ನಿರ್ಮಲ ಪ್ರೇಮ ಭ್ರಾತೃತ್ವದ ಸಂಕೇತ ರಕ್ಷಾಬಂಧನ, ಬಿಡಿಬಿಡಿಯಾದ ರೇಷ್ಮೆಯ ಎಸಳುಗಳನ್ನು ದಾರದಿಂದ ಪೋಣಿಸಿದಾಗ ಅದು ರಕ್ಷೆಯಾಗುತ್ತದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ರಾಜರಾಮವರ್ಮ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು – ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದಕ್ಕೆ, ವಿದ್ಯಾರ್ಥಿ-ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ರಕ್ಷಾಬಂಧನದ
ಕಲ್ಲಡ್ಕ ಶ್ರೀ ರಾಮ ಪದವಿ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ನಡೆದ ಭಾರತೀಯ ಸೇನೆ ಮತ್ತು ರಕ್ಷಣಾ ಪಡೆಯ ಎಂಬ ವಿಷಯದ ಬಗ್ಗೆ ಯುವ ಬ್ರಿಗೇಡ್‌ಯರ್ ಮಹಾರಕ್ಷಕ ವಿಭಾಗದ ರಾಜ್ಯ ಸಂಚಾಲಕರಾದ ಸುಮುಖ ಬೆಲಗೇರಿ ಇವರು ಮಾಹಿತಿ ನೀಡಿ ಮಾತನಾಡಿದ ಅವರು ಕರ್ನಾಟಕದಿಂದ 100 ವಿದ್ಯಾರ್ಥಿಗಳನ್ನು ಸೇನೆಗೆ ಸೇರಿಸುವುದು ಯುವ ಬ್ರಿಗೇಡ್‌ಯರ್‌ನ ಮುಖ್ಯ ಗುರಿಯಾಗಿದೆ. ದೇಶ ಕಟ್ಟುವ, ದೇಶದ ರಕ್ಷಣೆಗೆ ಯುವ ಪೀಳಿಗೆಯು ಮುಂದಾಗಬೇಕು ಎನ್ನುವುದೇ ನಮ್ಮ ತಂಡದ ಉದ್ದೇಶ ಎಂದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡಿಯರ್‌ನ
ರಕ್ಷಾಬಂಧನವು ಹಿಂದು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುತ್ತಾ ಒಗ್ಗಟ್ಟಿನ ಚಿಂತನೆಯೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮುನ್ನುಡಿಯಾಗಿದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿ ಸದೃಢ ಸಮಾಜವನ್ನು ಕಟ್ಟಲು ಇಂತಹ ದಿನಗಳು ಸಹಾಯಕವಾಗುತ್ತದೆ ಎಂದು ಶ್ರೀರಾಮ ಪದವಿ ಪೂರ್ವ ಕಾಲೇಜಿನ ಗಣಕ ಯಂತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ರಶ್ಮಿ ಹೇಳಿದರು. ಅವರು ಶ್ರೀರಾಮ ಪದವಿ ಕಾಲೇಜಿನ ಪ್ರಣವ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು – ಉಪನ್ಯಾಸಕ ಮತ್ತು
ಬಂಟ್ವಾಳ,ಆಗಸ್ಟ್ 24: ಜಗತ್ತು ಆಧುನಿಕ ದೃಷ್ಟಿಕೋನದತ್ತ ಚಿತ್ತ ಹಾಯಿಸುತ್ತಿದೆ . ಆಚಾರ ವಿಚಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಉತ್ತಮ ಶಿಕ್ಷಣ ನೀಡುವಲ್ಲಿ ಸಂಸ್ಥೆ ಸತತ ಪ್ರಯತ್ನ ಮಾಡುತ್ತಿದೆ. ಪೋಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಯು ಕಲಿತ ವಿಚಾರವನ್ನು ತನ್ನೊಳಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಉನ್ನತಿ ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಹಾಗೂ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್‍ಯಕಾರಿಣಿ ಸದಸ್ಯ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಇವರು ಶ್ರೀರಾಮ ಪದವಿ ಕಾಲೇಜಿನ ಪಾಲಕರ ಸಮಾವೇಶವನ್ಮು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೊಳಲಿ
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್‌ನ ಅಗತ್ಯತೆಯ ಮಾಹಿತಿಯನ್ನು ಮಂಗಳೂರಿನ ಅರುಣ್ ಅಸೋಸಿಯೇಟ್‌ನ ಮಾಲಕರಾದ ಅರುಣ್ ಪ್ರಸಾದ್ ರೈ ನೀಡಿದರು. ಬಳಿಕ ಮಾತನಾಡಿದ ಅವರು ಪಾನ್‌ಕಾರ್ಡ್ ಹಣದ ವಹಿವಾಟುನ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ಇದನ್ನು ನಾವು ಒಂದು ಗುರುತಿನ ಚೀಟಿಯಾಗಿ ಬಳಸಬಹುದು ಎಂದರು. ವೇದಿಕೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಎನ್.ಎಸ್.ಎಸ್. ಘಟಕಾಧಿಕಾರಿ ಹರೀಶ್ ಉಪಸ್ಥಿತರಿದ್ದರು. ಸುಮಾರು 80 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪಾನ್ ಕಾರ್ಡ್‌ನ ಪ್ರಯೋಜನವನ್ನು ಮತ್ತು 10 ವಿದ್ಯಾರ್ಥಿಗಳು ಪಾಸ್‌ಪೋರ್ಟ್‌ನ
ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಂದೇಶ ನೀಡುವ ಚಿತ್ರವನ್ನು ಪರದೆ ಸರಿಸುವ ಮೂಲಕ ಉಧ್ಘಾಟಿಸಿದರು. ಅದೇ ದಿನ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಲೋಕ ಹಿತಂ ಮಮಕರಣೀಯಂ ಎಂಬ ಸಂದೇಶದಲ್ಲಿ ವಿವಿಧ ರೀತಿಯ ಲೋಕಕ್ಕೇ ಉತ್ತಮ ಮಾಹಿತಿ ನೀಡುವ ಸ್ವಚ್ಚತೆ, ತಾಯಿ ಬಾಂದವ್ಯ, ವಿವಿಧ ನ್ಯತ್ಯ, ನಾಟಕಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಡಾ. ಕಮಲ .ಪ್ರಭಾಕರ
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಸ್ಮರಣೆ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಹಿಸಿರುತ್ತಾರೆ. ಮುಖ್ಯ ಅತಿಥಿಯಾಗಿ ಬಂದಿರುವವರು ಆಶಾಪ್ರಸಾದ್ ರೈ, ವಿಲಾಸ್ ನಾಯಕ್ ಉಡುಪಿ, ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಷ ಮೌನಪ್ರಾರ್ಥನೆಯೊಂದಿಗೆ ವಿಜಯ ದಿವಸವನ್ನು ಆಚರಿಸಲಾಯಿತು. ಆಶಾಪ್ರಸಾದ್ ರೈ ಯವರು ಹಲವಾರು ವೀರಯೋಧರ ಕಥೆಗಳನ್ನು ತಿಳಿಸುತ್ತಾ
ಇತಿಹಾಸ ಕೇವಲ ಪರೀಕ್ಷೆಗಾಗಿ ಓದುವ ವಿಷಯ ಅಲ್ಲ. ಮಾನವನ ವರ್ತಮಾನ ಸರಿಯಾಗಿರಬೇಕಾದರೆ ಇತಿಹಾಸ ಅಧ್ಯಯನದ ಅಗತ್ಯವಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಸಹಪ್ರಾಧ್ಯಾಪಕರಾದ ಸುರೇಶ್ ರೈ.ಕೆ. ತಿಳಿಸಿದರು. ಅವರು ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಭಗೀರಥ ಪಾರಂಪರಿಕ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಉಪನ್ಯಾಸ ನೀಡಿದರು. ಅವರು ಭಾರತದ ಇತಿಹಾಸವನ್ನು ಪ್ರಸ್ತಾಪಿಸುತ್ತಾ ಭಾರತದ ಬಗ್ಗೆ ಇರುವ ಐತಿಹಾಸಿಕ ಬೆಳವಣಿಗೆಗಳ ಕುರಿತಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀರಾಮ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಠಾರದಲ್ಲಿ ಲಯನ್ಸ್ ಕ್ಲಬ್‌ನ 100 ವರ್ಷಾಚರಣೆಯ ಸಂದರ್ಭ ನಿಮಿತ್ತ ಗಿಡನೆಡುವ ಕಾರ್ಯಕ್ರಮವು ದಿನಾಂಕ 15-7-2015 ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ಡಾ|| ಪ್ರಭಾಕರ ಭಟ್ ಇವರು ಮಾತನಾಡಿ ಪ್ರಕೃತಿಯ ಸಮತೋಲನತೆಯನ್ನು ಕಾಯ್ದುಕೊಳ್ಳುವುದರ ಬಗ್ಗೆ ಅರಿವು ಮೂಡಿಸಿದರು. ಪರಿಸರ ನಮಗೆ ಜೀವಕೊಟ್ಟರೆ ನಾವು ಅದಕ್ಕೆ ಜೀವನಾಶಕಗಳನ್ನು ನೀಡಿ ಮರಣಶಾಸನವನ್ನು ಬರೆಯುತ್ತಿದ್ದೇವೆ. ವೈಭವದ ಜೀವನಕ್ಕಾಗಿ ಪ್ರಕೃತಿಯನ್ನು