ವಿವೇಕಾನಂದ ಕಾಲೇಜಿನಲ್ಲಿ ಡಾ.ಕೃಷ್ಣ ಕಾರಂತ ಅವರಿಗೆ ಬೀಳ್ಕೊಡುಗೆ ಸಮಾರಂಭ

Leaf
Leaf

ಪುತ್ತೂರು: ವೃತ್ತಿ ಬದುಕಿನಲ್ಲಿ ಖುಷಿಯ ಕ್ಷಣಗಳು ನಮ್ಮದಾಗಬೇಕು. ಈ ಹಂತದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುತ್ತಾ ಮುಂದೆ ಸಾಗುವುದು ಅತೀ ಮುಖ್ಯ ಬದುಕಿನ ಏರಿಳಿತಗಳು ಹಲವಾರು ಅನುಭವಗಳನ್ನು ತಿಳಿಸಿಕೊಡುತ್ತದೆ. ಕಾರಂತರ ನಿವೃತ್ತ ಜೀವನದಲ್ಲಿ ಶ್ರೇಯಸ್ಸಾಗಲಿ ” ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ ) ಇಲ್ಲಿ ಅಧ್ಯಾಪಕರ ಸಂಘ ಹಾಗೂ ಅಧ್ಯಾಪಕೇತರರ ಸಂಘದ ಸಹಯೋಗದಲ್ಲಿ ನಡೆದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಕಾರಂತ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ ” ಕಾರಂತರು ಒಬ್ಬ ಅಪ್ಪಟ ಶ್ರಮಜೀವಿ. ಕಾಲೇಜಿಗೆ ಅವರು ನೀಡಿರುವ ಅನುಪಮ ಸೇವೆಯನ್ನು ಸಂಸ್ಥೆ ಸದಾ ಸ್ಮರಿಸಿಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೃಷ್ಣ ಕಾರಂತ್, ‘ವಿವೇಕಾನಂದ ಕಾಲೇಜು ನನಗೆ ಒಂದು ಅದ್ಭುತವಾದ ಬದುಕನ್ನು ನಿರೂಪಿಸಲು ಅವಕಾಶವನ್ನು ಕೊಟ್ಟಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿದ ತೃಪ್ತಿ ನನಗಿದೆ. ವೃತ್ತಿ ಜೀವನದಲ್ಲಿ ಅನುಭವಿಸಿದ ಸಿಹಿ ಕಹಿ ನೆನಪುಗಳು ಬದುಕನ್ನು ಇನ್ನಷ್ಟು ಗಟ್ಟಿ ಮಾಡಲು ಸಹಕಾರಿಯಾಗಿದೆ. ಹಾಗಾಗಿ ಬದುಕಿನುದ್ದಕ್ಕೂ ಸಹಕರಿಸಿದ ಎಲ್ಲರನ್ನೂ ಅತ್ಯಂತ ಗೌರವದಿಂದ ಸದಾ ಸ್ಮರಿಸಿಕೊಳ್ಳುತ್ತೇನೆ’ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಡಾ. ಕೃಷ್ಣ ಕಾರಂತ್ ಅವರ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳು ಶುಭಹಾರೈಸಿದರು.
ಡಾ. ಕೃಷ್ಣ ಕಾರಂತ್ ದಂಪತಿಗಳಿಗೆ ಬೀಳ್ಕೊಡುಗೆಯ ಗೌರವವನ್ನು ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ. ಶ್ರೀಕೃಷ್ಣ ಗಣರಾಜ ಭಟ್, ಅಧ್ಯಾಪಕೇತರರ ಸಂಘದ ಅಧ್ಯಕ್ಷ ಮೋಹನ ಎನ್ ಉಪಸ್ಥಿತರಿದ್ದರು.
ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಸೌಮಿತ್ರ ಸ್ವಾಗತಿಸಿದರು. ವಿಶೇμÁಧಿಕಾರಿ ಹಾಗೂ ಕನ್ನಡ ಸಂಘದ ಮುಖ್ಯಸ್ಥ ಡಾ. ಮನಮೋಹನ ಎಂ ನಿರೂಪಣೆ ಮಾಡಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

Related News

Featured image
Events
07/08/2025

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಕರಾಟೆ ಸ್ಪರ್ಧೆಯಲ್ಲಿ ಪ್ರಾಂತ ಮಟ್ಟಕ್ಕೆ ಆಯ್ಕೆ

News
07/08/2025

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ: ಪೋಷಕರ ಸಭೆ

News
07/08/2025

ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು : ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ