ಭಜನಾ ತರಬೇತಿ ಕಮ್ಮಟ

Leaf
Leaf

ಉಪ್ಪಿನಂಗಡಿ : ಭಕ್ತಿ ಮತ್ತು ಶಕ್ತಿ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಮಗೆಲ್ಲವನ್ನ್ನೂ ನೀಡಿರುವ ಭಗವಂತನನ್ನು ಭಜನೆಯ ಮೂಲಕ ಸದಾ ನೆನೆಯುವಕಾರ್ಯ ಪ್ರತಿ ಮನೆ ಪ್ರತಿ ಮನದಲ್ಲೂ ಪ್ರತಿನಿತ್ಯ ನಡೆಯಬೇಕಾಗಿದೆ ಎಂದು ಸಾಮಾಜಿಕ ಮುಂದಾಳು ಪುರುಷೋತ್ತಮ ಮುಂಗ್ಲಿಮನೆ ತಿಳಿಸಿದರು. ಅವರು ವಿಜಯದಶಮಿಯಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಹಮ್ಮಿಕೊಂಡಿದ್ದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿಶ್ವ ವಂದನೀಯ ಸಂಸ್ಕೃತಿಯ ನೆಲೆಯಾದ ಭಾರತದಲ್ಲೇ ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಅಧಃಪತನದ ಹಾದಿಯಲ್ಲಿ ಸಮಾಜ ಸಾಗುತ್ತಿದೆ. ಈ ಅಪಾಯಕಾರಿ ಬೆಳವಣಿಗೆಯಲ್ಲಿ ಸಮಾಜವನ್ನು ಸಂಸ್ಕಾರಭರಿತಗೊಳಿಸುವ ಕಾರ್ಯವನ್ನು ನಡೆಸುತ್ತಿರುವುದು ನಿಜವಾಗಿಯೂದೇವ ಸೇವೆ ಹಾಗೂ ದೇಶ ಸೇವೆ ಎಂದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ ಶ್ರೀ ರಾಮ ಶಾಲಾ ಸಂಚಾಲಕ ಯು ಜಿ ರಾಧ ಮಾತನಾಡಿ ಮಕ್ಕಳಾದಿಯಾಗಿ ಸಮಾಜದ ಎಲ್ಲಾ ವರ್ಗದವರಿಗೂ ಸಂಸ್ಕಾರದ ಸವಿಯುಣ್ಣುವ ಅವಕಾಶವನ್ನು ಶಿಶು ಮಂದಿರದ ಮೂಲಕ ನೀಡುತ್ತಿರುವುದು ಶ್ಲಾಘನೀಯಕಾರ್ಯ.ದೇವ ನಾಮ ಸ್ಮರಣೆಯನ್ನು ಮರೆತ ಸಮಾಜಕ್ಕೆಅದರ ಸವಿಯೇನೆಂಬುವುದನ್ನು ತಿಳಿಸುವ ಕಾರ್ಯಎಲ್ಲೆಡೆ ನಡೆದಾಗಇಡೀ ಸಮಾಜ ಸಾತ್ವಿಕ ಪ್ರಭಾ ವಲಯಕ್ಕೆ ಒಳಗಾಗುವುದೆಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ, ಮಾಸ್ ನಿರ್ದೇಶಕ ಯು ರಾಮ ಮಾತನಾಡಿ ಮನೆ ಮಕ್ಕಳು ಮನೆಯ ಸಂಪತ್ತಾಗಿ ರೂಪುಗೊಳ್ಳಬೇಕಾದರೆ ಅವರನ್ನು ಬಾಲ್ಯದಲ್ಲೇ ಸಂಸ್ಕಾರ ಶಿಕ್ಷಣಕ್ಕೆ ಒಳಪಡಿಸಬೇಕು. ಮಗು ತನ್ನ ನಡೆ ನುಡಿಯನ್ನು ಸಂಸ್ಕಾರಭರಿತಗೊಳಿಸಿದಾಗ ಆ ಮಗುವಿನ ಮನೆ, ಪರಿಸರ ಉತ್ತಮಗೊಳ್ಳುವುದಕ್ಕೆ ಶಿಶು ಮಂದಿರದ ಕಾರ್ಯಚಟುವಟಿಕೆಗಳಿಂದ ದೊರೆತ ಫಲವೇ ಸಾಕ್ಷಿ ಎಂದರು.

ಭಜನಾ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತಾಜಿ ಪುಷ್ಪಲತಾಎಸ್, ಮತ್ತು ಚಂದ್ರಾವತಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿ, ಮೋಹನ್ ಭಟ್ ವಂದಿಸಿದರು.

Leave a Reply

Your email address will not be published. Required fields are marked *

Related News

News and Events
24/03/2025

ವಿವೇಕಾನಂದ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ

Uncategorized
24/03/2025

ವಿವೇಕಾನಂದ ಕಾಲೇಜಿನಲ್ಲಿ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆ

Events
24/03/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಭಾರತ್ ಭೋದ್ ಮಾಲ ಕಾರ್ಯಕ್ರಮ