
ಪುತ್ತೂರು: ಸಾಮಾಜಿಕ ಜಾಲತಾಣಗಳು ಜನರ ಗಮನವನ್ನು ಬೇಗನೆ ಸೆಳೆಯುತ್ತದೆ. ಜೊತೆಗೆ ಏಕಾಗ್ರತೆಯನ್ನೂ ಕಡಿಮೆಗೊಳಿಸುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲ ಇರುವ ಮಂದಿ, ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಭಿನ್ನವಾದ, ಉತ್ತಮ ರೀತಿಯ ಕೌಶಲ್ಯವಿರುತ್ತದೆ. ಅದನ್ನು ಒಲಿಸಿಕೊಳ್ಳುವ ಮಾರ್ಗವನ್ನು ಹುಡುಕಿಕೊಳ್ಳಬೇಕು ಎಂದು ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆ. ಎಂ. ಎಫ್. ಸಿ ನಾಯ್ಯಾಲಯದ ನಾಯ್ಯಾಧೀಶ ಶಿವಣ್ಣ ಹೆಚ್. ಆರ್ ಮಾತನಾಡಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಕಲಾ ವಿಭಾಗ, ಮಾನವಿಕ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಜರುಗಿದ ಒಂದು ದಿನದ ಅಂತರ್ ವಿಭಾಗ ಮಟ್ಟದ “ಕಲಾಸಪ್ತ 2025” ಕೌಶಲ್ಯ ವರ್ಧನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಮಾತನಾಡಿ, ಭಾರತದ ಜನರು, ಕುಟುಂಬ ಜೀವನವನ್ನು ನಿರ್ವಹಿಸುವಷ್ಟು ಸೊಗಸಾಗಿ ಸಾರ್ವಜನಿಕ ಬದುಕನ್ನು ನಿರ್ವಹಿಸುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ನಡವಳಿಕೆಗಳನ್ನ ತಿಳಿಸುವ ಪ್ರಯತ್ನ ಕಾಲೇಜಿನ ವಿಭಾಗಗಳಿಂದ ನಡೆಯಬೇಕು ಎಂದರು.
ಸಮಾರೋಪ ಸಮಾರಂಭ
” ಪ್ರಕೃತಿಯನ್ನು ನಾವು ಆರಾಧಿಸಬೇಕು. ದೈವ ದೇವರುಗಳ ಮೇಲೆ ನಂಬಿಕೆ ಬೇಕು. ನಮ್ಮ ಪ್ರಯತ್ನವೂ ಇದ್ದಾಗ ನಂಬಿದ ದೈವಿಕ ಶಕ್ತಿಯೂ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಮುಖ್ಯ. ಗುರಿಯನ್ನು ತಲುಪಲು ಸಹಕರಿಸುವ ಗುರುವನ್ನು ಎಂದೂ ಮರೆಯಕೂಡದು. ನಾವು ಮಾಡುವ ಕೆಲಸ ಶ್ರದ್ಧೆಯಿಂದ ಕೂಡಿರಲಿ ” ಎಂದು ಜೀವ ರಕ್ಷಕ, ಸಮಾಜ ಸೇವಕ ಈಶ್ವರ ಮಲ್ಪೆ ಅವರು ಸಮಾರೋಪದ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ” ಬದುಕು ಏನೆಂಬುದನ್ನು ಈಶ್ವರ ಮಲ್ಪೆಯವರಂತವರ ಜೀವನದಿಂದ ಅರಿಯಬಹುದು. ನಿಸ್ವಾರ್ಥವಾದ ಸಮಾಜಸೇವೆ ಪದಗಳಿಗೆ ನಿಲುಕದ್ದು. ರಾಷ್ಟ್ರದ ಕಾರ್ಯಗಳಿಗೆ ನಮ್ಮ ಮೊದಲ ಪ್ರಾಶಸ್ತ್ಯ ಇರಬೇಕು ” ಎಂದರು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ‘ ಮಥುರಾ ‘ ತಂಡ ಸಮಗ್ರ ಬಹುಮಾನ ಗಳಿಸಿಕೊಂಡಿತು.’ ಅಯೋಧ್ಯಾ ‘ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿಶೇಷಾಧಿಕಾರಿ ಡಾ. ಶ್ರೀಧರ ನಾಯಕ್, ಕಲಾ ವಿಭಾಗದ ಡೀನ್ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ,ಐಕ್ಯೂಎಸಿ ಘಟಕದ ಸಂಯೋಜಕಿ ಡಾ.ರವಿಕಲಾ, ಕಾರ್ಯಕ್ರಮದ ಸಂಯೋಜಕಿ ಡಾ. ವಿದ್ಯಾ ಎಸ್ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಸುಪ್ರೀತ್ ಅಮೈ, ವೈಷ್ಣವಿ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಕಾಲೇಜಿನ ಕಲಾವಿಭಾಗದ ಡೀನ್ ಹಾಗೂ ಹಿಂದಿ ವಿಭಾಗ ಮುಖ್ಯಸ್ಥೆ ಡಾ. ದುರ್ಗಾರತ್ನ ವಂದಿಸಿದರು, ಕಾರ್ಯಕ್ರಮವನ್ನು ತೃತೀಯ ವಿಭಾಗದ ವಿದ್ಯಾರ್ಥಿನಿ ಪ್ರಸಾದಿನಿ ತಿಂಗಳಾಡಿ ಹಾಗೂ ಲತಾ ಚೆಂಡೆಡ್ಕ ನಿರೂಪಿಸಿ, ಶ್ರೇಯಾ ಆಚಾರ್ಯ ಸಹಕರಿಸಿದರು.