ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅವಶ್ಯ – ಕ್ಯಾ.ಬ್ರಿಜೇಶ್ ಚೌಟಪುತ್ತೂರು, ಫೆ. 21: ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ಸರಸ್ ಮೇಳದಂತಹಾ ಮೇಳಗಳು ಗ್ರಾಮೀಣಾಭಿವೃದ್ಧಿಗೆ ಸಹಕಾರಿ. ಉದ್ಯೋಗದ ಸಂದರ್ಶನ ಎಂದರೆ ಅದು ಒಂದು ಕಲಿಕೆಯೇ ಆಗಿದೆ. ಒಮ್ಮೆ ಹಿನ್ನಡೆ ಆಯಿತು ಎಂದಾದರೆ ಬದುಕು ಅಲ್ಲಿಗೆ ಮುಗಿಯಿತು ಎಂದಲ್ಲ. ಕೌಶಲ್ಯ ಹಾಗೂ ಪ್ರತಿಭೆಗಳನ್ನು ನಾವು ಬೆಳೆಸಿಕೊಳ್ಳಬೇಕು. ಉದ್ಯೋಗ ಹಾಗೂ ಇನ್ನಿತರ ಅವಕಾಶಗಳ ಬಗ್ಗೆ ನಾವು ಜಾಗೃತರಾಗಬೇಕು. ಹಾಗೂ ಇತರರಿಗೆ ಆ ಬಗ್ಗೆ ಅರಿವು ಮೂಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ […]

ಪುತ್ತೂರಿನಲ್ಲಿ ಮೊಳಗಿದ ಶತ ಜಯಘೋಷ್ರಾಜ್ಯದಲ್ಲೇ ಮೊದಲ ಬಾರಿಗೆ 1500 ವಿದ್ಯಾರ್ಥಿಗಳಿಂದ ಘೋಷ್ ಪಥಸಂಚಲನ

ಪುತ್ತೂರು, ಜನವರಿ13: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇಲ್ಲಿನ ಸಮೂಹ ಸಂಸ್ಥೆಗಳು ಪ್ರತಿವರ್ಷ ನಿರಂತರವಾಗಿ ರಾಷ್ಟ್ರ ಸಂತ ವಿವೇಕಾನಂದರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ. ಈ ಭಾರಿ ವಿವೇಕಾನಂದ ಜಯಂತಿಯ ಅಂಗವಾಗಿ ಶತ ಜಯಘೋಷ್ ಪರಿಕಲ್ಪನೆಯಲ್ಲಿ ಘೋಷ್ ಪಥಸಂಚಲನ ಕಾರ್ಯಕ್ರಮ ನಡೆಯಿತು.ವಿವೇಕಾನಂದ ವಿದ್ಯಾಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು 1500 ವಿದ್ಯಾರ್ಥಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದರು.ಘೋಷ್ ಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅನಕ, ಪಣವ, ಶಂಖ, ವಂಶಿ, ತ್ರಿಭುಜ ಮತ್ತು ಜಲ್ಲರಿ, ಕೊಳಲು ಮೊದಲಾದ ವಾದ್ಯಪರಿಕರಗಳ ಜೊತೆ […]

ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ20 ಸಾವಿರ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸಮೂಹ ಗಾಯನ ಪುತ್ತೂರು, ಜ.12; ಭಾರತದ ಆತ್ಮವಾದ ಧರ್ಮ, ಸಂಸ್ಕøತಿಯನ್ನು ಜಗತ್ತಿನೆಲ್ಲೆಡೆ ಸಾರಿದ ಮಹಾನುಭಾವರು ಸ್ವಾಮಿ ವಿವೇಕಾನಂದರು. ಧರ್ಮವನ್ನೇ ತಳಹದಿಯಾಗಿರಿಸಿ, ಸಮಾಜ ಸುಧಾರಣೆ ಮಾಡಿದರು. ಅವರ ಕನಸಿನಂತೆ ಇಂದಿನ ತಲೆಮಾರು ಬದಲಾಗುತ್ತಿದೆ. ದೀರ್ಘಕಾಲದ ನಿದ್ದೆಯ ಬಳಿಕ ತಾಯಿ ಭಾರತಿ ಎಚ್ಚೆತ್ತುಕೊಳ್ಳುತ್ತಿದ್ದಾಳೆ. ಭಾರತ ಎಲ್ಲಾ ರಂಗದಲ್ಲೂ ಕೀರ್ತಿ ಪಸರಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.ಅವರು ಪುತ್ತೂರಿನ ವಿವೇಕಾನಂದ […]

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢ ಶಾಲಾ ಪ್ರಾರಂಭೋತ್ಸವ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮೇ 29ರಂದು ಶಾಲಾ ಪ್ರಾರಂಭೋತ್ಸವ ನಡೆಯಿತು. ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸಿಹಿಯನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತ ಮಾತೆಗೆ ಪುμÁ್ಪರ್ಚನೆ ಮಾಡಿ ಹಿರಿಯರ ಆಶೀರ್ವಾದ ಪಡೆದುಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಿನ್ನಪ್ಪ ಗೌಡ ಚೊಟ್ಟೆಮಜಲು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

        ತಾಂತ್ರಿಕತೆಯೊಂದಿಗೆ ಮೌಲ್ಯಯುತ ಶಿಕ್ಷಣಕ್ಕಾಗಿ -ವಿವೇಕಾನಂದ ಪಾಲಿಟೆಕ್ನಿಕ್

Featured image

ಪುತ್ತೂರು : ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಶೈಕ್ಷಣಿಕ ಪದ್ಧತಿಗೆ ಪೂರಕವಾದ ವಾತಾವರಣವನ್ನು ನೀಡುವಲ್ಲಿ ಡಿಪ್ಲೋಮ ಪದವಿ ಉತ್ತಮ ಶೈಕ್ಷಣಿಕ ಕ್ಷೇತ್ರವಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾದ ಪಠ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತಾ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕೆಲಸ ಮಾಡುತ್ತಿದೆ. S. S. L. C ಯ ನಂತರ ಇಂಜಿನಿಯರಿಂಗ್ ಪದವಿಗೆ ಪೂರಕ ವಾತಾವರಣವನ್ನು ಸುಲಭದಲ್ಲಿ ವಿದ್ಯಾರ್ಥಿಗಳಲ್ಲಿ ಗ್ರಹಿಸುವ ಸಾಮರ್ಥ್ಯವನ್ನು ಡಿಪ್ಲೋಮ ಪದವಿ ನೀಡುತ್ತಿದೆ. ಸ್ಪರ್ಧಾತ್ಮಕ ವಾತಾವರಣದಲ್ಲಿ ಉತ್ತಮ […]

ವಿವೇಕಾನಂದ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ

ಗುರು-ಶಿಷ್ಯ ಸಂಬಂಧ ಎಂದಿಗೂ ಧೃಢವಾಗಿರಬೇಕು- ಭೋಜೇ ಗೌಡ ಪುತ್ತೂರು: ಸಾಧನೆಯ ಹಾದಿಯಲ್ಲಿರುವವ ಕಷ್ಟಗಳನ್ನೆದುರಿಸಿ ಮುಂದೆ ಸಾಗುತ್ತಾನೆ. ಕಲ್ಲು ಮುಳ್ಳಿನ ಹಾದಿಯಿಂದ ಹೂವಿನ ಹಾದಿಯತ್ತ ನಡೆಯುವ ಪ್ರಕ್ರಿಯೆ ಇದು. ಸಾಧಿಸಿದ ಬಳಿಕವೂ ನಮ್ಮತನವನ್ನು ನಾವು ಬಿಡಕೂಡದು. ಗುರು- ಶಿಷ್ಯರ ನಡುವಿನ ಸಂಬಂಧ ಎಂದೆಂದಿಗೂ ಧೃಢವಾಗಿರಬೇಕು.ನಾವು ಗಳಿಸುವ ಶಿಕ್ಷಣವು ಜೀವನವನ್ನು ಸಮರ್ಥವಾಗಿ ರೂಪಿಸಬೇಕು ” ಎಂದು ವಿಧಾನ ಪರಿಷತ್ ಸದಸ್ಯ, ಕಾಲೇಜಿನ ಹಿರಿಯ ವಿದ್ಯಾರ್ಥಿ ಭೋಜೇ ಗೌಡ ನುಡಿದರು.ಇವರು ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ […]

ವಿವೇಕಾನಂದ ಕಾಲೇಜಿನಲ್ಲಿ ದಶಮಾನೋತ್ಸವ ಆಚರಣೆ

ಪುತ್ತೂರು,ಮಾ. 22: ನಮ್ಮ ರಾಷ್ಟ್ರದ ಸ್ಥಾನಮಾನ ಅನಾವರಣವಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿರುತ್ತದೆ. ಭಾರತಕ್ಕೆ ಒಂದು ಸಾಂಸ್ಕøತಿಕ ಪರಂಪರೆ ಇದೆ, ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಇಂತಹ ಸಂದರ್ಭದಲ್ಲಿ ಯುವಜನತೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಕೀಳರಿಮೆಯ ಮಾನಸಿಕತೆಯನ್ನು ಬಿಟ್ಟು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು, ಹಾಗಿದ್ದಾಗ ಮಾತ್ರ ನಾವು ಗೆಲ್ಲಲು ಸಾಧ್ಯ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ […]

ಮಂಗಳೂರು ವಿವಿ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆ: ವಿವೇಕಾನಂದ ಕಾಲೇಜಿಗೆ ಪ್ರಶಸ್ತಿ

ಪುತ್ತೂರು: ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ತೃತೀಯ ಬಿಸಿಎ ವಿಭಾಗದ ರಕ್ಷಾ.ಜಿ 87 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ದ್ವಿತೀಯ ಬಿಎ ವಿಭಾಗದ ರಿತೇಶ್ 81 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ತೃತೀಯ ಬಿಎ ವಿಭಾಗದ ಗಣೇಶ್ ಪ್ರಸಾದ್ 89 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಹಾಗೂ ದ್ವಿತೀಯ ಬಿಕಾಂ ನ ಆಶಾ ಕಿರಣ 71 ಕೆಜಿ ವಿಭಾಗದಲ್ಲಿ ಐದನೇಯ […]

ವಿವೇಕಾನಂದ ಕಾಲೇಜಿನಲ್ಲಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸ್ಫರ್ಧೆ ವಿವೇಕೋತ್ಸವ 2025

ಪುತ್ತೂರು: ಮನುಷ್ಯನ ಮನಸ್ಸಿಗೆ ಶಾಂತಿ ಹಾಗೂ ಸಂತೋಷ ಎಂಬುದು ಬಹಳ ಮುಖ್ಯ, ಇದು ಕಲೆಯನ್ನು ಆರಾಧಿಸುವುದರಿಂದ ಸಾಧ್ಯವಾಗುತ್ತದೆ. ಅದರೊಂದಿಗೆ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಒತ್ತಡದ ಜೀವನ ನಿರ್ವಹಣೆಗೂ ಕಲೆ ಸಹಕಾರಿಯಾಗುತ್ತದೆ. ಮುಂದಿನ ಸಾಂಸ್ಕೃತಿಕ ರಾಯಭಾರಿಗಳಾದ ವಿದ್ಯಾರ್ಥಿಗಳು ಕಲೆಯ ಮೌಲ್ಯವನ್ನು ಅರಿತುಕೊಂಡು ವಿವೇಕ ಉಳ್ಳವರಾಗಿ ಬದುಕಬೇಕು ಎಂದು ಶ್ರೀ ಮೂಕಾಂಬಿಕಾ ಕಲ್ಚುರಲ್ ಅಕಾಡೆಮಿ ಪುತ್ತೂರು ಇದರ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರು ಇಲ್ಲಿ […]

ವೈಟ್ ವಾಟರ್ ರಾಫ್ಟಿಂಗ್ ಶಿಬಿರದಲ್ಲಿ ವಿವೇಕಾನಂದ ಕಾಲೇಜಿನ ಎನ್ ಸಿ ಸಿ ಕೆಡೆಟ್ ಶಾಂತಿಪ್ರಕಾಶ್

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್ ಸಿಸಿ ವಿದ್ಯಾರ್ಥಿ ಜೆ.ಯು.ಒ ಶಾಂತಿಪ್ರಕಾಶ್ ಅವರು ಅರುಣಾಚಲಪ್ರದೇಶದ ದಿರಂಗ್ ನ ನಿಮಾಸ್( ನೇಷನ್ ಇನ್ಸ್ಟಿಟ್ಯೂಟ್ ಆಫ್ ಮೌಂಟನಿಯರಿಂಗ್ & ಅಡ್ವೆಂಚರ್ ಸ್ಫೋಟ್ರ್ಸ್) ನಲ್ಲಿ ನಡೆದ ರಾಷ್ಟ್ರ ಮಟ್ಟದ ಎನ್ ಸಿ ಸಿ ವೈಟ್ ವಾಟರ್ ರಾಫ್ಟಿಂಗ್ ನಲ್ಲಿ ಭಾಗವಹಿಸಿರುತ್ತಾರೆ.ಇವರಿಗೆ ಭಾಲುಕ್‍ಪುಂಗ್ ನಲ್ಲಿರುವ ಕಮೆಂಗ್ ನದಿಯಲ್ಲಿ ಅಡ್ವೆಂಚರ್ಸ್ ತರಬೇತಿಗಳು ನಡೆದಿದೆ. ಇವರು ಮೂರು ಹಂತದ ಆಯ್ಕೆಯಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ […]

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭಾರತಿ ಪ್ರಾಧ್ಯಾಪಕರ ಸಮಾಗಮ

ಪುತ್ತೂರು: ಇಲ್ಲಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಾವರ್ಕರ್ ಸಭಾಭವನದಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ – ಕರ್ನಾಟಕ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಸಹಯೋಗದಲ್ಲಿ ಪ್ರಾಧ್ಯಾಪಕರ ಸಮಾಗಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ಸಂಘಟನಾ ಕಾರ್ಯದರ್ಶಿ ರಘುನಂದನ್ , ಶಿಕ್ಷಣದಲ್ಲಿ ಭಾರತೀಯ ಪರಂಪರೆಯನ್ನು ಅಳವಡಿಸುವ ಅಗತ್ಯವಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸಂಸ್ಕ0ತಿ ಮತ್ತು ಮೌಲ್ಯಗಳಿಗೆ ಪ್ರಾಧಾನ್ಯ ನೀಡಬೇಕು. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದನ್ನು ಮುಂದುವರಿಸಿ […]

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ದೀಪಪ್ರದಾನ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ (ಬೀಳ್ಕೊಡುಗೆ) ಕಾರ್ಯಕ್ರಮವು ಯಾದವ ಶ್ರೀ ಸಭಾಂಗಣ ಹನುಮಾನ್‍ನಗರ ಕೇವಳದಲ್ಲಿ ಮಾರ್ಚ್ 7ರಂದು ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೇಶವ ಅಮೈ ಮಾಲಕರು ಎಸ್.ಆರ್.ಕೆ ಲ್ಯಾಡರ್ಸ್ ಪುತ್ತೂರು ಇವರು ದೀಪ ಪ್ರಜ್ವಲವನ್ನು ನೆರವೇರಿಸಿ, ಪ್ರೌಢಶಾಲಾ ಶಿಕ್ಷಣ ಮರೆಯಲಾಗದ ಶಿಕ್ಷಣ, ಇಂದು ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ಈ ದೇವಾಲಯದಿಂದ ದೇವತೆ ದೇವರುಗಳಾಗಿ ಹೊರ ಹೋಗುತ್ತಿದ್ದಾರೆ. ಅಂಕಗಳ ಜೊತೆ ಕೌಶಲ್ಯಗಳು ಅಗತ್ಯ ಎಂದು ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿವೇಕಾನಂದ […]