ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಉತ್ಕರ್ಷ ಕಾರ್ಯಕ್ರಮ

Leaf
Leaf

ಪುತ್ತೂರು; ವೃದ್ಧರಿಗೂ ಉತ್ಸಾಹ ತುಂಬುವಂತಹಾ ಕಾರ್ಯತತ್ಪರತೆ ಯುವಕರಲ್ಲಿರಬೇಕು. ಬಂಗಾರದಂತಹ ವಿದ್ಯಾರ್ಥಿ ಜೀವನದಲ್ಲಿ ಸಾಗುವ ದಾರಿ ಒಳಿತಿನ ಕಡೆಗೆ ಇರಬೇಕು. ಅಧ್ಯಾಪಕರಿಗೆ ಹಾಗೂ ಪೋಷಕರಿಗೆ ಮೋಸ ಮಾಡಕೂಡದು. ಜೀವನದ ಅನುಭವ ಎಂದಿಗೂ ಮೇಲು ” ಎಂದು ರೈತಬಂಧು ಆಹಾರೋದ್ಯಮ ಪ್ರೈವೆಡ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಶಂಕರ್ ನಾಯಕ್ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ ಉತ್ಕರ್ಷ ‘ ಶೀರ್ಷಿಕೆಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಜಗನ್ನಾಥ್ ಎ ಅಧ್ಯಕ್ಷೀಯ ನುಡಿಗಳನ್ನಾಡಿ ” ಎಷ್ಟೋ ಹುದ್ದೆಗಳಿಗೆ ಜನರ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಅವುಗಳತ್ತ ಗಮನ ಹರಿಸಬೇಕು. ಉದ್ಯೋಗ ಪಡೆದುಕೊಂಡವರು ಇನ್ನೂ ಹಲವರಿಗೆ ಉದ್ಯೋಗ ನೀಡವಂತೆ ಬೆಳೆಯಬೇಕು ” ಎಂದರು.
ಐಕ್ಯೂಎಸಿಯ ಸಂಯೋಜಕಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಮಾರೋಪ ಸಮಾರಂಭ:
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಹಾಸ್ ಮರಿಕೆ ಮಾತನಾಡಿ, ಸ್ವಂತ ಉದ್ಯಮವನ್ನು ನಮಗೆ ಬೇಕಾಗುವ ಹಾಗೆ ಮಾಡಿಕೊಳ್ಳುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೆ ಹಾಗೂ ತಮ್ಮ ದಾರಿಗೆ ಯಾವುದು ಸೂಕ್ತ ಎಂದು ನಾವೇ ಕಂಡುಕೊಳ್ಳಬೇಕು. ಉದ್ಯೋಗವನ್ನು ಹುಟ್ಟುಹಾಕಿ ಅದರ ವ್ಯಾಪ್ತಿಯನ್ನು ಹೆಚ್ಛಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಸಾವಯವ ಕೃಷಿಯ ಪ್ರಾಮುಖ್ಯತೆ ತಿಳಿಯಲು ನಾವು ಹೊಸ ರೀತಿಯ ಉಪಾಯ ಹುಡುಕಿಕೊಂಡು ಹೋದರೆ ಒಂದು ಉತ್ತಮ ರೀತಿಯ ಉದ್ಯಮವನ್ನು ಮಾಡಬಹುದು ಎಂದು ಅಭಿಪ್ರಾಯಪಟ್ಟರು.
“ಉತ್ಕರ್ಷ” 2025ರ ಕೌಶಲ್ಯಾಭಿವೃದ್ಧಿಯ ಪ್ರಶಸ್ತಿಯನ್ನು ದ್ವಿತೀಯ ವಾಣಿಜ್ಯ’ ಸಿ’ ವಿಭಾಗದ ಮತ್ತು ದ್ವಿತೀಯ ವಾಣಿಜ್ಯವಿಭಾಗದ ‘ ಬಿ ‘ವಿದ್ಯಾರ್ಥಿಗಳು ಪಡೆದರು. ಕಾರ್ಯಕ್ರಮವನ್ನು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ಚರಿಷ್ಮಾ ಸ್ವಾಗತಿಸಿ ಸುಬ್ರಹ್ಮಣ್ಯ ವಂದಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪುಣ್ಯ ಹಾಗೂ ಅಮೃತಾ ನಿರೂಪಿಸಿದರು.

Leave a Reply

Your email address will not be published. Required fields are marked *

Related News

Events
03/07/2025

ಸರಸ್ವತೀ ವಿದ್ಯಾಲಯದಲ್ಲಿ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ

News
03/07/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಉರಿಮಜಲು ಕೆ. ರಾಮ ಭಟ್ ಸಭಾಂಗಣ ಲೋಕಾರ್ಪಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವ

News
02/07/2025

ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 7 ರ್ಯಾಂಕ್ ಪಡೆದು ದಾಖಲೆ