ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

Leaf
Leaf

ಪುತ್ತೂರು, ಫೆ. 20: ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ನಿರ್ಮಿಸಲಾರ. ಅಂತೆಯೇ ಚರಿತ್ರೆಯನ್ನು ಓದದವನು ಚರಿತ್ರೆಯ ಬಗ್ಗೆ ಹೇಳಲು ಅರ್ಹನಲ್ಲ. ಭಾರತದದುದ್ದಕ್ಕೂ ಶಿವಾಜಿಯನ್ನು ಪೆÇೀಜಿಸುವವರೇ ಹೆಚ್ಚು. ಭಾರತದ ಮೇಲೆ ಬಹಳಷ್ಟು ಯುದ್ಧಗಳಾಗಿವೆ. ಅವೆಲ್ಲವನ್ನು ಚಾಕಚಕ್ಯತೆಯಿಂದ ಸರಿಪಡಿಸಿಕೊಂಡು ಹೋದವರು ಶಿವಾಜಿ ಮಹಾರಾಜ್. ಶಿವಾಜಿ ಭಾರತಕ್ಕೆ ಮಾತ್ರ ಸೀಮಿತವಲ್ಲದೇ, ಇಡೀ ಪ್ರಪಂಚವೇ ಅವರನ್ನು ತಿಳಿದಿದೆ. ಶಿವಾಜಿಯ ಧ್ಯೇಯ, ಆತ್ಮ ವಿಶ್ವಾಸವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ಶಿವಾಜಿ ಅಂತರ್ ಶಕ್ತಿ ಹಾಗೂ ಶ್ರದ್ಧೆ ನಮ್ಮೆಲ್ಲರಲ್ಲೂ ಮೂಡಬೇಕು ಎಂದು ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಪದವಿ ಕಾಲೇಜು ಘಟಕ ಮತ್ತು ವಿವೇಕಾನಂದ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಶಿವಾಜಿ ಜೀವನ ಚರಿತ್ರೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಶ್ರೀ ಕೃಷ್ಣ ಗಣರಾಜ್ ಭಟ್ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಈ ಕಾರ್ಯಕ್ರಮವು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಸಾಹಸಮಯ ಪುಸ್ತಕಗಳನ್ನು ಓದುವುದರ ಜೊತೆಗೆ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಇಲ್ಲಿನ ಅಧ್ಯಕ್ಷ ಪ್ರಸಾದ್ ಶಾನ್ ಬಾಗ್, ಐಕ್ಯೂಎಸಿ ಘಟಕದ ಸಂಯೋಜಕಿ ಡಾ. ರವಿಕಲಾ, ಕಾಲೇಜಿನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಣವ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಭುವನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ಚೇತನ್ ಸ್ವಾಗತಿಸಿ, ಧರಿತ್ರಿ ವಂದಿಸಿ, ಚರಣ್ ನಿರ್ವಹಿಸಿದರು.

Leave a Reply

Your email address will not be published. Required fields are marked *

Related News

News
06/03/2026

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್

News and Events
06/03/2026

ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

News
20/02/2026

ವಿವೇಕಾನಂದ ಕಾಲೇಜಿನಲ್ಲಿ ವೀರ ರಾಣಿ ಅಬ್ಬಕ್ಕ- ರಾಷ್ಟ್ರೀಯ ವಿಚಾರ ಸಂಕಿರಣ