Shri Bharathi Primary School, Alankaru
ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು

ಶೈಕ್ಷಣಿಕ ಚಟುವಟಿಕೆಗಳತ್ತ ಕಿರುನೋಟ

‘ವಸುಧೈವ ಕುಟುಂಬಕಮ್’ ಎಂಬುದು ಭಾರತೀಯ ಶಿಕ್ಷಣದ ಲಕ್ಷ್ಯ. ಸಂಪೂರ್ಣ ಪೃಥ್ವಿಯ ಮೇಲೆ ಮಾನವ ಜನಾಂಗಕ್ಕೆ ಪ್ರೇರಣೆ ನೀಡಿದ ವಸುಂದರೆ -ಭಾರತ. ‘ಶಿಕ್ಷಣದಲ್ಲಿ ಭಾರತೀಯತೆ’ ಎಂಬ ಆಶಯದೊಡನೆ ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದಲ್ಲಿ, ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ, ಶ್ರೀ ಸುಬ್ರಹ್ಮಣ್ಯ  ಮಠಧೀಶರ  ಆಶೀರ್ವಾದದೊಂದಿಗೆ ತಾ.೨೭.೦೬.೧೯೯೪ ರಂದು  ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪನೆಯಾಯಿತು.

‘ಶ್ರೀ ಭಾರತೀ ವಿದ್ಯಾಮಂದಿರ’ವೆಂಬ ಸಮರ್ಥ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದೆ.
ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಸಂಸ್ಥೆ ಇಂದು ೫ ಎಕರೆ ವಿಶಾಲವಾದ ನಿವೇಶನದಲ್ಲಿ ಸ್ವಂತ ಕಟ್ಟಡ ಹಾಗೂ ಕ್ರೀಡಾಂಗಣದೊಂದಿಗೆ ಅಲಂಕಾರ ಪ್ರಾಯವಾಗಿ ಮೆರೆಯುತ್ತಿದೆ.

ನಮ್ಮಿ ಸರಸ್ವತಿ ಮಂದಿರವು ‘ವಿದ್ಯಾಭಾರತಿ’ ಎಂಬ ಅಖಿಲ ಭಾರತೀಯ ಶಿಕ್ಷಣ ಸಂಸ್ಥೆಯೊಂದಿಗೆ  ಸಂಲಗ್ನಗೊಂಡು ಅದರ ಪರಿಕಲ್ಪನೆಯಂತೆ ಕಾರ್ಯವೆಸಗುತ್ತಿದೆ. ಪಂಚಮುಖೀ ಶಿಕ್ಷಣ ನಮ್ಮ ಗುರಿ. ಅಂದರೆ ಯೋಗ,ಸಂಗಿತ,ನೈತಿಕ,ಸಂಸ್ಕೃತ  ಹಾಗೂ ಶಾರೀರಿಕ ಶಿಕ್ಷಣಗಳನ್ನು ಅಳವಡಿಸಿ ವ್ಯಕ್ತಿತ್ವದ ಸರ್ವಾಂಗೀಣ  ಬೆಳವಣಿಗೆಗೆ ಸಹಕರಿಸುವುದು. ಇಲ್ಲಿನ ಶಿಕ್ಷಕಿಯರು ‘ಮಾತಾಜಿ’ ಎಂದೂ,  ಶಿಕ್ಷಕರು ‘ಶ್ರೀಮಾನ್’ ಎಂದೂ ಕರೆಯಿಸಿಕೊಂಡು ಮಕ್ಕಳೊಂದಿಗೆ ಪಾಠ-ಊಟ-ಆಟಗಳಲ್ಲಿ ತೊಡಗಿರುತ್ತಾರೆ. ಮಕ್ಕಳು ‘ಜೈ ಶ್ರೀರಾಮ್ ‘ ಎಂಬ ಪದದೊಂದಿಗೆ ಗೌರವ ಸೂಚಿಸುವುದು ಇಲ್ಲಿನ  ಸಂಪ್ರದಾಯ. ಭಾರತೀಯ ಸಂಸ್ಕೃತಿಯ ಉಡುಗೆ-ತೊಡುಗೆಗಳು ಅಂದರೆ ತಿಲಕ, ಬಳೆ, ಹೂ ಇತ್ಯಾದಿ, ಆಚಾರ- ವಿಚಾರಗಳು ಅಂದರೆ ಸ್ನಾನ ಮಾಡುವುದು, ದೇವರಿಗೆ ಹಾಗೂ ಗುರುಹಿರಿಯರಿಗೆ ನಮಿಸುವುದು ಮೊದಲಾದುವು ಇಲ್ಲಿನ ವಿಶೇಷತೆಗಳು. ಬೆಳಗ್ಗೆ  ‘ಸರಸ್ವತಿ – ವಂದನ’ ದೊಂದಿಗೆ ಶಾಲಾರಂಭವಾದರೆ, ಮಧ್ಯಾಹ್ನ ‘ವಂದೇಮಾತರಂ’ ಹಾಗೂ ಸಾಯಂಕಾಲ ಐಕ್ಯಮಂತ್ರಗಳು ಪ್ರಾರ್ಥನೆಗಳು, ಮಧ್ಯಾಹ್ನ ಭೋಜನ ಮಂತ್ರದೊಂದಿಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಹಾಗೂ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಿಂದ ಅನುಗ್ರಹ ಮಾಡಿದ ಅನ್ನ ಪ್ರಸಾದದ ಸ್ವೀಕಾರ, ಮಕ್ಕಳಿಗೆ ಬಡಿಸುವ ಕಲೆಯಲ್ಲೂ ನೈಪುಣ್ಯವನ್ನು ಪಡೆಯುವ ಅವಕಾಶ. ಇಲ್ಲಿ ಮಾತಾಜಿಯವರು ಮಮತೆಯ ತಾಯಂದಿರಂತೆ  ಬಡಿಸುತ್ತಾರೆ. ಬೋಧನಾ ಮಾಧ್ಯಮ ಮಾತೃಭಾಷೆ. ಆದಿ ಭಾಷೆಯಾದ ಸಂಸ್ಕೃತಕ್ಕೆ ಪ್ರಾಧಾನ್ಯ, ಇತರ ಭಾಷೆಗಳಾಗಿ ಹಿಂದಿ ಮತ್ತು ಇಂಗ್ಲೀಷನ್ನು ಬೋಧಿಸಲಾಗುತ್ತಿದೆ. ಸುಭಾಷಿತ ,ಅಮೃತವಚನ, ಸ್ವದೇಶಿ ಪಂಚಾಂಗ, ಏಕತ್ಮತಾ  ಸ್ತೋತ್ರ, ಭಗವದ್ಗೀತೆ, ರಾಮಾಯಣದ ಶ್ಲೋಕಗಳು, ನೈಮಿತ್ತಿಕ ಶ್ಲೋಕಗಳು ಸಂಸ್ಕಾರಶಿಕ್ಷಣದ ಬಿಂದುಗಳು, ಯೋಗಾಭ್ಯಾಸಕ್ಕೆ ಸಂಬಂಧಿಸಿ ಕೆಲವು ಪ್ರಾಥಮಿಕ ಆಸನಗಳು, ಸಂಗೀತದ ದೃಷ್ಟಿಯಿಂದ ದೇಶಭಕ್ತಿಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳು ,ನೈತಿಕ ಶಿಕ್ಷಣದಲ್ಲಿ ಮಹಾಪುರುಷರ ಹಾಗೂ ದೇಶಭಕ್ತರ ಕಥೆಗಳು, ಶಾರೀರಿಕ ಶಿಕ್ಷಣದಲ್ಲಿ ದೇಶಿಯ ಆಟಗಳು – ಪಾಠಯೇತರ  ಚಟುವಟಿಕೆಗಳು. ಮಾತ್ರವಲ್ಲದೆ ಚಿತ್ರಕಲೆ ,ಕರಾಟೆ ಹಾಗೂ ಪಾರಂಪರಿಕ ಕಲೆಯಾದ ಯಕ್ಷಗಾನವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಕಲಿಸುವ ವ್ಯವಸ್ಥೆಯಿದೆ. ಪ್ರತಿ ಶನಿವಾರದಂದು   ಸಾಮೋಹಿಕ ಭಜನಾ ಕಾರ್ಯಕ್ರಮವೂ ಇದೆ. ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವಗಳಲ್ಲಿ ಪ್ರತಿ ವಿದ್ಯಾರ್ಥಿಯೂ ಭಾಗಿಯಾಗುತ್ತಾನೆ.

ರಾಷ್ಟ್ರೀಯ ಹಬ್ಬಗಳ ಜೊತೆಗೆ ಸಾಂಸ್ಕೃತಿಕ  ಹಬ್ಬಗಳಾದ ರಕ್ಷಾಬಂಧನ, ಗುರುಪೂರ್ಣಿಮೆ, ಶಾರದ ಪೂಜೆ, ಮಕ್ಕಳಿಗಾಗಿ ಕೃಷ್ಣವೇಷ , ಸಾಮೋಹಿಕ ಹುಟ್ಟುಹಬ್ಬ ಮುಂತಾದುವುಗಳನ್ನು ಆಚರಿಸಲಾಗುತ್ತಿದೆ. ಸಾಮೋಹಿಕ ಹುಟ್ಟುಹಬ್ಬದಂದು ಅಖಂಡ ಭಾರತದ ನಕ್ಷೆಯಲ್ಲಿ ಪ್ರತಿಮಗುವೂ ತನ್ನ ಮಾತೆಯೊಡಗೂಡಿ ಹಣತೆಯನ್ನು ಪ್ರಜ್ವಲಿಸಿ ಮಾತೆಯಿಂದ ಆಶೀರ್ವಾದ ಪಡೆಯುವ ಕ್ರಮವಿದೆ. ‘ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರ ‘ವಾಗಬೇಕೆಂಬ ದೃಷ್ಟಿಯಿಂದ ವರಮಹಾಲಕ್ಷ್ಮೀ ಪೂಜೆಯ ಆಚರಣೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮವಿರುತ್ತದೆ.

ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಯ ನಾಲ್ಕು ಆಧಾರ ಸ್ತಂಭಗಳು. ರಕ್ಷಕ-ಶಿಕ್ಷಕ /ಆಡಳಿತ ಮಂಡಳಿ ಸಭೆಯಲ್ಲದೆ, ವರ್ಷದಲ್ಲಿ ಒಂದೆರಡು ಬಾರಿ ಮಾತೆಯರನ್ನು ಒಟ್ಟುಗೂಡಿಸಿ, ವಿದ್ಯಾರ್ಥಿಗಳ ಪ್ರಗತಿ-ನ್ಯೂನತೆಗಳ ಬಗ್ಗೆ ಆತ್ಮೀಯ ಸಲಹೆ ಸೂಚನೆಗಳ ವಿಚಾರ ವಿನಿಮಯ ನಡೆಯುತ್ತದೆ. ಇದು ವಿದ್ಯಾಭ್ಯಾಸದ ಪ್ರಗತಿಗೆ ಪೂರಕವಾಗಿದೆ. ಇವೆರೆಲ್ಲರಿಗೂ ಹೃತ್ಪೂರ್ವಕ ಅಭಿನದಂದನೆಗಳು. ಶೈಕ್ಷಣಿಕ ವಿಷಯದಲ್ಲಿ ನಿರ್ದೇಶನ ನೀಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳು.  ನಮ್ಮ ಸಂಸ್ತೆಯ ಹಿರಿಯಣ್ಣನಂತೆ ಸಹಕರಿಸುತ್ತಿರುವ ಶ್ರೀ ದುರ್ಗಾಂಬಾ ಪ್ರೌಢಶಾಲೆ ,  ದ .ಕ .ಜಿ .ಪ .ಹಿ .ಪ್ರಾ .ಶಾಲೆ, ಆಲಂಕಾರು ಇವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಸಂಸ್ಥೆಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿದು ಎಲ್ಲ ಊರ- ಪರವೂರ ಸಂಘ ಸಂಸ್ಥೆಗಳು ಹಾಗೂ ವಿದ್ಯಭಿಮಾನಿಗಳನ್ನು ಸದಾ ಸ್ಮರಿಸುತ್ತಾ, ಇನ್ನು ಮುಂದೆಯು ಎಲ್ಲರ ಸಹಕಾರವನ್ನು  ಬಯಸುತ್ತೇನೆ. ಶ್ರೀ ದೇವರ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

  ವಿದ್ಯಾ ದದಾತಿ ವಿನಯಂ” 

 ಶ್ರೀಮತಿ  ಕನಕಲತಾ ಎಸ್.ಎನ್.ಭಟ್ 
ಮುಖ್ಯ ಮಾತಾಜಿ
ಶ್ರೀ ಭಾ.ಹಿ.ಪ್ರಾ. ಶಾಲೆ ಆಲಂಕಾರು.

 

 

ನಾಡಿಗೇ ಮಾದರಿ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ

ಮಾನಸಿಕವಾಗಿ ಸಬಲಗೊಳಿಸುವ, ಚರಿತ್ರೆಯನ್ನು ನಿರ್ಮಿಸುವ, ಬುದ್ಧಿಯನ್ನು ವಿಕಸಿತಗೊಳಿಸುವ ಹಾಗೂ ವ್ಯಕ್ತಿಯನ್ನು ಸ್ವಾವಲಂಬಿಗೊಳಿಸುವ ಶಿಕ್ಷಣವೇ ನಿಜವಾದ ಶಿಕ್ಷಣ

ಸ್ವಾಮಿ ವಿವೇಕಾನಂದ 

ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾದುದು ಕೇವಲ ಆಲಂಕಾರು ಸುತ್ತಮುತ್ತಲೆಲ್ಲೂ ಶಾಲೆಗಳಿರವೆಂದಲ್ಲ. ಬದಲಾಗಿ, ಅಲ್ಲಿರುವ ಸರಕಾರೀ ಶಾಲೆಗಳಿಗೆ ತನ್ನದೇ ಆದ ಇತಿಮಿತಿಗಳಿರುತ್ತವೆ, ಕಟ್ಟುಪಾಡುಗಳಿರುತ್ತವೆ. ಇಂತಹ ಶಿಕ್ಷಣ ಮಕ್ಕಳನ್ನು ಬುದ್ಧಿವಂತರನ್ನಾಗಿಸುತ್ತದೆಯೇ ಹೊರತು ಪ್ರಜ್ಞಾವಂತ ನಾಗರಿಕರನ್ನಾಗಿಸುವುದಿಲ್ಲ ಎಂಬುದನ್ನು ಅರಿತು, ಮೆಕಾಲೆ ಪದ್ಧತಿಯ ಶಿಕ್ಷಣದ ಬದಲಾಗಿ, ಮಕ್ಕಳಿಗೆ ತಮ್ಮ ಮುಂದಿನ ಬದುಕಿಗೆ ಬೇಕಾದ ನಡವಳಿಕೆಗೆ ಬೇಕಾದ ನಡವಳಿಕೆಗಳು ತಿಳುವಳಿಕೆಗಳನ್ನು ನೀಡುವ ಸದುದ್ದೇಶದಿಂದ 1994 ರಲ್ಲಿ ಆರಂಭವಾಯಿತು. ನಮ್ಮ ಪ್ರಾಚೀನ ಪದ್ಧತಿಯ ಗುರುಕುಲ ಪದ್ಧತಿಯ ಶಿಕ್ಷಣ, ಮಾತೃಭಾಷಾ ಮಾಧ್ಯಮದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಹಾಗೂ ಮುಂದಿನ ಉನ್ನತ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುವ ಉದ್ದೇಶವನ್ನು ಇಟ್ಟುಕೊಂಡಿದೆ ಈ ಭಾರತೀ ವಿದ್ಯಾಸಂಸ್ಥೆ.

ಸಂಸ್ಕೃತಿ ನಡವಳಿಕೆ

ವಿದ್ಯಾ ದಧಾತಿ ವಿನಯಂ ಎಂಬಂತೆ ಗುರುಹಿರಿಯರಿಗೆ ವಿಧೇಯರಾಗಿರುವುದು, ದೇವರಲ್ಲಿ ಭಕ್ತಿ, ಗೌರವವನ್ನು ಕಾಣುವುದು ಮೊದಲಾದ ನಮ್ಮ ಸಂಸ್ಕೃತಿಯನ್ನು ಪ್ರಾಥಮಿಕ ಹಂತದಲ್ಲೇ ತಿಳಿಹೇಳಲಾಗುತ್ತದೆ. ಮೊದಲು ಇದನ್ನೇ ಕಲಿಕೆ ಎಂದು ತಿಳಿಯುವ ಮಕ್ಕಳು, ಮುಂದಕ್ಕೆ ಅದನ್ನೇ ರಕ್ತಗತವಾಗಿಸಿಕೊಳ್ಳುತ್ತಾರೆ.

ಅಖಿಲ ಭಾರತ ವ್ಯಾಪ್ತಿಯಲ್ಲಿರುವ ‘ವಿದ್ಯಾ ಭಾರತಿ’ ಸಂಘಟನೆ ನಮಗೆ ಮಾರ್ಗದರ್ಶನ ನೀಡುತ್ತಿದೆ. ನಮ್ಮ ಶಾಲೆಯಲ್ಲಿ ಪಂಚಮುಖಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ, ಅಂದರೆ,

 • ಯೋಗ
 • ಸಂಸ್ಕೃತ
 • ಸಂಗೀತ
 • ಇತರ ಕಲೆಗಳು
 • ಶಾರೀರಿಕ, ಮೌಲ್ಯ ಶಿಕ್ಷಣ

ಹೀಗೆ ಎಲ್ಲಾ ಚಟುವಟಿಕೆಗಳು ಪಂಚಮುಖಿ ಶಿಕ್ಷಣದ ವಿಭಾಗದಲ್ಲಿ ನಡೆಯುತ್ತವೆ. ಮಕ್ಕಳು ಆಟ ಪಾಠ ಎನ್ನುತ್ತಲೇ ತಮಗರಿವಿಲ್ಲದಂತೆಯೇ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ವಾತಾವರಣವೇ ಕಲಿಕೆಗೆ ಮೂಲ ಎನ್ನುವಂತೆ ಉತ್ತಮ ವಾತಾವರಣ ಅವರ ಕಲಿಕೆಗೆ ಪ್ರೇರಣೆ ನೀಡುತ್ತದೆ. ಗೋಡೆಯ ಮೇಲಿರುವ ಮಹಾ ಪುರುಷರ ಚಿತ್ರಪಟಗಳು ಮಕ್ಕಳ ಬದುಕಿನ ಆದರ್ಶಪ್ರಾಯವಾಗುತ್ತವೆ. ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾವಧಿಯಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಲಾಗುತ್ತದೆ.

Deeksha samarambha 2011-12

ದಿನಾಂಕ 10-06-2011 ನೇ ಶುಕ್ರವಾರ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ, ಗಣಪತಿ  ಹೋಮ ಮಾಡಿ ಆರತಿ ಬೆಳಗುವುದರೊಂದಿಗೆ  ದೀಕ್ಷಾರಂಭವನ್ನು   ಆಚರಿಸಲಾಯಿತು. ಸಭಾಧ್ಯಕ್ಷರಾಗಿ  ಆಗಮಿಸಿದ ಶ್ರೀ ನಾರಾಯಣ ಆಚಾರ್, ಮರುವOತಿಲ, ನಿವೃತ್ತ  ಶಿಕ್ಷಕರು,  ಇವರು ಒಂದನೆಯ ತರಗತಿಯ  ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸಿದರು .ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ. ಕಿಟ್ಟಣ್ಣ ರೈ ಅವನಿ, ಪೆರಾಬೆ ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ಮಂಡಳಿಯ ಸದಸ್ಯರು, ಪಾಲಕ ವರ್ಗದವರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ  ವೃಂದದವರು ಉಪಸ್ಥಿತರಿದ್ದರು.

 


 

 • ಗ್ರಾಮ ವಿಕಾಸ-ಒಂದು ಪರಿಕಲ್ಪನೆ

  ಆಲಂಕಾರು ಭಾರತಿ ಶಾಲೆಯಲ್ಲಿ ಸಮಲೋಚನಾ ಸಭೆ

  ಆಲಂಕಾರು: ಗ್ರಾಮ ವಿಕಾಸ-ಒಂದು ಪರಿಕಲ್ಪನೆ ಎಂಬ ವಿಶೇಷ ಕಾರ್ಯಕ್ರಮ ಆಲಂಕಾರು ಭಾರತಿ ಶಾಲೆಯಲ್ಲಿ ನಡೆಯಿತು.

  ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣರಾವ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಗ್ರಾಮದಲ್ಲಿ ಅನಕ್ಷರತೆಯನ್ನು ದೂರಗೊಳಿಸಬೇಕು. ಆ ಗ್ರಾಮಗಳ ಸ್ವಚ್ಛತೆ ಎಲ್ಲರೂ ಮಾಡಬೇಕು ಎಂದರು. ಊರಿನ ಸಮಸ್ಯೆಗಳನ್ನು ಕೋರ್ಟು/ಕಛೇರಿಗಳಿಲ್ಲದೆಯೇ ಮುಗಿಸುವ ಪ್ರಯತ್ನಗಳು ಗ್ರಾಮದಲ್ಲಿ ಆಗಬೇಕು ಎಂದು ತಿಳಿಸಿದರು. ಮರಗಳನ್ನು ನೆಡುವ ಕಾರ್ಯದಲ್ಲಿ ನಮ್ಮನ್ನು ತೊಡಗಿಸಬೇಕು. ಆ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಬೇಕು ಎಂದರು.

  ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಎಲ್ಲರೂ ಇಚ್ಛಾ ಶಕ್ತಿಯಿಂದ ಭಾಗವಹಿಸಬೇಕು ಎಂದರು.

  ಸಮಾರಂಭದಲ್ಲಿ ಶಾಲಾ ಮುಖ್ಯ ಮಾತಾಜಿ ಕನಕಲತಾ ಎಸ್.ಎನ್. ಭಟ್, ಗ್ರಾಮವಿಕಾಸನ ಪ್ರಮುಖ ಇಂದುಶೇಖರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ದಯಾನಂದಗೌಡ ಆಲಡ್ಕ, ಆಲಂಕಾರು ಬಿಜೆಪಿ ಗ್ರಾಮಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ದನಗೌಡ ಕಯ್ಯಪ್ಪೆ, ಆಲಂಕಾರುಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಗೌಡ ಬಡ್ಡಮೆ, ಶಾಲಾ ಆಡಳಿತ ಮಂಡಳಿ ಸದಸ್ಯ ಈಶ್ವರ ಭಟ್ ಕೊಂಡಾಡ್ತಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನ ಸೇವಾಪ್ರತಿನಿಧಿ ಶಾರದಾ ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ಭವಾನಿ, ಶಿಶುಮಂದಿರದ ಕಾರ್ಯದರ್ಶಿ ಜ್ಞಾನಪ್ರಾಭಾ, ಮಾತಾಜಿ ಅನಂತಾವತಿ, ಶಾಲಿನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಯದುಶ್ರೀ ಆನೆಗುಂಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತ ಮಾಡಿದರು. ಶಿಕ್ಷಕ ಚಂದ್ರಹಾಸ್ ಕೆ.ಸಿ. ಧನ್ಯವಾದ ನೀಡಿದರು.

 • ಶ್ರೀ ಭಾರತಿ ಶಾಲೆ ಆಲಂಕಾರಿನಲ್ಲಿ ಸುದ್ದಿ ಭಾರತಿ ಉದ್ಘಾಟನೆ

  ಆಲಂಕಾರು;-ಇಲ್ಲಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿ -ಭಾರತಿ ಎಂಬ ಪತ್ರಿಕಾಸಂಘ ಸೋಮವಾರಉದ್ಘಾಟನೆಗೊಂಡಿತು.

  ಕಡಬ ವಲಯ ಪತ್ರಕರ್ತರ ಸಂಘದಅಧ್ಯಕ್ಷಕೆ.ಎಸ್ ಬಾಲಕೃಷ್ಣ ಕೊಲ ದೀಪ ಬೆಳಗಿಸಿ ಸಂಘ ಉದ್ಘಾಟಿಸಿದರು. ನಂತರ ನಡೆದಕಾರ್ಯಕ್ರಮದಲ್ಲಿ ಸುದ್ದಿ ಭಾರತಿ ಸಂಘವನ್ನು ಉದ್ದೇಶಿಸಿ ಮಾತನಾಡಿದರು.

  photo1

  photo2

  ಪತ್ರಿಕೆಗಳು ಸ್ವಾತಂತ್ಯ್ರಕಾಲದಲ್ಲಿ ಹೋರಾಟಗಾರರಿಗೆ ಪ್ರೇರಣೆ ನೀಡುವುದು,ನಾವು ಪತ್ರಿಕೆಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಮತ್ತು ಪತ್ರಿಕೆಯನ್ನು ಮಾರುಕಟ್ಟೆಯಿಂದಕೊಂಡುಓದುವ ಸಂಸ್ಕ್ರತಿ ನಮ್ಮದಾಗಬೇಕುಎಂದರು. ಜ್ಞಾನದದಾಹ ನಮ್ಮಲ್ಲಿರಬೇಕು.ಸಾಹಿತ್ಯದ ಬರವಣಿಗೆಗೆ ಪುಸ್ತಕ ಓದಬೇಕು. ಪುಸ್ತಕ ಓದದೆ ವರದಿ ಮಾಡಲು ಸಾಧ್ಯವಿಲ್ಲ ಎಂದುಅಭಿಪ್ರಾಯವ್ಯಕ್ತ ಪಡಿಸಿದರು.ನಂತರ ಸುದ್ದಿ ಭಾರತಿ ಸಂಘದವರುಆರಂಭಶೂರತ್ವದ ಕೆಲಸ ಮಾಡಬೇಡಿಎಂದು ಕಿವಿ ಮಾತು ಹೇಳಿದರು. ಭಾರತಿ ಶಾಲೆಯಿಂದ ಬಹಳಷ್ಟು ಲೇಖನ,ಕಥೆ, ವರದಿಗಳು ಬರುವಂತಾಗಲಿ ಎಂದು ಶುಭ ಹಾರೈಸಿದರು.

  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಮುಖ್ಯಮಾತಾಜಿಕನಕಲತಾಎಸ್.ಎನ್ ಭಟ್‌ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಶ್ರೀಮಾನ್ ಯದುಶ್ರೀ ಆನೆಗುಂಡಿ, ಮಾತಾಜಿಆಶಾ.ಎನ್.ರೈ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಶ್ರೀಮಾನ್ ಚಂದ್ರಹಾಸ್ ಕೆ.ಸಿ ಸ್ವಾಗತಿಸಿ, ಶ್ರೀಮಾನ್ ಮಹೇಶ್.ಯನ್ ನಿರೂಪಿಸಿದರು.ಶ್ರೀಮಾನ್ ಹರೀಶ್‌ಧನ್ಯವಾದವನ್ನು ನೀಡಿದರು.

 • ದೀಕ್ಷಾ ಸಮಾರಂಭ 2011-12

  ದಿನಾಂಕ ೧೦-೦೬-೨೦೧೧ನೇ ಶುಕ್ರವಾರ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ, ಗಣಪತಿ  ಹೋಮ ಮಾಡಿ ಆರತಿ ಬೆಳಗುವುದರೊಂದಿಗೆ  ದೀಕ್ಷಾರಂಭವನ್ನು   ಆಚರಿಸಲಾಯಿತು. ಸಭಾಧ್ಯಕ್ಷರಾಗಿ  ಆಗಮಿಸಿದ ಶ್ರೀ ನಾರಾಯಣ ಆಚಾರ್, ಮರುವOತಿಲ, ನಿವೃತ್ತ  ಶಿಕ್ಷಕರು,  ಇವರು ಒಂದನೆಯ ತರಗತಿಯ  ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸಿದರು .ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ. ಕಿಟ್ಟಣ್ಣ ರೈ ಅವನಿ, ಪೆರಾಬೆ ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ಮಂಡಳಿಯ ಸದಸ್ಯರು, ಪಾಲಕ ವರ್ಗದವರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ  ವೃಂದದವರು ಉಪಸ್ಥಿತರಿದ್ದರು.

Highslide for Wordpress Plugin