ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಮಾಧ್ಯಮ ಹಬ್ಬ ‘ವಿವೇಕ ಚೇತನ್’2025

Leaf
Leaf

ಪುತ್ತೂರು: ‘’ಪ್ರಸ್ತುತ ದಿನಗಳಲ್ಲಿ ಬರವಣಿಗೆ, ಸಂವಹನ ಇತ್ಯಾದಿ ಕೌಶಲಗಳೊಂದಿಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದರೆ ಒಳ್ಳೆಯ ಭವಿಷ್ಯವಿದೆ. ಅನೇಕ ಸವಾಲುಗಳನ್ನು ಎದುರಿಸಿ ಒಬ್ಬ ಪತ್ರಕರ್ತ ವರದಿಯನ್ನು ಸಿದ್ಧಪಡಿಸಬೇಕಾಗುತ್ತದೆ ಎಂದು ರಿಪಬ್ಲಿಕ್ ಕನ್ನಡ ವಾಹಿನಿಯ ಖ್ಯಾತ ನಿರೂಪಕ ರಂಜಿತ್ ಶಿರಿಯಾರ ನುಡಿದರು.
ಇವರು ವಿವೇಕಾನಂದ ಮಹಾವಿದ್ಯಾಲಯ( ಸ್ವಾಯತ್ತ) ಇಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ, ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ವಿವೇಕ್ ಚೇತನ’ ರಾಷ್ಟ್ರೀಯ ಮಟ್ಟದ ಮಾಧ್ಯಮ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಅಮೃತ ವಿಶ್ವ ವಿದ್ಯಾಪೀಠಂ ಇಲ್ಲಿನ ದೃಶ್ಯ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಬಾಲಾಡಿ ” ಒಳ್ಳೆಯ ಪತ್ರಿಕೋದ್ಯಮಿಯಾಗಲು ಉತ್ತಮ ಕೇಳುಗನಾಗಿರಬೇಕು. ಮೊಬೈಲ್ ಬಳಕೆಯಲ್ಲೇ ನಾವು ಕಳೆದು ಹೋಗಬಾರದು. ವಿದ್ಯಾರ್ಥಿಗಳು ಸದಭಿರುಚಿಯ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು. ಕಥೆಗಾರ, ಬರಹಗಾರರ ಅಗತ್ಯ ಇಂದು ಮಾಧ್ಯಮ ಕ್ಷೇತ್ರಕ್ಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪೆÇ್ರ. ಶ್ರೀಪತಿ ಕಲ್ಲೂರಾಯ ವಹಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ವಿನೂತನ’ ಹಾಗೂ ‘ವಿಕಸನ’Àವನ್ನು ಬಿಡುಗಡೆಗೊಳಿಸಲಾಯಿತು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಗ್‍ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯೆಯೊಂದಿಗೆ ಸಂಸ್ಕಾರವನ್ನೂ ನೀಡಿ ವಿದ್ಯಾರ್ಥಿಗಳನ್ನು ರೂಪಿಸುತ್ತದೆ. ಅದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಸಾಧಿಸುತ್ತೇನೆ ಎಂಬ ಛಲದಿಂದ ಮುಂದುವರಿದಾಗ ಯಶಸ್ಸಿನ ಮೆಟ್ಟಿಲೇರಬಹುದು. ಯುವ ಮನಸ್ಸುಗಳು ಕ್ರಿಯಾಶೀಲರಾಗಿ ಮುಂದುವರಿಯಬೇಕು ” ಎಂದು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹಿತನುಡಿಗಳನ್ನಾಡಿದರು
ಮೀಡಿಯಾ ಹಬ್ಬದಲ್ಲಿ 23 ಕಾಲೇಜುಗಳು ಭಾಗವಹಿಸಿದ್ದು ಸಮಗ್ರ ಪ್ರಶಸ್ತಿಯನ್ನು ಗೋವಿಂದ ದಾಸ ಕಾಲೇಜು ಸುರತ್ಕಲ್ ಪಡೆದುಕೊಂಡಿತು. ಎಸ್‍ಡಿಎಂ ಕಾಲೇಜು ಉಜಿರೆ ರನ್ನರ್ ಅಪ್ ಆಗಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ವಿಷ್ಣು ಗಣಪತಿ ಭಟ್, ಕಾರ್ಯಕ್ರಮ ಸಂಯೋಜಕ ಸುತನ್ ಕೇವಳ, ವಿಶೇಷಾಧಿಕಾರಿ ಡಾ.ಶ್ರೀಧರ್ ನಾಯಕ್, ಪಿಜಿ ಡೀನ್ ಡಾ.ವಿಜಯಸರಸ್ವತಿ, ವಿವೇಕ ಚೇತನ್ ಕಾರ್ಯಕ್ರಮದ ಸಂಯೋಜಕ ಹರಿಪ್ರಸಾದ್ ಈಶ್ವರಮಂಗಲ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಹೆಚ್.ಜಿ ಶ್ರೀಧರ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ.ಆರ್ ನಿಡ್ಪಳ್ಳಿ ವಂದಿಸಿದರು. ದೀಕ್ಷಾ, ಪಂಚಮಿ, ಶೈನಿತಾ , ಚೈತನ್ಯ ಮತ್ತು ಭೂಮಿಕಾ ನಿರ್ವಹಿಸಿದರು. ಉಪನ್ಯಾಸಕಿಯರಾದ ಹವ್ಯಾ ಪುರ ಹಾಗೂ ಅಕ್ಷತಾ ಸಹಕರಿಸಿದರು.

ಮೈತ್ರೇಯಿ ಗುರುಕುಲಕ್ಕೆ ಈ ಬಾರಿಯ ವಿವೇಕ ಚೇತನ ಪ್ರಶಸ್ತಿ
ಈ ಬಾರಿಯ ವಿವೇಕ ಚೇತನ ಪ್ರಶಸ್ತಿಯನ್ನು ಬಂಟ್ವಾಳದ ಮೈತ್ರೇಯಿ ಗುರುಕುಲದ ಅಧ್ಯಾಪಕಿ ಶ್ರೀಮತಿಯವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ನೀಡಿ ಮಾತನಾಡಿ, ‘’ಹೆಣ್ಣು ಸಮಾಜಕ್ಕೊಂದು ಆಸ್ತಿ. ನೈತಿಕ ಮೌಲ್ಯ, ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಸ್ತ್ರೀಯರ ಪಾತ್ರ ಮಹತ್ವದ್ದಾಗಿದೆ. ಅಂತಹಾ ಸ್ತ್ರೀಯರಿಗೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡುವ ಮೈತ್ರೇಯಿ ಗುರುಕುಲಕ್ಕೆ ಪ್ರಶಸ್ತಿ ನೀಡಿದ ವಿವೇಕಾನಂದ ಮಹಾವಿದ್ಯಾಲಯದ ನಡೆ ಶ್ಲಾಘನೀಯ ” ಎಂದು ನುಡಿದರು.

Leave a Reply

Your email address will not be published. Required fields are marked *

Related News

Events
03/07/2025

ಸರಸ್ವತೀ ವಿದ್ಯಾಲಯದಲ್ಲಿ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ

News
03/07/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಉರಿಮಜಲು ಕೆ. ರಾಮ ಭಟ್ ಸಭಾಂಗಣ ಲೋಕಾರ್ಪಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವ

News
02/07/2025

ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 7 ರ್ಯಾಂಕ್ ಪಡೆದು ದಾಖಲೆ