
ಪುತ್ತೂರು ; ವಿವೇಕಾನಂದ ಪಾಲಿಟೆಕ್ನಿಕ್‍ನಲ್ಲಿ 2026-27ರ ಶೈಕ್ಷಣಿಕ ವರ್ಷಕ್ಕೆAICTE ನವದೆಹಲಿಯಿಂದ ಶಿಫಾರಸುಗೊಂಡ ಎರಡು ಹೊಸ ಕೋರ್ಸ್‍ಗಳಾದArtificial Intelligence & Machine Learning (AIML) ಹಾಗೂ “Automation & Robotics (AR)” ನ ಸೇರ್ಪಡೆಗಾಗಿ ತಾಂತ್ರಿಕ ಶಿಕ್ಷಣಮಂಡಳಿಯಿಂದ ಸ್ಥಳ ಪರಿಶೀಲನೆ ಹಾಗೂ ಮೂಲಭೂತ ಸೌಕರ್ಯಗಳ ಮಾಹಿತಿ ಪಡೆಯುವುದಕ್ಕೋಸ್ಕರ ತಾಂತ್ರಿಕ ಶಿಕ್ಷಣ ಮಂಡಳಿ ಬೆಂಗಳೂರಿನ ಉಪನಿರ್ದೇಶಕರಾದ ಡಾ| ವೈ. ಎನ್ ದೊಡ್ಡಮನಿ ಹಾಗೂ ಮೋಹನ್ ರಾಜ್ ವಿಭಾಗಾಧಿಕಾರಿ , ಸಿವಿಲ್ ವಿಭಾಗ ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಇವರ ತಂಡ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಸಂಧರ್ಭೋಚಿತ ಸಲಹೆ ಸೂಚನೆಗಳನ್ನಿತ್ತರು.
ಸಂಸ್ಥೆಯ ಪರಿವೀಕ್ಷಣೆಯ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ , ಸಂಚಾಲಕರಾದ ಮಹಾದೇವ ಶಾಸ್ತ್ರಿ , ಸದಸ್ಯರಾದ ರವಿಮುಂಗ್ಲಿಮನೆ , ಪ್ರಾಂಶುಪಾಲರಾದ ಮುರಳೀಧರ .ಯಸ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಸಹಕರಿಸಿದರು.