“ಭಾರತದ ಭವ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಸ್ವಾಮಿ ವಿವೇಕಾನಂದರ 150ನೇ ಜಯಂತಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 12.01.2012 ನೇ ಶನಿವಾರದಂದು ನಮ್ಮ ಸಂಸ್ಥೆಯ ವತಿಯಿಂದ ,ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ ಇಲ್ಲಿ ಶ್ರೀಯುತ ವಾಸುದೇವ ಭಟ್ ಕಡ್ಯ ಇವರು ನೆರವೇರಿಸಿ ಕೊಟ್ಟರು.
ಅಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಮ್ಮ ವಿದ್ಯಾಲಯದ ಶಿಶುಮಂದಿರದ ,ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 100 ಮಂದಿ ವಿದ್ಯಾರ್ಥಿಗಳು ‘ವಿವೇಕಾನಂದರ ವೇಷವನ್ನು‘ ಧರಿಸಿ ಕಡಬದ ಮುಖ್ಯ ಬೀದಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ಮೆರವಣಿಗೆಯಲ್ಲಿ ಸಂಸ್ಥೆಯ ಅಧ್ಯಕ್ಷರು ,ಸಂಚಾಲಕರು ,ಅಧ್ಯಾಪಕ ವೃಂದ ,ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.“ “ವೀರಸಂತನ ಅಂತರಂಗದ ಅಮರವಾಣಿಯು ಮೊಳಗಲಿ” ಎನ್ನುವ ದೇಶಭಕ್ತಿಗೀತೆಯೊಂದಿಗೆ ಹೊರಟಂತಹ ಈ ಭವ್ಯವಾದ ಶೋಭಾಯಾತ್ರೆಯು ಕಡಬದ ಎಲ್ಲಾ ವಿದ್ಯಾಭಿಮಾನಿಗಳ ಮನಸ್ಸನ್ನು ಆಕರ್ಷಿಸಿತು.
ನಂತರ ವಿದ್ಯಾಲಯದ ‘ಸರಸ್ವತಿ‘ ಸಭಾ ಮಂದಿರದಲ್ಲಿ ನಡೆದಸಭಾಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ ವೆಂಕಟರಮಣ ರಾವ್ ಅಧ್ಯಕ್ಷತೆಯನ್ನು ವಹಿಸಿಕೊಂಡರು .ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀಯುತ ವಾಸುದೇವಭಟ್ ಕಡ್ಯ ಇವರು ವಿವೇಕಾನಂದರ ಬಗ್ಗೆ ಉಪನ್ಯಾಸ ಮಾಡಿದರು.ವೇದಿಕೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯಮಾತಾಜೀ,ಶ್ರೀಮತಿ ಯಶೋಧ ಪ್ರೌಢಶಾಲೆಯ ಮುಖ್ಯಮಾತಾಜೀ ಶ್ರೀಮತಿ ಶೈಲಶ್ರೀ.ರೈ ಅವರು ಉಪಸ್ಥಿತರಿದ್ದರು.
ಮುಂದಿನ ಒಂದು ವರ್ಷ ಪೂರ್ತಿ 150ನೇ ವರ್ಷಾಚರಣೆಯ ಪ್ರಯುಕ್ತ ನಮ್ಮ ವಿದ್ಯಾ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರೌಢಶಲೆಯ ಮಖ್ಯಮಾತಾಜೀ ಸ್ವಾಗತಿಸಿ ಪ್ರಾಥಮಿಕ ಶಾಲಾ ಮುಖ್ಯಮಾತಾಜೀ ವಂದಿಸಿದರು .ಶಿಕ್ಷಕ ವಸಂತ್ ಕರ್oಬೋಡಿ ಕಾರ್ಯಕ್ರಮ ನಿರೂಪಿಸಿದರು.