ಯುವ ಜನತೆಯನ್ನು ಧ್ಯೇಯವಾಗಿಟ್ಟುಕೊಂಡು ಆರಂಭವಾದ ಯೋಜನೆಯೇ ರಾಷ್ಟ್ರೀಯ ಸೇವಾಯೋಜನೆ. ದೇವಸ್ಥಾನದಲ್ಲಿ ಉಳಿ ಪೆಟ್ಟು ತಿಂದ ಕಲ್ಲು ಹೇಗೆ ಒಂದು ಸುಂದರ ಶಿಲೆಯಾಗಿ ರೂಪುಗೊಂಡು ಎಲ್ಲರೂ ಪೂಜಿಸುವಂತಾಗುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ತಮ್ಮನ್ನು ತಾವು ಎನ್.ಎಸ್.ಎಸ್.ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಆದರ್ಶ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಅವಕಾಶಗಳನ್ನು ಜೀವನದಲ್ಲಿ ಉಪಯೋಗಿಸಿದಲ್ಲಿ ಅವರು ಮುಂದೆ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದು ಎಸ್.ವಿ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಕಿಟ್ಟು ರಾಮಕುಂಜ ಹೇಳಿದರು. ಇವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2015-16 ನೇ
ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಾಧಾನ್ಯತೆ ಹೆಚ್ಚು. ಇಂದು ಕರ್ನಾಟಕದಲ್ಲಿಯೇ ಸುಮಾರು 2 ಲಕ್ಷಕ್ಕೂ ಮೀರಿ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ನಂತರ ಮುಂದೇನು? ಎಂಬ ಪ್ರಶ್ನೆ ಕಾಡುವುದು ಸಹಜ ಆ ನಿಟ್ಟಿನಲ್ಲಿ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾಗಿರುವ ವೃತ್ತಿ ಶಿಕ್ಷಣದ ತರಬೇತಿ ಕೊಡುವ ವಿವಿಧ ಕಾರ್ಯಕ್ರಮ ಮಾಡಿದಾಗ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಹಣ ಸಂಪಾದನೆ ಮಾತ್ರ ಮೂಲ ಮಂತ್ರವಾಗದೆ ಸಾಮಾಜಿಕ ದೃಷ್ಟಿಕೋನದಿಂದಲೂ ವಿದ್ಯಾರ್ಥಿಗಳ ಯೋಚನೆ ಮಾಡುವವರಾಗಬೇಕು ಎಂದು ಉಪ್ಪಿನಂಗಡಿ ಪದವಿಪೂರ್ವ ವಿದ್ಯಾಲಯದ ಲೋಕೇಶ್‌ನಾಥ್
ಶ್ರೀರಾಮ ಪದವಿ ವಿದ್ಯಾಲಯ ಕಲ್ಲಡ್ಕದಲ್ಲಿ ಪ್ರಭೋಧ ವಾಣಿಜ್ಯ ಸಂಘ ಉದ್ಘಾಟನೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ಚಿತ್ತರಂಜನ್ ಹೊಸಕಟ್ಟ ಮತ್ತು ಪ್ರಭೋಧ ವಾಣಿಜ್ಯ ಸಂಘವನ್ನು ರಾಜೀವ ಸಪಲ್ಯ ಮತ್ತು ಆನಂದ ಶೆಟ್ಟಿ ಇವರುಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಕಮಲಾ ಪ್ರಭಾಕರ ಭಟ್, ಯತೀನ್ ಕುಮಾರ್ ಏಳ್ತಿಮಾರ್, ಗಂಗಾ ಮಾತಾಜಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರು ವಸಂತ ಬಲ್ಲಾಳ್, ಪದವಿ ವಿಭಾಗದ ಪ್ರಾಂಶುಪಾಲರು ಕೃಷ್ಣಪ್ರಸಾದ್, ಹಾಗೂ ಉಪನ್ಯಾಸಕರು, ವಿದ್ಯಾರ್ಥಿ