ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ವತಿಯಿಂದ ದಿನಾಂಕ 16-11-2014 ರಿಂದ 18-11-2014 ರವರೆಗೆ ರಾಜಸ್ಥಾನದ ಬಿಕನೆರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಿಶೋರವರ್ಗ ವಿಭಾಗದಲ್ಲಿ ವಿಷ್ಣುಕೀರ್ತಿ ಹಾಗೂ ಪ್ರನ್ವಿತ್ ಆಳ್ವ -ಇನೋವೇಟಿವ್ ವಿಭಾಗದಲ್ಲಿ ಪ್ರದರ್ಶಿಸಿದ್ದ ಸ್ಪೈ ಮೇಷೀನ್ ಮಾದರಿಯು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.
Swtcha Bharath Abhiyana

More than 800 highschool students of Vivekananda Kannada and English medium school participated in swacha Bharat andolan at Puttur… Also more than 2000 college students participated in the same, selected 150 centres of Puttur town and cleaning done……
One Day Workshop on Research Methodology 09-08-2014
ವಿವೇಕಾನಂದ ಪ್ರತಿಮೆಗೆ ಡಿ. ವಿ. ಸದಾನಂದಗೌಡರಿಂದ ಪುಷ್ಪಾರ್ಚನೆ
ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೂತನ ಸಚಿವರ ಭೇಟಿ

ಕೇಂದ್ರ ರೈಲ್ವೆ ಸಚಿವರಾದ ಡಿ. ವಿ. ಸದಾನಂದ ಗೌಡ ಮತ್ತು ಸಂಸದ ಶ್ರೀ ನಳೀನ್ ಕುಮಾರ್ ಕಟೀಲ್‌ರವರು ಇಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ – ಸಂಸ್ಥೆಗಳಿಗೆ ಭೇಟಿ ನೀಡಿದರು. ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಡಿ. ವಿ. ಸದಾನಂದ ಗೌಡ ಮತ್ತು ಶ್ರೀ ನಳೀನ್ ಕುಮಾರ್ ಕಟೀಲ್‌ರವರನ್ನು ಸನ್ಮಾನಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಹಿರಿಯರು ಹಾಗೂ ಪುತ್ತೂರು ನಗರದ ಗಣ್ಯರು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆ ಸಮಾರೋಪ ಸಮಾರಂಭ

ವಿವೇಕಾನಂದ ಜಯಂತಿ ಕಾರ್ಯಕ್ರಮ
ಇಸ್ರೋ ಸ್ವಯಂಚಾಲಿತ ಹವಾಮಾನ ವೀಕ್ಷಣಾ ಕೇಂದ್ರ ಲೋಕಾರ್ಪಣೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸಿದ ಹವಾಮಾನ ವೀಕ್ಷಣಾ ಘಟಕದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಇಸ್ರೋದ ಈ ಕೊಡುಗೆ ಅತ್ಯಂತ ಉಪಕಾರಿಯಾಗಿದ್ದು, ಇದನ್ನು ಇಂಜಿನಿಯರಿಂಗ್ ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಬಳಸಿಕೊಂಡು ಜನಸಾಮಾನ್ಯರಿಗೆ ಮತ್ತು ಸ್ಥಳೀಯ ರೈತಾಪಿ ವರ್ಗಕ್ಕೆ ಇದರ ಪೂರ್ಣ ಪ್ರಯೋಜನವನ್ನು ನೀಡುತ್ತಿರುವ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ […]
Inauguration of ISRO Autumatic Weather Station
Viveka Ratha Yatra

Viveka Ratha Yatra program conducted by Ramakrishna mata, Ramakrishna mission Karnataka shakhe and Ramakrishna – vivekananda bhavaprachara parishath in connection with 150th birth anniversary of Swami Vivekananda on 7-11-2013 at 9.00 am in front of Vivekananda Campus.
ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಉಪ್ಪಿನಂಗಡಿ: ಹಿಂದೂ ಸೇವಾ ಪ್ರತಿಷ್ಠಾನ ಸಮಾಜದ ಬಡ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಪುಸ್ತಕಗಳನ್ನು ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ವಿತರಿಸಲಾಯಿತು. ಪುಸ್ತಕ ವಿತರಣೆಯನ್ನು ನೆರವೇರಿಸಿ ಮಾತನಾಡಿದ ,ಉಪ್ಪಿನಂಗಡಿ ಸಿ ಎ ಬ್ಯಾಂಕ್ ನಿರ್ದೇಶಕಯತೀಶ್ ಶೆಟ್ಟಿ ಸುವ್ಯ ಮಾತನಾಡಿಸತ್ ಪಾತ್ರರಿಗೆ ನೀಡುವದಾನ ಭಗವಂತನ ಪ್ರೀತಿಗೆ ಪಾತ್ರವಾಗುವುದಲ್ಲದೆ, ಭಗವಂತನದಯೆಯಿಂದ ಲಭಿಸಿದ ಸಂಪತ್ತು ಭಗವಂತನ ಸೇವೆಗೆ ವಿನಿಯೋಗವಾದ ಪುಣ್ಯ ಪ್ರಾಪ್ತವಾಗುವುದು . ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಈ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವ ಹಿಂದೂ […]
ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಉಪ್ಪಿನಂಗಡಿ: ಭಕ್ತಿ-ಶಕ್ತಿ-ಯುಕ್ತಿ ಯಿಂದ ಧರ್ಮ ಸಂಸ್ಥಾಪನೆಗೈದ ಶ್ರೀ ಕೃಷ್ಣನ ಜೀವನವೇ ಮನು ಕುಲಕ್ಕೆ ಆದರ್ಶ ಪ್ರಾಯವಾಗಿದ್ದು, ಸಮಾಜದಲ್ಲಿ ಮೇಲೈಸುವ ದುಷ್ಠ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇಡೀ ಸಮಾಜ ಶ್ರೀ ಕೃಷ್ಣನ ಆದರ್ಶವನ್ನು ಪಾಲಿಸಬೇಕಾಗಿದೆ ಎಂದು ಚಿಂತಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹ ಚಂದ್ರಶೇಖರ್ ಮರ್ಧಾಳ ತಿಳಿಸಿದರು. ಅವರು ಉಪ್ಪಿನಂಗಡಿಯ ಶ್ರೀ ಮಾಧವ ಶಿಶುಮಂದಿರದಲ್ಲಿ ಬುಧವಾರದಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಧಾಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಮಾಜದ ನಾನಾ ಕ್ಷೇತ್ರದಲ್ಲಿ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ […]
ರಕ್ಷಬಂಧನ ಉತ್ಸವ

ಉಪ್ಪಿನಂಗಡಿ : ಲೋಕಾ ಸಮಸ್ತ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಹಿಂದೂಧರ್ಮ ಸಂಸ್ಕೃತಿಯಲ್ಲಿ ಸಹೋದರತೆಯ ಬಾಂಧವ್ಯವನ್ನು ಬೆಸೆದು ಸಾಮರಸ್ಯದ ಬಾಳಿಗೆ ಪೂರಕವಾಗಿ ರಕ್ಷಬಂಧನ ಉತ್ಸವವು ಅನಾದಿಕಾಲದಿಂದ ನಡೆಯುತ್ತಿದ್ದು, ಯುವ ಪೀಳಿಗೆಗೆ ಅದರ ಮೌಲ್ಯವನ್ನು ತಿಳಿಸುವ ಅಗತ್ಯತೆ ಹೆಚ್ಚಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖ್ ರವೀಂದ್ರ ಇಳಂತಿಲ ಕರೆ ನೀಡಿದರು. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ದಿನಾಂಕ 20/8/13ರಂದು ನಡೆದ ರಕ್ಷಾಬಂಧನ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಿದ್ದರು. ಸಮಾಜದಲ್ಲಿನ ಬೇಧ […]