ಸಪ್ತಶಕ್ತಿ ಸಂಗಮ ಕಾರ್ಯಕ್ರಮಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

Leaf
Leaf

ದಿನಾಂಕ 3.1.2026 ರಂದು ಶನಿವಾರ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಹನುಮಾನ್ ನಗರ, ಕಡಬದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾತೆಯರನ್ನು ಆರತಿ ಬೆಳಗಿ , ಅರಿಶಿನ , ಕುಂಕುಮ ಬೆಲ್ಲ ನೀರನ್ನು ಕೊಟ್ಟು ಸತ್ಕರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಂದ ಸರಸ್ವತಿ ವಂದನಾ ನಡೆಯಿತು. ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಯನ್ನು ನೆರೆದಿದ್ದ ಮಾತೆಯರಿಗೆ ಮಾತಾಜಿ ಶ್ರೀಮತಿ ಪವಿತ್ರ ಎನ್ ರೈ ಇವರು ಹೇಳಿಕೊಟ್ಟರು.

ಶ್ರೀಮತಿ ಅನಿತಾ ಮಾತಾಜಿ ಅವರು ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ಸಹಶಿಕ್ಷಕಿ ಶ್ರೀಮತಿ ರಾಜೇಶ್ವರಿ ಸುವರ್ಣ ಮಾತಾಜಿಯವರು ಕುಟುಂಬದ ಅರಿವು ಮತ್ತು ಪರಿಸರದ ಬಗ್ಗೆ ಭಾರತೀಯ ದೃಷ್ಟಿಕೋನ ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು.

ನಂತರ ಶ್ರೀಮತಿ ಶೋಭಾ ಹೆಗ್ಡೆ ಮಾತಾಜಿಯವರು ಮಾತೆಯರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಶ್ರೀಮತಿ ರಾಜೇಶ್ವರಿ ಸುವರ್ಣ ಮಾತಾಜಿ ಅವರು ಬಹುಮಾನವಿತ್ತರು. ತದನಂತರ ವಿದ್ಯಾರ್ಥಿಗಳು ವೀರ ಮಹಿಳೆಯರ ವೇಷಭೂಷಣಗಳನ್ನು ಧರಿಸಿ ಸ್ಪೂರ್ತಿದಾಯಕ ಸಂದೇಶಗಳನ್ನು ತಿಳಿಸಿದರು. ನಂತರ ವೇದಿಕೆಯಲ್ಲಿದ್ದಂತಹ ಅತಿಥಿಗಳಿಂದ ಶ್ರೀಮತಿ ಜಾನಕಿ ಪಲ್ಲತಡ್ಕ ಕೊಡಿಂಬಾಳ ನಾಟಿ ವೈದ್ಯರು, ಇವರನ್ನು ಸನ್ಮಾನಿಸಲಾಯಿತು. ಶ್ರೀಮತಿ ದಿವ್ಯ ವಾಸುದೇವ ಗೌಡ ಆಡಳಿತ ಮಂಡಳಿ ಸದಸ್ಯರು ಆಂಗ್ಲ ಮಾಧ್ಯಮ ವಿಭಾಗ ಇವರು ಮಹಿಳೆಯರಲ್ಲಿ ಸಪ್ತಶಕ್ತಿಯ ಅರಿವು ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಸಭಾಧ್ಯಕ್ಷತೆಯನ್ನು ಶ್ರೀಮತಿ ಜಯಶ್ರೀ ಎ. ಕಾರ್ಯದರ್ಶಿಗಳು ವರಮಹಾಲಕ್ಷ್ಮಿ ಪೂಜಾ ಸಮಿತಿ ಸರಸ್ವತಿ ವಿದ್ಯಾಲಯ ಕಡಬ ಇವರು ವಹಿಸಿದ್ದರು ಮತ್ತು ಶ್ರೀಮತಿ ಶಾಲಿನಿ ರೈ ಆಜನ ಐತ್ತೂರು ಮತ್ತು ಮಾತಾಜಿ ಶ್ರೀಮತಿ ಪವಿತ್ರ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ಹರ್ಷಿತ ಮಾತಾಜಿ ಮಾತೆಯರಿಗೆ ಸಪ್ತಶಕ್ತಿ ಸಂಗಮದ ಸಂಕಲ್ಪವನ್ನು ಬೋಧಿಸಿದರು ,ಮಾತಾಜಿ ಪವಿತ್ರ ರೈ ವಂದಿಸಿ, ಸುಮಂಗಲ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು 120 ಮಂದಿ ಮಾತೆಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *

Related News

News
06/03/2026

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್

News and Events
06/03/2026

ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

News
06/03/2026

ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ