ಪುತ್ತೂರು: ದಿನಾಂಕ 13.08.2013ರಂದು ಸರಸ್ವತಿ ವಿದ್ಯಾಲಯ ಕಡಬದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ನಮ್ಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ರತನ್ (14 ವರ್ಷದ ಒಳಗಿನ ಬಾಲಕರು) ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ ಮತ್ತು 9ನೇ ತರಗತಿಯ ಆಶಿಷ್ ಕುಮಾರ್.ಎಸ್.ಕೆ (17 ವರ್ಷದ ಒಳಗಿನ ಬಾಲಕರು) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾನೆ.
“ಭಾರತದ ಭವ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಸ್ವಾಮಿ ವಿವೇಕಾನಂದರ 150ನೇ ಜಯಂತಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 12.01.2012 ನೇ ಶನಿವಾರದಂದು ನಮ್ಮ ಸಂಸ್ಥೆಯ ವತಿಯಿಂದ ,ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ ಇಲ್ಲಿ ಶ್ರೀಯುತ ವಾಸುದೇವ ಭಟ್ ಕಡ್ಯ ಇವರು ನೆರವೇರಿಸಿ ಕೊಟ್ಟರು. ಅಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಮ್ಮ ವಿದ್ಯಾಲಯದ ಶಿಶುಮಂದಿರದ ,ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 100 ಮಂದಿ ವಿದ್ಯಾರ್ಥಿಗಳು ‘ವಿವೇಕಾನಂದರ ವೇಷವನ್ನು‘ ಧರಿಸಿ ಕಡಬದ ಮುಖ್ಯ ಬೀದಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ ಹೆಜ್ಜೆ
ಪಕೃತಿಯ ಮಡಿಲಿನಲ್ಲಿ ಕಂಗೋಳಿಸುವ ನಮ್ಮ ವಿದ್ಯಾಮಂದಿರದಲ್ಲಿ ಡಿಸೆಂಬರ್ ೨೨ರ ಶನಿವಾರದಂದು ರಾತ್ರಿ ವಾರ್ಷಿಕ ಕ್ರೀಡೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.ವಿದ್ಯಾರ್ಥಿಗಳು ಪ್ರದರ್ಶಿಸಿದ ಪಥಸಂಚಲನ, ದೇಶಭಕ್ತಿಗೇತೆ, ಶಿಶುನೃತ್ಯ, ಕೋಲಾಟ, ಯೋಗಾನ, ದೀಪಾರತಿ, ಮೈನವಿರೇಳಿಸುವ ಕೂಪಿಕಾ, ಬೆಂಕಿಯೊಂದಿಗಿನ ಸಾಹಸ, ಭಜನೆ, ಶಿಶುಮಂದಿರದ ಮಕ್ಕಳಿಂದ ನೃತ್ಯ, ಕರಾಟೆ, ಮಲ್ಲಕಂಬ, ದೊಂದಿ ಪ್ರದರ್ಶನದೊಂದಿಗೆ ಯಕ್ಷರೂಪಕ, ಸಾಮೂಹಿಕ ಜನಪದ ನೃತ್ಯ (ವೀರಗಾಸೆ), ಸೈಕಲ್ ಮತ್ತು ಬೈಕ್ ಸಾಹಸ, ಮುಂತಾದ ಕಾರ್‍ಯಕ್ರಮಗಳು ಉಪಸ್ಥಿತರಿದ್ಧ ಗಣ್ಯರು ಹಾಗೂ ವೀಕ್ಷಕರ ಮೆಚ್ಚಗೆಗೆ ಪಾತ್ರವಾದವು.ವೇದಿಕೆಯಲ್ಲಿ ಸುಳ್ಯದ ಶಾಸಕರಾದ ಎಸ್.ಅಂಗಾರ, ಮಂಗಳೂರಿನ ನ್ಯಾಯವಾದಿ