ನಿರ್ಮಲ ಪ್ರೇಮ ಭ್ರಾತೃತ್ವದ ಸಂಕೇತ ರಕ್ಷಾಬಂಧನ, ಬಿಡಿಬಿಡಿಯಾದ ರೇಷ್ಮೆಯ ಎಸಳುಗಳನ್ನು ದಾರದಿಂದ ಪೋಣಿಸಿದಾಗ ಅದು ರಕ್ಷೆಯಾಗುತ್ತದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ರಾಜರಾಮವರ್ಮ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶ್ರೀರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು – ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದಕ್ಕೆ, ವಿದ್ಯಾರ್ಥಿ-ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ರಕ್ಷಾಬಂಧನದ ಶುಭಾಶಯ ಕೋರಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ, ಹಿಂದಿ ಉಪನ್ಯಾಸಕಿ ಶೋಭಾ ವಿ.ಶೆಟ್ಟಿ ಉಪಸ್ಥಿತರಿದ್ದರು.