಭಗವಂತನನ್ನು ಭಜನೆಯ ಮೂಲಕ ಸದಾ ನೆನೆಯುವಕಾರ್ಯ ಪ್ರತಿ ಮನೆ ಪ್ರತಿ ಮನದಲ್ಲೂ ಪ್ರತಿನಿತ್ಯ ನಡೆಯಬೇಕಾಗಿದೆ ಎಂದು ಸಾಮಾಜಿಕ ಮುಂದಾಳು ಪುರುಷೋತ್ತಮ ಮುಂಗ್ಲಿಮನೆ ತಿಳಿಸಿದರು. ಅವರು ವಿಜಯದಶಮಿಯಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಹಮ್ಮಿಕೊಂಡಿದ್ದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಿಶ್ವ ವಂದನೀಯ ಸಂಸ್ಕೃತಿಯ ನೆಲೆಯಾದ ಭಾರತದಲ್ಲೇ ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಅಧಃಪತನದ
ಉಪ್ಪಿನಂಗಡಿ :ಸಂಕಷ್ಠದಲ್ಲಿರುವವರಿಗೆ ಸಹಾಯ ಸಹಕಾರ ನೀಡಿ ಸ್ಪಂದಿಸುವುದೇ ಮಾನವ ಜೀವನದ ಆದರ್ಶ ನಡೆಯಾಗಿದ್ದು, ಇದು ಭಗವಂತನ ಕೃಪೆಗೆ ಒಳಗಾಗುವ ಕಾರ್ಯವೂ ಹೌದುಎಂದು ಶ್ರೀ ಮಾಧವ ಶಿಶು ಮಂದಿರದ ಗೌರವಾಧ್ಯಕ್ಷ ಯು ರಾಮ ತಿಳಿಸಿದರು. ಅವರು ಇತ್ತೀಚೆಗೆ ಅಪಘಾತದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಉಪ್ಪಿನಂಗಡಿಯ ಶ್ರೀ ರಾಮ ಶಾಲಾ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚಕ್ಕಾಗಿ ಶ್ರೀ ಮಾಧವ ಶಿಶು ಮಂದಿರದ ವತಿಯಿಂದ ನೀಡಲಾದ 25 ಸಾವಿರ ರೂಪಾಯಿಯ ಆರೋಗ್ಯ ನಿಧಿಯನ್ನು ಶ್ರೀ ರಾಮ ಶಾಲಾ ಸಂಚಾಲಕ ಯು ಜಿ ರಾಧರವರಿಗೆ
ಉಪ್ಪಿನಂಗಡಿ: ಹಿಂದೂ ಸೇವಾ ಪ್ರತಿಷ್ಠಾನ ಸಮಾಜದ ಬಡ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಪುಸ್ತಕಗಳನ್ನು ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ವಿತರಿಸಲಾಯಿತು. ಪುಸ್ತಕ ವಿತರಣೆಯನ್ನು ನೆರವೇರಿಸಿ ಮಾತನಾಡಿದ ,ಉಪ್ಪಿನಂಗಡಿ ಸಿ ಎ ಬ್ಯಾಂಕ್ ನಿರ್ದೇಶಕಯತೀಶ್ ಶೆಟ್ಟಿ ಸುವ್ಯ ಮಾತನಾಡಿಸತ್ ಪಾತ್ರರಿಗೆ ನೀಡುವದಾನ ಭಗವಂತನ ಪ್ರೀತಿಗೆ ಪಾತ್ರವಾಗುವುದಲ್ಲದೆ, ಭಗವಂತನದಯೆಯಿಂದ ಲಭಿಸಿದ ಸಂಪತ್ತು ಭಗವಂತನ ಸೇವೆಗೆ ವಿನಿಯೋಗವಾದ ಪುಣ್ಯ ಪ್ರಾಪ್ತವಾಗುವುದು . ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಈ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವ ಹಿಂದೂ
ಉಪ್ಪಿನಂಗಡಿ: ಭಕ್ತಿ-ಶಕ್ತಿ-ಯುಕ್ತಿ ಯಿಂದ ಧರ್ಮ ಸಂಸ್ಥಾಪನೆಗೈದ ಶ್ರೀ ಕೃಷ್ಣನ ಜೀವನವೇ ಮನು ಕುಲಕ್ಕೆ ಆದರ್ಶ ಪ್ರಾಯವಾಗಿದ್ದು, ಸಮಾಜದಲ್ಲಿ ಮೇಲೈಸುವ ದುಷ್ಠ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇಡೀ ಸಮಾಜ ಶ್ರೀ ಕೃಷ್ಣನ ಆದರ್ಶವನ್ನು ಪಾಲಿಸಬೇಕಾಗಿದೆ ಎಂದು ಚಿಂತಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹ ಚಂದ್ರಶೇಖರ್ ಮರ್ಧಾಳ ತಿಳಿಸಿದರು. ಅವರು ಉಪ್ಪಿನಂಗಡಿಯ ಶ್ರೀ ಮಾಧವ ಶಿಶುಮಂದಿರದಲ್ಲಿ ಬುಧವಾರದಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಧಾಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಮಾಜದ ನಾನಾ ಕ್ಷೇತ್ರದಲ್ಲಿ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ
ಉಪ್ಪಿನಂಗಡಿ : ಲೋಕಾ ಸಮಸ್ತ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಹಿಂದೂಧರ್ಮ ಸಂಸ್ಕೃತಿಯಲ್ಲಿ ಸಹೋದರತೆಯ ಬಾಂಧವ್ಯವನ್ನು ಬೆಸೆದು ಸಾಮರಸ್ಯದ ಬಾಳಿಗೆ ಪೂರಕವಾಗಿ ರಕ್ಷಬಂಧನ ಉತ್ಸವವು ಅನಾದಿಕಾಲದಿಂದ ನಡೆಯುತ್ತಿದ್ದು, ಯುವ ಪೀಳಿಗೆಗೆ ಅದರ ಮೌಲ್ಯವನ್ನು ತಿಳಿಸುವ ಅಗತ್ಯತೆ ಹೆಚ್ಚಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖ್ ರವೀಂದ್ರ ಇಳಂತಿಲ ಕರೆ ನೀಡಿದರು. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ದಿನಾಂಕ 20/8/13ರಂದು ನಡೆದ ರಕ್ಷಾಬಂಧನ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಿದ್ದರು. ಸಮಾಜದಲ್ಲಿನ ಬೇಧ
ಉಪ್ಪಿನಂಗಡಿ :ಚಿತ್ರ ಕಲೆ ಮನಸ್ಸನ್ನು ಅರಳಿಸುವ ಕಲೆಯಾಗಿದ್ದು, ಮಕ್ಕಳ ಕಲಾಭಿರುಚಿಯನ್ನು ಗುರುತಿಸಿ ಅರಳಿಸುವ ಕಾರ್ಯವನ್ನು ಶ್ರೀ ಮಾಧವ ಶಿಶು ಮಂದಿರ ಸಮಿತಿಯು ನಡೆಸುತ್ತಿರುವುದು ಶ್ಲಾಘನೀಯವೆಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಸಹಸ್ರಲಿಂಗೇಶ್ವರದೇವಾಲಯದ ಆಡಳಿತ ಮಂಡಳಿ ಸದಸ್ಯಕಂಗ್ವೆ ವಿಶ್ವನಾಥ ಶೆಟ್ಟಿ ತಿಳಿಸಿದರು. ಅವರು ಆದಿತ್ಯವಾರದಂದು (18/8/13)ಉಪ್ಪಿನಂಗಡಿಯಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಆಯೋಜಿಸಲಾದ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರಕಲಾ ಶಿಕ್ಷಕ
ಉಪ್ಪಿನಂಗಡಿ : ಎಳೆಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರನ್ನು ಭವ್ಯರಾಷ್ಟ್ರದ ದಿವ್ಯ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವೆಂದು ಯುವ ಸಾಮಾಜಿಕ ಕಾರ್ಯಕರ್ತ ರಾಜ್‌ಗೋಪಾಲ ಹೆಗ್ಡೆ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ನಡೆದ ಒಂದುವಾರದ ಬೇಸಿಗೆ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಉದ್ಯಮಿ ಹರ್ಷಕುಮಾರ್ ಜೈನ್ ಮಾತನಾಡಿ, ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ದುರ್ಬಲವಾದ ಮನೆ-ಮನಸ್ಸುಗಳನ್ನು ಹಳಿಗೆ ತರಲು ನಮ್ಮ ಭಾರತೀಯ ಸಂಸ್ಕಾರವನ್ನು ಎಳೆಯ ಮಕ್ಕಳಿಗೆ
ಉಪ್ಪಿನಂಗಡಿ : ಯುಗಾದಿ ಹೊಸ ವರ್ಷಾಚರಣೆ ಮಾತ್ರವಾಗಿರದೇ ನಮ್ಮ ನಮ್ಮ ಸಾಮಾಜಿಕ ಬದ್ದತೆಯನ್ನು ನೆನೆಯುವ, ಸಂಕಲ್ಪಿಸುವ ಹಬ್ಬವಾಗಿರಬೇಕು. ಸದ್ವಿಚಾರಧಾರೆ ನಮ್ಮೆರಲ್ಲ ಮೈ ಮನದಲ್ಲಿ ನೆಲೆಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಾಳು ಹರಿರಾಮಚಂದ್ರ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಯುಗಾದಿ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಾ ಮಾತನಾಡುತ್ತಿದ್ದರು. ನಮ್ಮ ದೇಶದ ಸಮಸ್ಯೆ, ನಮ್ಮ ಸಮಾಜದ ಸಮಸ್ಯೆ, ನಮ್ಮ ನೆರೆ ಮನೆಯ ಸಮಸ್ಯೆ, ನಮ್ಮ ಮನೆಯ ಸಮಸ್ಯೆ, ನಮ್ಮ ಸಮಸ್ಯೆಗಳನ್ನು
ಉಪ್ಪಿನಂಗಡಿ: ಜಗದ್ವಂದ್ಯ ಭಾರತೀಯ ಸಂಸ್ಕೃತಿಯನ್ನು ಎಳೆಯ ಮಕ್ಕಳಲ್ಲಿ ಮೂಡಿಸಿ, ಅವರನ್ನು ಸತ್‌ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಮಾಜದ ಸರ್ವ ಸ್ತರದ ಸಹಕಾರವೂ ಲಭಿಸಬೇಕಾಗಿದೆ. ಜಾತಿ-ಮತ-ಬಡವ-ಬಲ್ಲಿದನೆಂಬ ಭೇದತೋರದೇ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಒಂದೇ ವೇದಿಕೆಯಲ್ಲಿ ಸಾಮೂಹಿಕವಾಗಿ ಆಚರಿಸುವುದು ಮೌಲ್ಯಯುತವಾದ ನಡೆಯಾಗಿದೆ. ದೇಶದ ಮಹಾನ್ ನಾಯಕ ಡಾ| ಬಿ ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆಯನ್ನೂ ಎಲ್ಲರೂ ಸಾಮೂಹಿಕವಾಗಿ ಆಚರಿಸುವುದು ಅವರ ಜೀವನಾದರ್ಶಗಳಿಗೆ ನೀಡುವ ಅನುಪಮ ಗೌರವವಾಗಿದೆ ಎಂದು ಹಿರಿಯ ಚಿಂತಕಿ, ಉಪ್ಪಿನಂಗಡಿ ವಿಜಯಾ ಬ್ಯಾಂಕ್ ಶಾಖಾಧಿಕಾರಿ ಶ್ರೀಮತಿ ಪದ್ಮ ತಿಳಿಸಿದರು. ಅವರು ಆದಿತ್ಯವಾರ (14/04/13)