ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನೆಹರು ನಗರ ಪುತ್ತೂರು ಇಲ್ಲಿನ ಆಟೋಮೊಬೈಲ್ ಮತ್ತು
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ ವಿಷಯದ
ಬಗ್ಗೆ ಸೆಮಿನಾರ್ ಜರು ಗಿತು. ಸಂಪನ್ಮೂಲ ವ್ಯಕ್ತಿಯಾಗಿ ವಿಟ್ಲ ಸರಕಾರಿ ಐ ಟಿ ಐ ಕಾಲೇಜಿನ ಉಪನ್ಯಾಸಕ ಶ್ರೀ ಮಂಜೇಶ್
ಕುಮಾರ್ ಎಂ ಭಾಗವಹಿಸಿ ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನದ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದರು.
ಪ್ರಾಂಶುಪಾಲರಾದ ಮುರಳಿಧರ್ ಯಸ್ ಇವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ವಿಭಾಗ
ಮುಖ್ಯಸ್ಥರಾದ ವಿಷ್ಣುಮೂರ್ತಿ ಎಚ್ ಆಟೋಮೊಬೈಲ್ ವಿಭಾಗ ಮುಖ್ಯಸ್ಥರಾದ ಶಿವಶಂಕರ್ ಪಿ ಕೋರೆ
ಉಪಸ್ಥಿತರಿದ್ದರು. ಉಪನ್ಯಾಸಕ ಚಿದಾನಂದ ಎನ್ ಸ್ವಾಗತಿಸಿ, ವಿದ್ಯಾರ್ಥಿ ಅಭಿರಾಮ್ ಎಸ್ ವಂದಿಸಿದರು.
