ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವಿಜ್ಞಾನ ವಿಭಾಗದ ಪೋಷಕರ ಸಭೆ

ವಿವೇಕಾನಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು. ಪರೀಕ್ಷಾ ಸಮಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಗೊಂದಲಗಳನ್ನು ಪರಿಹರಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಡೆಸಲಾದ ಈ ಸಭೆಯಲ್ಲಿ ಮುಖ್ಯವಾಗಿ ಮುಂಬರುವ ಪೂರ್ವ ಸಿದ್ಧತಾ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳು ಹಾಗೂ ವಾರ್ಷಿಕ ಪರೀಕ್ಷೆಗಳು ಅದಕ್ಕಾಗಿ ವಿದ್ಯಾರ್ಥಿಗಳು ಮಾಡಬೇಕಾದ ತಯಾರಿಗಳ ಬಗ್ಗೆ ಹಲವು ಮಾಹಿತಿಗಳನ್ನು ಪೋಷಕರಿಗೆ ನೀಡಿದರು. Read more
ನರೇಂದ್ರ ಪ.ಪೂ.ಕಾಲೇಜಿನ ನೂತನ ಸಭಾಂಗಣ ಹಂಸಧ್ವನಿ ಉದ್ಘಾಟನೆ-ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ ಪ್ರತಿಭಾ ಪರ್ವ

ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಒಳಗೊಂಡ ಆಧುನಿಕ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಈ ಸಂಸ್ಥೆಯ ಉದ್ದೇಶ.ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿಕೊಳ್ಳಲು ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು.ಸಮಾಜದ ಆಸ್ತಿಗಳಾಗಿ ಹೊರಹೊಮ್ಮಬೇಕಾಗಿದೆ ಎಂದು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ ರವರು ಹೇಳಿದರು. Read more
ಉರಿಮಜಲು ಶ್ರೀ ರಾಮ ಭಟ್ಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಮೃತ್ಯುಂಜಯ ಭಾರತದಲ್ಲಿ ಅದ್ವಿತೀಯ ಸಾಧಕರು ಮತ್ತೆ ಮತ್ತೆ ಜನ್ಮವೆತ್ತಿ ಬರುತ್ತಾರೆ: ಡಾ. ಕಲ್ಲಡ್ಕ ಪ್ರಭಾಕರ ಭಟ್ ಇತ್ತೀಚೆಗೆ ಇಬ್ಬರು ದಿಗ್ಗಜರನ್ನು ನಾವು ಕಳೆದುಕೊಂಡಿದ್ದೇವೆ. ಒಬ್ಬರು ಸಮರ್ಥ ಸಮಾಜದ ನಿರ್ಮಾಣಕ್ಕೆ ಶ್ರಮವಹಿಸಿದ ಉರಿಮಜಲು ರಾಮಭಟ್ಟರು, ಮತ್ತೊಬ್ಬರು ಭಾರತೀಯ ಸೇನೆಯಲ್ಲಿ ಅಮೂಲಾಗ್ರ ಪರಿವರ್ತನೆಗೆ ಕಾರಣೀಭೂತರಾದ ಜ| ಬಿಪಿನ್ ರಾವತ್. ಇವರಿಬ್ಬರ ಅಗಲಿಕೆಯು ಸಮಾಜಕ್ಕೆ ತುಂಬಲಾಗದ ನಷ್ಟ. ಆದರೆ ಮೃತ್ಯುಂಜಯ ಭಾರತದಲ್ಲಿ ಹಿರಿಯರ ಪ್ರೇರಣೆಯ ಹಾದಿಯನ್ನು ಅನುಸರಿಸಿ ಸರ್ವ ಸಮರ್ಪಿತ ವ್ಯಕ್ತಿಗಳು ಜನಿಸುತ್ತಲೇ ಇರುತ್ತಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ […]
ಗ್ರಾಮ ವಿಕಾಸ ಸಮಾಲೋಚನಾ ಸಭೆ – 2021

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಗ್ರಾಮ ವಿಕಾಸ ಚಟುವಟಿಕೆಗಳ ಅವಲೋಕನಾ ಸಭೆ ದಿನಾಂಕ 30 ಅಕ್ಟೋಬರ್ 2021, ಶನಿವಾರದಂದು ವಿವೇಕಾನಂದ ಪದವಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. 35 ಗ್ರಾಮಗಳಿಂದ 76 ಗ್ರಾಮಸ್ತರು ಸೇರಿದಂತೆ 137 ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ‘ನಮ್ಮ ಗ್ರಾಮಗಳಲ್ಲಿರುವ ಶ್ರೇಷ್ಠವಾದ ಪರಂಪರೆ ಮತ್ತು ಜ್ಞಾನವನ್ನು ಉಳಿಸಿಕೊಳ್ಳಬೇಕಾಗಿದೆ. ಗ್ರಾಮವಿಕಾಸ ಯೋಜನೆಯೆಂಬ ಚಿಂತನೆಯು ಸಮಾಜದ ಅಭಿವೃದ್ಧಿಯಲ್ಲಿ […]
ಶಿಕ್ಷಣ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ, ವೆಬ್ಸೈಟ್ ಮತ್ತು ಮಾಧ್ಯಮಗಳ ಅವಶ್ಯಕತೆ ಮತ್ತು ಅನುಷ್ಠಾನ – ಕಾರ್ಯಾಗಾರ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ‘ಶಿಕ್ಷಣ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ, ವೆಬ್ಸೈಟ್ ಮತ್ತು ಮಾಧ್ಯಮಗಳ ಅವಶ್ಯಕತೆ ಮತ್ತು ಅನುಷ್ಠಾನ’ ವಿಷಯದ ಕುರಿತಾಗಿ ಒಂದು ದಿನದ ಕಾರ್ಯಾಗಾರವು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 23 ಅಕ್ಟೋಬರ್ 2021 ರಂದು ನಡೆಯಿತು. ಕಾರ್ಯಾಗಾರಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಯಂ. ಕೃಷ್ಣ ಭಟ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ […]
ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಅನ್ನು ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿ ಪರಿಗಣಿಸಲು ಮನವಿ

ಅಕ್ಟೋಬರ್ 2, 2021 ರಂದು ಬೆಂಗಳೂರಿನಲ್ಲಿ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ. ತಿಪ್ಪೇಸ್ವಾಮಿ ಅವರ ಉಪಸ್ಥಿತಿಯಲ್ಲಿ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಅಶ್ವತ್ಥನಾರಾಯಣ್ ಅವರನ್ನು ಭೇಟಿಯಾಗಿ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಅನ್ನು ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿ ಪರಿಗಣಿಸಲು, ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.
ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ

ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮತ್ತು ನೈಪುಣ್ಯ ಸಾಧಕರ ಸಮ್ಮಿಲನ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕ್ಯಾಂಪಸ್ನಲ್ಲಿ ದಿನಾಂಕ 20 ಸೆಪ್ಟೆಂಬರ್ 2021 ರಂದು ಅಪರಾಹ್ನ 2.30 ರಿಂದ ಪ್ರಾರಂಭಗೊಂಡು 4.30ರ ತನಕ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಕು. ಶೋಭಾ ಕರಂದ್ಲಾಜೆ ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆಗೊಂಡ 15 ಪುಸ್ತಗಳು: • ಮಧು ಮಾಹಿತಿ […]
ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮತ್ತು ನೈಪುಣ್ಯ ಸಾಧಕರ ಸಮ್ಮಿಲನ

ಕೊರೋನಾ ನಂತರದ ದಿನಗಳಲ್ಲಿ ಉಂಟಾದ ಸಂದಿಗ್ಧ ಪರಿಸ್ಥಿತಿಯ ನಡುವೆ ಜನ ಸಾಮಾನ್ಯರಲ್ಲಿ ಹೊಸತೊಂದು ಆಶಾಕಿರಣ ಮೂಡಿಸುವ ಸಲುವಾಗಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದಲ್ಲಿ 20 ಸ್ಥಳಗಳಲ್ಲಿ ಪ್ರತ್ಯೇಕ 27 ವಿಷಯಗಳಲ್ಲಿ 30ಗಂಟೆಗಳ ತರಬೇತಿ ನಡೆಯಿತು. ವಿವಿದ ಸಹಕಾರಿ ಸಂಘಗಳು, ಸಂಘ ಸಂಸ್ಥೆಗಳು, ದಾನಿಗಳ ಸಹಾಯದಿಂದ ಒಟ್ಟು 4536 ಜನರಿಗೆ ತರಬೇತಿ ನೀಡಲಾಯಿತು. ತರಬೇತಿ ಪಡೆದವರಲ್ಲಿ ಅನೇಕರು […]
Felicitation to Rakeshkrishna

Vivekananda English Medium School has organized a programme to felicitate Rakeshkrishna on 27.01.2021 in school premises for achieving Bala Puraskara Award from our honorable Prime Minister Shri Narendra Modi. The dignitaries on dais were Shri Dr. Prabhakar Bhat Kalladka, the President of Vivekananda Vidyavardhaka Sangha Dr. K.M Krishna Bhat, the secretary of Vivekananda Vidyavardhaka Sangha, […]
ಆಮಂತ್ರಣ : ವಿವೇಕಾನಂದ ಜಯಂತಿ

ನರೇಂದ್ರ ಪದವಿ ಪೂರ್ವ ಕಾಲೇಜು: ಕಟ್ಟಡದ ಭೂಮಿಪೂಜಾ ಹಾಗೂ ಶಿಲಾನ್ಯಾಸ ಕಾರ್ಯಕ್ರಮ

ನರೇಂದ್ರ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಉದ್ದೇಶಿತ ಕಟ್ಟಡದ ಭೂಮಿಪೂಜಾ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ 17/02/2018 ಬೆಳಗ್ಗೆ ಸಮಯ 8.30 ಕ್ಕೆ ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಶ್ರೀ ಅನಂತಕುಮಾರ್ ಹೆಗಡೆ, ಕೌಶಲ್ಯ ಅಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಸಚಿವರು ಭಾರತ ಸರಕಾರ. ತದ ನಂತರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ದ ಅಧ್ಯಕ್ಷರಾಗಿರುವ ಶ್ರೀಯುತ ಡಾ| ಪ್ರಭಾಕರ ಭಟ್ ವಹಿಸಿದ್ದರು. […]
ಫೆ. 17 ನರೇಂದ್ರ ಪದವಿಪೂರ್ವ ಕಾಲೇಜು ಕಟ್ಟಡದ ಭೂಮಿಪೂಜಾ & ಶಿಲಾನ್ಯಾಸ ಕಾರ್ಯಕ್ರಮ
