ಭಜನಾ ತರಬೇತಿ ಕಮ್ಮಟ

ಉಪ್ಪಿನಂಗಡಿ : ಭಕ್ತಿ ಮತ್ತು ಶಕ್ತಿ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಮಗೆಲ್ಲವನ್ನ್ನೂ ನೀಡಿರುವ ಭಗವಂತನನ್ನು ಭಜನೆಯ ಮೂಲಕ ಸದಾ ನೆನೆಯುವಕಾರ್ಯ ಪ್ರತಿ ಮನೆ ಪ್ರತಿ ಮನದಲ್ಲೂ ಪ್ರತಿನಿತ್ಯ ನಡೆಯಬೇಕಾಗಿದೆ ಎಂದು ಸಾಮಾಜಿಕ ಮುಂದಾಳು ಪುರುಷೋತ್ತಮ ಮುಂಗ್ಲಿಮನೆ ತಿಳಿಸಿದರು. ಅವರು ವಿಜಯದಶಮಿಯಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಹಮ್ಮಿಕೊಂಡಿದ್ದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಿಶ್ವ ವಂದನೀಯ ಸಂಸ್ಕೃತಿಯ ನೆಲೆಯಾದ ಭಾರತದಲ್ಲೇ ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಅಧಃಪತನದ […]

ಆರೋಗ್ಯ ನಿಧಿ ಹಸ್ತಾಂತರ

ಉಪ್ಪಿನಂಗಡಿ :ಸಂಕಷ್ಠದಲ್ಲಿರುವವರಿಗೆ ಸಹಾಯ ಸಹಕಾರ ನೀಡಿ ಸ್ಪಂದಿಸುವುದೇ ಮಾನವ ಜೀವನದ ಆದರ್ಶ ನಡೆಯಾಗಿದ್ದು, ಇದು ಭಗವಂತನ ಕೃಪೆಗೆ ಒಳಗಾಗುವ ಕಾರ್ಯವೂ ಹೌದುಎಂದು ಶ್ರೀ ಮಾಧವ ಶಿಶು ಮಂದಿರದ ಗೌರವಾಧ್ಯಕ್ಷ ಯು ರಾಮ ತಿಳಿಸಿದರು. ಅವರು ಇತ್ತೀಚೆಗೆ ಅಪಘಾತದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಉಪ್ಪಿನಂಗಡಿಯ ಶ್ರೀ ರಾಮ ಶಾಲಾ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚಕ್ಕಾಗಿ ಶ್ರೀ ಮಾಧವ ಶಿಶು ಮಂದಿರದ ವತಿಯಿಂದ ನೀಡಲಾದ 25 ಸಾವಿರ ರೂಪಾಯಿಯ ಆರೋಗ್ಯ ನಿಧಿಯನ್ನು ಶ್ರೀ ರಾಮ ಶಾಲಾ ಸಂಚಾಲಕ ಯು ಜಿ ರಾಧರವರಿಗೆ […]