
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷÀನ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ “ವಿಶಾಲ್” ಬೈಸಿಕಲನ್ನು “ಇಲೆಕ್ಡ್ರಿಕ್ ಸೈಕಲ್”ನ್ನಾಗಿ ಮಾರ್ಪಡಿಸಿ ತಾನು ತಯಾರಿಸಿದ ಇಲೆಕ್ಡ್ರಿಕ್ ಸೈಕಲ್‍ನಲ್ಲಿಯೇ ಕಾಲೇಜಿಗೆ ಬರುತ್ತಿರುವುದು ಅವನ ಹೆತ್ತವರಿಗೆ ಮತ್ತು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ. ಲೀಥಿಯಂ ಬ್ಯಾಟರಿ, ಡಿ.ಸಿ ಮೋಟಾರ್ ಹಾಗೂ ಸ್ಟೆಪ್ ಅಪ್ ಕನ್ವರ್ಟರ್‍ಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿದ ಈ ವಾಹನದ ವೇಗ 35-40ಕಿ.ಮಿ/ಗಂ. ಈ ವಾಹನಕ್ಕೆ ಹೆಡ್‍ಲೈಟ್, ಹಾರ್ನ್, ಬ್ರೇಕ್‍ಗಳನ್ನು ಅಳವಡಿಸಲಾಗಿದೆ. ಮುಂದೆಯೂ ಇಂತಹ ಹೊಸ-ಹೊಸ ಅನ್ವೇಷಣೆಗಳನ್ನು ಮಾಡುವ ಹುರುಪು ಹಾಗೂ ಪ್ರೋತ್ಸಾಹ ಸಿಗಲು ಆತ ವಿವೇಕಾನಂದ ಪಾಲಿಟೆಕ್ನಿಕ್‍ನ “ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷÀನ್” ವಿಭಾದಲ್ಲಿ ಸೇರಿರುತ್ತಾನೆ.
