ಪಕೃತಿಯ ಮಡಿಲಿನಲ್ಲಿ ಕಂಗೋಳಿಸುವ ನಮ್ಮ ವಿದ್ಯಾಮಂದಿರದಲ್ಲಿ ಡಿಸೆಂಬರ್ ೨೨ರ ಶನಿವಾರದಂದು ರಾತ್ರಿ ವಾರ್ಷಿಕ ಕ್ರೀಡೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.ವಿದ್ಯಾರ್ಥಿಗಳು ಪ್ರದರ್ಶಿಸಿದ ಪಥಸಂಚಲನ, ದೇಶಭಕ್ತಿಗೇತೆ, ಶಿಶುನೃತ್ಯ, ಕೋಲಾಟ, ಯೋಗಾನ, ದೀಪಾರತಿ, ಮೈನವಿರೇಳಿಸುವ ಕೂಪಿಕಾ, ಬೆಂಕಿಯೊಂದಿಗಿನ ಸಾಹಸ, ಭಜನೆ, ಶಿಶುಮಂದಿರದ ಮಕ್ಕಳಿಂದ ನೃತ್ಯ, ಕರಾಟೆ, ಮಲ್ಲಕಂಬ, ದೊಂದಿ ಪ್ರದರ್ಶನದೊಂದಿಗೆ ಯಕ್ಷರೂಪಕ, ಸಾಮೂಹಿಕ ಜನಪದ ನೃತ್ಯ (ವೀರಗಾಸೆ), ಸೈಕಲ್ ಮತ್ತು ಬೈಕ್ ಸಾಹಸ, ಮುಂತಾದ ಕಾರ್‍ಯಕ್ರಮಗಳು ಉಪಸ್ಥಿತರಿದ್ಧ ಗಣ್ಯರು ಹಾಗೂ ವೀಕ್ಷಕರ ಮೆಚ್ಚಗೆಗೆ ಪಾತ್ರವಾದವು.ವೇದಿಕೆಯಲ್ಲಿ ಸುಳ್ಯದ ಶಾಸಕರಾದ ಎಸ್.ಅಂಗಾರ, ಮಂಗಳೂರಿನ ನ್ಯಾಯವಾದಿ ಪಿ.ಪಿ.ಹೆಗ್ಡೆ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಸ್.ಆರ್ ರಂಗಮೂರ್ತಿ, ಪ್ರತಿನಿಧಿ ರಘುನಾಥ ರಾವ್, ಕೋಶಾಧಿಕಾರಿ ರವೀಂದ್ರ ಪಿ,ಶ್ರೀಮತಿ ಆಶಾ ಬೆಳ್ಳಾರೆ, ಪಂಜ ವಲಯ ಅರಣ್ಯಾಧಿಕಾರಿ ಮನೋಹರ ಚಿತ್ತವಾಡಗಿ, ಸುಬ್ರಮಣ್ಯದ ಉದ್ಯಮಿ ರವಿಕ್ಕೆಪದವು, ಪಶುವೈದ್ಯ ದೇವಿಪ್ರಸಾದ್ ಕಾನತ್ತೂರು, ಪಿಡಬ್ಲ್ಯುಡಿ ಗುತ್ತಿಗೆದಾರ ರಘುರಾಮ್ ಭಟ್ ಉಪ್ಪಂಗಳ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ಶ್ರೇಯಂಸ ಕುಮಾರ್ ಜೈನ್ ನೆಲ್ಯಾಡಿ, ದಿನೇಶ್ ಬೆಂಗಳೂರು, ಮುಂತಾದ ಪ್ರಮುಖ ಗಣ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷೀಸಿದರು. ವಿದ್ಯಾಲಯದ ಸಂಚಾಲಕ ಮಂಕುಡೆ ವೆಂಕಟರಮಣ ರಾವ್ ಸ್ವಾಗತಿಸಿ ನಿರೂಪಿಸಿದರು.ಅಧ್ಯಕ್ಷ ಕೃಷ್ಣಶೆಟ್ಟಿ ವಂದಿಸಿದರು.