ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ರಥಯಾತ್ರೆ ಜನಜಾಗೃತಿ ಕಾರ್ಯಕ್ರಮ

Leaf
Leaf

ಪುತ್ತೂರು :ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ರಥ ಯಾತ್ರೆ ಜನಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಆಗಮಿಸಿದ ರಥವನ್ನು ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನಡೆಸಿದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಬೆಂಗಳೂರಿನ ಪರಿವರ್ತನಾ ಸೇವಾ ಟ್ರಸ್ಟ್ ನ ಸಂಯೋಜಕರಾದ ಸಂದೇಶ್ ರವರು ತಮ್ಮ ಅತಿಥೇಯ ಮಾತುಗಳನ್ನಾಡುವ ಸಂದರ್ಭದಲ್ಲಿ “ಯುವ ಸಮುದಾಯ ಮಾದಕ ವ್ಯಸನದಿಂದ ಮುಕ್ತವಾಗಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಮಾದಕ ವ್ಯಸನದಿಂದ ಸಿಗುವ ಕ್ಷಣಿಕ ಸುಖದಿಂದ ದೇಶಕ್ಕೂ ಮಾರಕ, ಸಮಾಜಕ್ಕೂ ಮಾರಕ. ಸದೃಢ ಭಾರತ ಕಟ್ಟುವುದಕ್ಕೆ ಡ್ರಗ್ಸ್ ಮುಕ್ತ ಯುವ ಜನಾಂಗ ಅಗತ್ಯ. ಈ ರೀತಿ ನಮ್ಮ ಸಂರಕ್ಷಣೆಯನ್ನು ನಾವೇ ಮಾಡೋಣ” ಎಂದು ಹೇಳಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ನಾವೆಲ್ಲರೂ ವ್ಯಸನ ಮುಕ್ತರಾಗಿ ಬಾಳುತ್ತೇವೆ ಎಂಬುದಾಗಿ ಪ್ರತಿಜ್ಞೆಗೆದರು.
ಕಾರ್ಯಕ್ರಮದ ಅಧ್ಯಕ್ಷರಾದ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ಮಾದಕ ವ್ಯಸನಗಳ ಬಗ್ಗೆ ತಿಳಿದು ತಿಳುವಳಿಕೆ ಮಾಹಿತಿ ನೀಡುವ ಕರ್ತವ್ಯ ನಿಮ್ಮ ಕೈಯಲ್ಲಿದೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದು ನುಡಿದರು.
ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು, ತಾಲೂಕು ಪುತ್ತೂರು ನಗರ ಪೊಲೀಸ್ ಠಾಣೆ ರೋಟರಿ ಕ್ಲಬ್ ಬರಮಲೆ ಹಿಲ್ಸ್. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಆಶಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ ಸದಸ್ಯರಾದ ಈಶ್ವರ ಚಂದ್ರ ಹಾಗೂ ರವಿಮುಂಗ್ಲಿ ಮನೆ ಅಧ್ಯಾಪಕರು ಅಧ್ಯಾಪಕೇತರರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದರು.
ಆಗಮಿಸಿದ ಅತಿಥಿ ಅಭ್ಯಾಗತರನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮರಳೀಧರ್ ಸ್ವಾಗತಿಸಿದರು. ಜಯಲಕ್ಷ್ಮಿ ಹಿರಿಯ ಉಪನ್ಯಾಸಕಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಇವರು ಪ್ರಾರ್ಥಿಸಿದರು. ಪ್ರಶಾಂತ್ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥರು ಧನ್ಯವಾದ ಸಮರ್ಪಿಸಿದರು. ಉಷಾ ಕಿರಣ್ ಹಿರಿಯ ಉಪನ್ಯಾಸಕಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

Related News

News
06/03/2026

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್

News and Events
06/03/2026

ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

News
06/03/2026

ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ