ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು : ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ

Leaf
Leaf

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ ಇಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇವರ ವತಿಯಿಂದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದಲ್ಲಿ ಉತ್ತಮ ಬದುಕಿಗೆ ವಿಜ್ಞಾನ ವಿಷಯದಲ್ಲಿ ವಿಜ್ಞಾನ ಕಾರ್ಯರೂಪ ಮಾದರಿ ಪ್ರದರ್ಶನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಆಗಸ್ಟ್ 6ರಂದು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತೀ ವಿದ್ಯಾಲಯದ ಕೋಶಾಧಿಕಾರಿ ಶ್ರೀ ಲಿಂಗಪ್ಪ .ಜೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀ ಹೇಮಂತ್ ಇವರು ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದ ಉದ್ದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಹಲವು ಮಾದರಿಗಳು ಪ್ರದರ್ಶನಗೊಂಡವು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀ ಕೃಷ್ಣಪ್ರಸಾದ್, ಕುಮಾರಿ ಅನನ್ಯ, ಕುಮಾರಿ ಅನುಶ್ರೀ ಮಯ್ಯ ತೀರ್ಪುಗಾರರಾಗಿ ಸಹಕರಿಸಿದರು. ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸೀತಾರಾಮ ಗೌಡ, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕ ಶ್ರೀ ವಸಂತ. ಕೆ, ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ಸ್ವಾಗತಿಸಿ, ವಿದ್ಯಾರ್ಥಿ ಕುಮಾರಿ ಹರಿಪ್ರಿಯ ಹರಿದಾಸ್ ಪ್ರಾರ್ಥಿಸಿದರು. ವಿಜೇತರ ಪಟ್ಟಿಯನ್ನು ಶ್ರೀ ಕೃಷ್ಣಪ್ರಸಾದ್ ವಾಚಿಸಿದರು. ಪ್ರಥಮ ಸ್ಥಾನ ಪೂರ್ವಿತ್ ಎನ್. ಪಿ ಮತ್ತು ರೋಶನ್‍ಕುಮಾರ್ ಡಿ ಪಿ 10ನೇ, ದ್ವಿತೀಯ ಎನ್ ಕೆ ಯಶ್ವಿತ್ ಮತ್ತು ಮೋಹಿತ್ ಬಿ ಕೆ 8ನೇ, ಕೀರ್ತನ್ ಕೆ ಹಾಗೂ ಯಕ್ಷಿತ್ 9ನೇ, ತೃತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಮಾಧಾನಕರ ಬಹುಮಾನವನ್ನು ಪೂಜನ್ ಡಿ ಆರ್ ಮತ್ತು ಲಿಶಿತ್‍ಕುಮಾರ್ ಸಿ 8ನೇ ಹಾಗೂ ರಕ್ಷಾ ಎಂ ಜೆ ಮತ್ತು ಇಂಚರ ಜಿ 10ನೇ ತರಗತಿ ಪಡೆದುಕೊಂಡಿರುತ್ತಾರೆ. ಆಂಗ್ಲವಿಭಾಗದ ಶಿಕ್ಷಕಿ ಕುಮಾರಿ ಶ್ವೇತಾ.ಪಿ.ಕೆ. ವಂದಿಸಿ, ಶಿಕ್ಷಕಿ ಶ್ರೀಮತಿ ಕಾವ್ಯಶ್ರೀ ಹರಿಕೃಷ್ಣ ನಿರೂಪಿಸಿದರು.

Leave a Reply

Your email address will not be published. Required fields are marked *

Related News

Featured image
Events
07/08/2025

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಕರಾಟೆ ಸ್ಪರ್ಧೆಯಲ್ಲಿ ಪ್ರಾಂತ ಮಟ್ಟಕ್ಕೆ ಆಯ್ಕೆ

News
07/08/2025

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ: ಪೋಷಕರ ಸಭೆ

News
07/08/2025

ಇಲೆಕ್ಡ್ರಿಕ್ ಸೈಕಲ್ ತಯಾರಿಸಿದ ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾರ್ಥಿ ವಿಶಾಲ್:-