ನಿಮ್ಮ ಗುರಿಯೇ ಸಕ್ಸಸ್ ಬೂಸ್ಟರ್: ಪ್ರೊ. ಶ್ರೀಪತಿ ಕಲ್ಲೂರಾಯ

Leaf
Leaf

ಪುತ್ತೂರು: ನಮ್ಮ ದೇಶದಲ್ಲಿ ಜ್ಞಾನ ಸಂಪಾದನೆಯಲ್ಲಿ ತೊಡಗಿದ್ದಾರೆಯೇ ಹೊರತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಎಡವುತ್ತಿದ್ದಾರೆ. ನಿಮ್ಮ ಕೌಶಲ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿ. ನಿಮ್ಮ ಗುರಿಯನ್ನು ಆಗಾಗ ನೆನಪಿಸಿಕೊಳ್ಳಿ ಅದು ನಿಮ್ಮ ಯಶಸ್ಸಿಗೆ ಬೂಸ್ಟರ್‍ನಂತೆ ಕೆಲಸ ಮಾಡುತ್ತದೆ. ಸಮಾಜಕ್ಕೆ ಹೊಂದಿಕೊಂಡು ನಿಮ್ಮನ್ನು ನೀವು ಹೇಗೆ ಮುನ್ನೆಡೆಸಿಕೊಂಡು ಹೋಗುತ್ತೀರಿ ಎನ್ನುವುದೇ ನಿರ್ವಹಣೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜಿನ ಬಿಬಿಎ ವಿಭಾಗ, ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ವತಿಯಿಂದ “ಇಗ್ನೈಟಿಂಗ್ ದಿ ಫೈರ್ ವಿಥಿನ್” ಎನ್ನುವ ವಿಷಯಧಾರಿತ “ನಿರ್ವಹಣಾ 2025” ಎಂಬ ಒಂದು ದಿನದ ಅಂತರ್ ವಿಭಾಗ ಮಟ್ಟದ ಕೌಶಲ್ಯ ವರ್ಧಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಕ್ಷತಾ ಮಡ್ ಬ್ರಿಕ್ಸ್ ಇಂಡಸ್ಟ್ರಿಯ ಮಾಲಕ ಸಾತ್ವಿಕ್ ಖಂಡೇರಿ ಮಾತನಾಡಿ, ನಾನು ಇದೆ ಕಾಲೇಜುನಲ್ಲಿ ಅಭ್ಯಾಸ ಮಾಡಿದ್ದು, ಇಂದು ಇದೇ ಕಾಲೇಜಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದದ್ದು ಖುಷಿ ಕೊಟ್ಟಿದೆ ಎಂದರು. ಹಾಗೆ ನೀವು ಕೂಡ ಉತ್ತಮ ಕೌಶಲ್ಯ ಬೆಳಸಿಕೊಂಡು ಬಿಸಿನೆಸ್ ಕ್ಷೇತ್ರದಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಳ್ಳಿ ಎಂದು ಹಾರೈಸಿದರು.
ಕಾಲೇಜಿನ ಐಕ್ಯುಎಸಿ ಮುಖ್ಯಸ್ಥೆ, ವಾಣಿಜ್ಯ ವಿಭಾಗದ ಡೀನ್ ಡಾ. ರವಿಕಲಾ ಮಾತನಾಡಿ, ಯಾವುದೇ ವಿಷಯವನ್ನು ಪುಸ್ತಕದ ಮೂಲಕ ಕಾಲೇಜಿನ ಕೊಠಡಿಯಲ್ಲಿ ಕಲಿತರೆ ಆ ವಿಷಯದ ಅಂತರಾಳವನ್ನು ಪ್ರಾಕ್ಟಿಕಲ್ ಮೂಲಕ ಕಲಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥರಾದ ರೇಖಾ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣ ಪಿ ಜಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥರಾದ ರೇಖಾ ಸ್ವಾಗತ ಕೋರಿ, ವಿದ್ಯಾರ್ಥಿನಿ ಸಹನಾ ವಂದನಾರ್ಪಣೆ ಮಾಡಿದರು, ವಿದ್ಯಾರ್ಥಿನಿ ಅನುಜ್ಞ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ್ವಾರಕ ಗ್ರೂಪ್ ಆಫ್ ಕನ್‍ಸ್ಟ್ರಕ್ಷನ್ ಎಂ.ಡಿ ಗೋಪಾಲಕೃಷ್ಣ ಭಟ್ ಮಾತನಾಡಿ, ಗ್ರಾಹಕರ ಬೇಡಿಕೆಯನ್ನು ಪೂರೈಸುವುದೇ ಬಿಸಿನೆಸ್. ಕಾಲಕ್ಕೆ ತಕ್ಕಂತೆ ನಮ್ಮ ವ್ಯವಹಾರ ಪದ್ದತಿಯನ್ನು ಅಭಿವೃದ್ಧಿ ಪಡಿಸಿಕೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ, ಉತ್ತಮ ಕೌಶಲ್ಯಗಳನ್ನು ಕಲಿಸುವ ಜವಾಬ್ದಾರಿ ನಮ್ಮದು ಅದನ್ನು ಕರಗತ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮದು. ಬದುಕಿನಲ್ಲಿ ಯಾವತ್ತು ಸುಲಭವಾಗಿ ಸೋಲಬಾರದು. ನಿಮ್ಮ ಯಶಸ್ಸು, ನಿಮ್ಮ ಸಾಧನೆ, ನಿಮ್ಮ ಹೆಜ್ಜೆ ಗುರುತನ್ನು ನೆನಪಿಟ್ಟುಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ, ಅನ್ನಪೂರ್ಣ ಪಿ ಜಿ, ಗೌತಮ್ ಪೈ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣ ಪಿ ಜಿ ಸ್ವಾಗತ ಕೋರಿ, ವಿದ್ಯಾರ್ಥಿನಿ ಸಹನಾ ಕಾರ್ಯಕ್ರಮ ನಿರೂಪಿಸಿದರು.
ನಿರ್ವಹಣಾ 2025ರ ಅಂತರ್ ಇಲಾಖೆ ಮಟ್ಟದ ಸ್ಪರ್ಧೆಯಲ್ಲಿ ಕಾಲೇಜಿನ ಬಿಬಿಎ ವಿಭಾಗದ ನಕುಲಾಸ್ ನಾವಿಗೆಟರ್ ಪ್ರಥಮ ಬಹುಮಾನ ಮತ್ತು ಕೌಂನ್ಸಿಲ್ ದ್ವಿತೀಯ ಬಹುಮಾನ ಗೆದ್ದುಕೊಂಡು ಸಂಭ್ರಮಿಸಿದವು.
ಕಾರ್ಯಕ್ರಮದಲ್ಲಿ ಇದೆ ಸಂಸ್ಥೆಯಲ್ಲಿ ಕಲಿತು ಇಂದು 150 ಜನರಿಗೆ ಉದ್ಯೋಗ ನೀಡುತ್ತಿರುವ ಸುರಕ್ಷಾ ಮಡ್ ಬ್ರಿಕ್ಸ್ ಇಂಡಸ್ಟ್ರಿ ಮಾಲಕರದ ಸಾತ್ವಿಕ್ ಖಂಡೇರಿ ಮತ್ತು ಕಡಿಮೆ ಬೆಲೆಯಲ್ಲಿ ಸುಸ್ತಿರ ನಿವಾಸ ನಿರ್ಮಿಸಿಕೊಡುವಲ್ಲಿ ಸಾಧನೆ ಮಾಡಿದ ದ್ವಾರಕ ಗ್ರೂಪ್ ಆಫ್ ಕನ್‍ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

Related News

Featured image
Events
07/08/2025

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಕರಾಟೆ ಸ್ಪರ್ಧೆಯಲ್ಲಿ ಪ್ರಾಂತ ಮಟ್ಟಕ್ಕೆ ಆಯ್ಕೆ

News
07/08/2025

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ: ಪೋಷಕರ ಸಭೆ

News
07/08/2025

ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು : ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ