ಇಸ್ರೋ ಸ್ವಯಂಚಾಲಿತ ಹವಾಮಾನ ವೀಕ್ಷಣಾ ಕೇಂದ್ರ ಲೋಕಾರ್ಪಣೆ

Leaf
Leaf

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸಿದ ಹವಾಮಾನ ವೀಕ್ಷಣಾ ಘಟಕದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಇಸ್ರೋದ ಈ ಕೊಡುಗೆ ಅತ್ಯಂತ ಉಪಕಾರಿಯಾಗಿದ್ದು, ಇದನ್ನು ಇಂಜಿನಿಯರಿಂಗ್ ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಬಳಸಿಕೊಂಡು ಜನಸಾಮಾನ್ಯರಿಗೆ ಮತ್ತು ಸ್ಥಳೀಯ ರೈತಾಪಿ ವರ್ಗಕ್ಕೆ ಇದರ ಪೂರ್ಣ ಪ್ರಯೋಜನವನ್ನು ನೀಡುತ್ತಿರುವ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಸ್ರೋದ ವಿಜ್ಞಾನಿ ಡಾ. ಜಗದೀಶ್ ಅವರು ಸೂರ್ಯ ಶಕ್ತಿಯ ಮೂಲ ಇದರಿಂದಾಗಿಯೇ ಹವಾಮಾನದ ಬದಲಾವಣೆಗಳಾಗುತ್ತವೆ, ಇದನ್ನು ಸ್ಥೂಲವಾಗಿ ಅಧ್ಯಯನ ಮಾಡುವಷ್ಟು ವಿಷಯಗಳು ಸಂಶೋಧನಾನಿರತರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದು ನುಡಿದರು.

ಮತ್ತೋರ್ವ ಅತಿಥಿ ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ ಶ್ರೀ. ವಿ ವಿ ಭಟ್  ಹವಾಮಾನ ವೀಕ್ಷಣಾ ಕೇಂದ್ರದ ಸ್ಥೂಲ ಚಿತ್ರಣವನ್ನು ನೀಡಿದರು. ಪ್ರಕೃತಿಯ ಬಗ್ಗೆ ಮಾನವನ ತಿಳುವಳಿಕೆ ಅತೀ ಕಡಿಮೆ, ಇಂತಹ ಕೇಂದ್ರಗಳ ಸಹಕಾರದಿಂದ ನಿಖರವಾದ ಮಾಹಿತಿಗಳನ್ನು ಪಡೆಯಬಹುದು ಎಂದು ಹೇಳಿದರು
ಕಾಲೇಜಿನ ಕೋಶಾಧಿಕಾರಿಗಳಾದ ಸೇಡಿಯಾಪು ಜನಾರ್ಧನ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಸಹಸಂಸ್ಥೆಗಳ ಪ್ರಾಂಶುಪಾಲರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಸಿವಿಲ್ ವಿಭಾಗ ಮುಖ್ಯಸ್ಥ ಶಿವರಾಮ್ ವಂದನಾರ್ಪಣೆಗೈದರು. ಉಪನ್ಯಾಸಕಿಯರಾದ ಪ್ರಭಾ ಹಾಗೂ ಜೋವಿಟ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

Related News

News
08/02/2025

ವಿವೇಕ ಜಯಂತಿ ಆಚರಣೆ-2025 ಗುರುವಿನಿಂದ ಪಡೆದ ಉತ್ಕೃಷ್ಟ ವಿಚಾರಗಳ ಚೈತನ್ಯ ರೂಪ ಶಿಷ್ಯರು – ಡಾ. ಜಿ.ಬಿ ಹರೀಶ್.

ವೀರಸಾವರ್ಕರ್ ಹೋರಾಟದ ಹಾದಿ ಯುವ ಜನತೆಗೆ ಮಾದರಿಯಾಗಲಿ
News
11/01/2025

ವೀರಸಾವರ್ಕರ್ ಹೋರಾಟದ ಹಾದಿ ಯುವ ಜನತೆಗೆ ಮಾದರಿಯಾಗಲಿ: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಕಸಿತ ಭಾರತ – ವೀರ ಸಾವರ್ಕರ್ ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಸಮಾರೋಪ
News
11/01/2025

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಸಮಾರೋಪ