ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ದಿನಾಂಕ 15-08-2015 ಶನಿವಾರದಂದು ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ (ರಿ) , ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ, ವಿವೇಕ್ ಟ್ರೇಡರ್ಸ್, ಸೇವಾಂಜಲಿ ಟ್ರಸ್ಟ್, ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯ ಶಾಲಾ , ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದಿಕ್ ವೈದ್ಯಕೀಯ ಶಿಬಿರ ನಡೆಯಿತು.
ಬೆಳಿಗ್ಗೆ 9.30 ಕ್ಕೆ ವೇದವ್ಯಾಸ ಸಭಾಂಗಣದಲ್ಲಿ ಶಿಬಿರದ ಉದ್ಘಾಟನೆಯನ್ನು ಶ್ರೀಯುತ ಪ್ರಕಾಶ್ ಕುಕ್ಕಿ ನಿವೃತ್ತ ಸೇನಾನಿ ಕೋಡಪದವು ಇವರು ನೆರವೇರಿಸಿದರು. ಸಮಾರಂಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡುತ್ತಾ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿರುವುದು ನಮ್ಮ ತನವನ್ನು ಉಳಿಸಿಕೊಳ್ಳುವುದಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ದಿನದಂದು ನಾವು ಆಯುರ್ವೇದಿಕ್ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿರುವುದು ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತದೆ ನಮ್ಮ ಪರಂಪರೆಯ ಆಯುರ್ವೇದವನ್ನು ನೆನಪು ಮಾಡಿಕೊಳ್ಳುವ ಸುಸಂಧರ್ಭ ಒದಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಅಮೃತಬಳ್ಳಿಯನ್ನು ವಿತರಿಸಿದರು.
ವೇದಿಕೆಯಲ್ಲಿ ವೈದ್ಯರಾದ ಮೋಹನ್ ಕಿಶೋರ್ , ಎಮ್.ಎಸ್ ಕಾಮತ್, ಕಾತ್ಯಾಯಿನಿ, ರಾಜೀವ ಶೆಣೈ, ಚೈತ್ರಾ, ಸುಷ್ಮಾ ಹಾಗೂ ವಿವೇಕ ಟ್ರೇಡರ್‍ಸ್ ನ ಶ್ರೀ ದಯಾನಂದ್, ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಸಂದೇಶ್ ಕಾಮತ್ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಜಿ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ವಿವಿಧ ಕೊಠಡಿಗಳಲ್ಲಿ ವೈದ್ಯಕೀಯ ತಪಾಸಣೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಶ್ರೀ ಶಿವಗಿರಿ ಸತೀಶ್ ಭಟ್ ಸ್ವಾಗತಿಸಿ ರೇಣುಕಾ ಮಾತಾಜಿ ನಿರೂಪಿಸಿ ಧನ್ಯವಾದಗೈದರು.