ದಿನಾಂಕ 31-08-2015 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶಾರದ ರಾವ್ ನಿವೃತ್ತ ಶಿಕ್ಷಕಿ ರಕ್ಷಬಂಧನದ ಮಹತ್ವವನ್ನು ತಿಳಿಸಿದರು. ಇನ್ನೋರ್ವ ಅತಿಥಿಗಳಾದ ಶ್ರೀರಾಮ ಪೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ರೋಹಿತ್ ಸಂಸ್ಕೃತ ಭಾಷೆಯ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿದರು. ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾ ಸ್ಫರ್ಧೆಯಲ್ಲಿ ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ
ದಿನಾಂಕ 25-08-2015 ರಂದು ಬಿ.ಎ.ಪದವಿ ಪೂರ್ವ ಕಾಲೇಜು ತುಂಬೆ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವಿದ್ಯಾರ್ಥಿಗಳಾದ ಆದಿತ್ಯಕೃಷ್ಣ 4ನೇ ತರಗತಿ ಧಾರ್ಮಿಕ ಪಠಣ ಪ್ರಥಮ, ಶಮಿತ 7ನೇ ತರಗತಿ ಸಂಸ್ಕೃತ ಕಂಠಪಾಠ ಪ್ರಥಮ, ಸುಧಾಂಶು ಕೆ.ಹೆಚ್. 7ನೇ ತರಗತಿ ಯಕ್ಷಗಾನ ಪ್ರಥಮ, ಹಾಗೂ ಕಿರಿಯ ವಿಭಾಗದ ದೇಶಭಕ್ತಿ ಗೀತೆ ಪ್ರಥಮ, ಹಿರಿಯ ವಿಭಾಗದ ಪದ್ಮಶ್ರೀ ಧಾರ್ಮಿಕ ಪಠಣ ದ್ವಿತೀಯ ಮತ್ತು ಕಥೆ ಹೇಳುವುದು ತೃತೀಯ, ದೇಶಭಕ್ತಿಗೀತೆ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ದಿನಾಂಕ 15-08-2015 ಶನಿವಾರದಂದು ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ (ರಿ) , ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ, ವಿವೇಕ್ ಟ್ರೇಡರ್ಸ್, ಸೇವಾಂಜಲಿ ಟ್ರಸ್ಟ್, ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯ ಶಾಲಾ , ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದಿಕ್ ವೈದ್ಯಕೀಯ ಶಿಬಿರ ನಡೆಯಿತು. ಬೆಳಿಗ್ಗೆ 9.30 ಕ್ಕೆ ವೇದವ್ಯಾಸ ಸಭಾಂಗಣದಲ್ಲಿ ಶಿಬಿರದ ಉದ್ಘಾಟನೆಯನ್ನು ಶ್ರೀಯುತ ಪ್ರಕಾಶ್ ಕುಕ್ಕಿ ನಿವೃತ್ತ ಸೇನಾನಿ ಕೋಡಪದವು ಇವರು ನೆರವೇರಿಸಿದರು. ಸಮಾರಂಭದಲ್ಲಿ ಶ್ರೀರಾಮ
ದಿನಾಂಕ 7-8-2015 ರಂದು ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ 11 ಪ್ರಥಮ, 3 ದ್ವಿತೀಯ, 1 ತೃತೀಯ ಹಾಗೂ ಕಿರಿಯ ವಿಭಾಗದಲ್ಲಿ 5 ಪ್ರಥಮ, 3 ದ್ವಿತೀಯ ಒಟ್ಟು 23 ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ದಿನಾಂಕ 25-07-2015 ರಂದು ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಹುಟ್ಟುಹಬ್ಬ ಆಚರಿಸುತ್ತಿರುವ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ಅಕ್ಷತೆ ಹಾಕಿ ತಿಲಕ ಇಟ್ಟು ಆಶೀರ್ವದಿಸಿದರು. ಕಾರ್ಯಕ್ರಮದ ಅತಿಥಿಗಳಾದ ನೆಟ್ಲ ಸರಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತ ಪ್ರವೀಣ್ ಇವರು ಮಾತನಾಡುತ್ತಾ ಸಾಮೂಹಿ ಹುಟ್ಟುಹಬ್ಬ ಆಚರಿಸಿ ಅನಗತ್ಯ ಖರ್ಚನ್ನು ಉಳಿಸಿ ನಿಧಿ ಸಮರ್ಪಣೆ ಮಾಡುವ ಮೂಲಕ ನಿರಾಶ್ರಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗುವುದು ಉತ್ತಮ ಕಾರ್ಯ ಎಲ್ಲರೂ ಅನಾವಶ್ಯಕ ದುಂದು ವೆಚ್ಚವನ್ನು