ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಭಾರತ್ ಭೋದ್ ಮಾಲ ಕಾರ್ಯಕ್ರಮ

Leaf
Leaf

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ್ ಇದರ ವತಿಯಿಂದ “ಭಾರತ್ ಭೋದ್ ಮಾಲಾ” ಕಾರ್ಯಕ್ರಮ ನಡೆಯಿತು .ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾI ಶೋಭಿತ ಸತೀಶ್ ರಾಷ್ಟ್ರೀಯ ಮಂತ್ರಿ ವಿದ್ಯಾ ಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಹಾಗೂ ಪ್ರಾಂಶುಪಾಲರು ವಿವೇಕಾನಂದ ಬಿಎಡ್ ಕಾಲೇಜು ಪುತ್ತೂರು ಮಾತನಾಡುತ್ತಾ “ಜೀವನದಲ್ಲಿ ನಿರಂತರವಾಗಿ ಕಲಿಯುವುದೇ ಶಿಕ್ಷಣ ತಾಂತ್ರಿಕ ಶಿಕ್ಷಣದ ಜೊತೆಗೆ ಮೌಲ್ಯಯುತ ಶಿಕ್ಷಣದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಬಿಂಬಿಸುವ ಕಾರ್ಯಕ್ರಮವೇ “ಭಾರತ್ ಭೋದ್ ಮಾಲ” ಕಟ್ಟಡದ ಚೌಕಟ್ಟಿನೊಳಗಿನ ಶಿಕ್ಷಣದಿಂದ ವಿದ್ಯಾರ್ಥಿಯ ಬೌದ್ಧಿಕ ಬೆಳವಣಿಗೆಯ ಜೊತೆಗೆ ಸಾಂಸ್ಕೃತಿಕ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಆಗಬೇಕು ಈ ನಿಟ್ಟಿನಲ್ಲಿ ಪಂಚಕೋಶ ಶಿಕ್ಷಣ ಪದ್ಧತಿ ಬಗ್ಗೆ ವಿವರಿಸುತ್ತಾ ಪಂಚಕೋಶವೆಂದರೆ ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯದ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡಿದರು”.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಹಾಗೂ ಸದಸ್ಯರಾದ ರವಿ ಮುಂಗ್ಲಿ ಮನೆ ಉಪಸ್ಥಿತರಿದ್ದರು. ದ್ವಿತೀಯ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿನಿಯರಾದ ಸುಜನ್ಯ ತಂಡದವರು ಪ್ರಾರ್ಥಿಸಿದರು. ಸ್ವಾಗತ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ್ ಯಸ್ ಇವರು ನಡೆಸಿಕೊಟ್ಟರು. ಧನ್ಯವಾದ ಸಮರ್ಪಣೆಯನ್ನು ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಪ್ರಶಾಂತ್ ಕೆ ನೆರವೇರಿಸಿದರು. ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Related News

News
06/03/2026

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್

News and Events
06/03/2026

ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

News
06/03/2026

ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ