ಆಲಂಕಾರು ಭಾರತಿ ಶಾಲೆಯಲ್ಲಿ ಸಮಲೋಚನಾ ಸಭೆ ಆಲಂಕಾರು: ಗ್ರಾಮ ವಿಕಾಸ-ಒಂದು ಪರಿಕಲ್ಪನೆ ಎಂಬ ವಿಶೇಷ ಕಾರ್ಯಕ್ರಮ ಆಲಂಕಾರು ಭಾರತಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣರಾವ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಗ್ರಾಮದಲ್ಲಿ ಅನಕ್ಷರತೆಯನ್ನು ದೂರಗೊಳಿಸಬೇಕು. ಆ ಗ್ರಾಮಗಳ ಸ್ವಚ್ಛತೆ ಎಲ್ಲರೂ ಮಾಡಬೇಕು ಎಂದರು. ಊರಿನ ಸಮಸ್ಯೆಗಳನ್ನು ಕೋರ್ಟು/ಕಛೇರಿಗಳಿಲ್ಲದೆಯೇ ಮುಗಿಸುವ ಪ್ರಯತ್ನಗಳು ಗ್ರಾಮದಲ್ಲಿ ಆಗಬೇಕು ಎಂದು ತಿಳಿಸಿದರು. ಮರಗಳನ್ನು ನೆಡುವ ಕಾರ್ಯದಲ್ಲಿ ನಮ್ಮನ್ನು ತೊಡಗಿಸಬೇಕು. ಆ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಬೇಕು
ಆಲಂಕಾರು;-ಇಲ್ಲಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿ -ಭಾರತಿ ಎಂಬ ಪತ್ರಿಕಾಸಂಘ ಸೋಮವಾರಉದ್ಘಾಟನೆಗೊಂಡಿತು. ಕಡಬ ವಲಯ ಪತ್ರಕರ್ತರ ಸಂಘದಅಧ್ಯಕ್ಷಕೆ.ಎಸ್ ಬಾಲಕೃಷ್ಣ ಕೊಲ ದೀಪ ಬೆಳಗಿಸಿ ಸಂಘ ಉದ್ಘಾಟಿಸಿದರು. ನಂತರ ನಡೆದಕಾರ್ಯಕ್ರಮದಲ್ಲಿ ಸುದ್ದಿ ಭಾರತಿ ಸಂಘವನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕೆಗಳು ಸ್ವಾತಂತ್ಯ್ರಕಾಲದಲ್ಲಿ ಹೋರಾಟಗಾರರಿಗೆ ಪ್ರೇರಣೆ ನೀಡುವುದು,ನಾವು ಪತ್ರಿಕೆಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಮತ್ತು ಪತ್ರಿಕೆಯನ್ನು ಮಾರುಕಟ್ಟೆಯಿಂದಕೊಂಡುಓದುವ ಸಂಸ್ಕ್ರತಿ ನಮ್ಮದಾಗಬೇಕುಎಂದರು. ಜ್ಞಾನದದಾಹ ನಮ್ಮಲ್ಲಿರಬೇಕು.ಸಾಹಿತ್ಯದ ಬರವಣಿಗೆಗೆ ಪುಸ್ತಕ ಓದಬೇಕು. ಪುಸ್ತಕ ಓದದೆ ವರದಿ ಮಾಡಲು ಸಾಧ್ಯವಿಲ್ಲ ಎಂದುಅಭಿಪ್ರಾಯವ್ಯಕ್ತ ಪಡಿಸಿದರು.ನಂತರ ಸುದ್ದಿ ಭಾರತಿ
ದಿನಾಂಕ ೧೦-೦೬-೨೦೧೧ನೇ ಶುಕ್ರವಾರ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ, ಗಣಪತಿ ಹೋಮ ಮಾಡಿ ಆರತಿ ಬೆಳಗುವುದರೊಂದಿಗೆ ದೀಕ್ಷಾರಂಭವನ್ನು ಆಚರಿಸಲಾಯಿತು. ಸಭಾಧ್ಯಕ್ಷರಾಗಿ ಆಗಮಿಸಿದ ಶ್ರೀ ನಾರಾಯಣ ಆಚಾರ್, ಮರುವOತಿಲ, ನಿವೃತ್ತ ಶಿಕ್ಷಕರು, ಇವರು ಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸಿದರು .ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ. ಕಿಟ್ಟಣ್ಣ ರೈ ಅವನಿ, ಪೆರಾಬೆ ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ಮಂಡಳಿಯ ಸದಸ್ಯರು, ಪಾಲಕ ವರ್ಗದವರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.