ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಲ್ಲಿ ಪಾದ ಪೂಜೆ

Leaf
Leaf

ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಕಡಬ ಇಲ್ಲಿನ 10ನೇ ತರಗತಿ ವಿದ್ಯಾರ್ಥಿ-ಪೆÇೀಷಕರೊಂದಿಗೆ ಸಂವಾದ ಹಾಗೂ ಪಾದಪೂಜನಾ ಕಾರ್ಯಕ್ರಮವು ಫೆಬ್ರವರಿ 19ರಂದು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರೌಢ ವಿಭಾಗದ ಮೇಲ್ವಿಚಾರಕರಾದ ಶ್ರೀಮತಿ ಪುಲಸ್ತ್ಯಾ ರೈ ವಹಿಸಿ, ಇಂತಹ ಪಾದಪೂಜನಾ ಕಾರ್ಯಕ್ರಮವು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದೆ ಎಂದು ಅಧ್ಯಕ್ಷ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಘುರಾಜ್ ಉಬರಡ್ಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ಆಗಮಿಸಿ ಹಲವು ನಿದರ್ಶನ, ದೃಶ್ಯಾವಳಿಗಳೊಂದಿಗೆ ಹೆತ್ತವರು ಮತ್ತು ಮಕ್ಕಳ ಸಂಬಂಧ, ಸಾಧನೆ ಮಾಡುವ ರೀತಿಯನ್ನು ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಹೆತ್ತವರ ಪಾದವನ್ನು ತೊಳೆದು ಅರಶಿನ ಕುಂಕುಮ ಹಚ್ಚಿ ಪುಷ್ಪಾರ್ಚನೆಯನ್ನು ಮಾಡುವುದರೊಂದಿಗೆ ಆರತಿ ಬೆಳಗಿ ಪ್ರತ್ಯಕ್ಷ ದೇವರುಗಳನ್ನು ಪೂಜಿಸುವುದರ ಮೂಲಕ ವೇದಿಕೆ ಭಾವನಾತ್ಮಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಪೆÇೀಷಕರು ತಮ್ಮ ಮನದಾಳದ ಭಾವನೆಗಳನ್ನು ಅನಿಸಿಕೆಯ ಮೂಲಕ ಅಭಿವ್ಯಕ್ತಗೊಳಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಲಿಂಗಪ್ಪ ಜೆ., ಮುಖ್ಯಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್. ಆಡಳಿತ ಮಂಡಳಿ ಸದಸ್ಯರಾದ ಶಿವಪ್ರಸಾದ್ ಮೈಲೇರಿ, ಪೆÇೀಷಕ ವೃಂದ, ವಿದ್ಯಾರ್ಥಿಗಳು, ಶಿಕ್ಷಕರು, ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕುಮಾರಿ ಪ್ರತೀಕ್ಷಾ ಮತ್ತು ಕುಮಾರಿ ಶರಣ್ಯ ಜೆ.ಕೆ. ಪ್ರಾರ್ಥಿಸಿದರು. ಶ್ರೀಮತಿ ಶೈಲಶ್ರೀ ರೈ ಎಸ್. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ವಂದಿಸಿದರು. ಶಿಕ್ಷಕಿ ಶ್ರೀಮತಿ ಸೌಮ್ಯ ಕೆ.ಎ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Related News

News and Events
24/03/2025

ವಿವೇಕಾನಂದ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ

Uncategorized
24/03/2025

ವಿವೇಕಾನಂದ ಕಾಲೇಜಿನಲ್ಲಿ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆ

Events
24/03/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಭಾರತ್ ಭೋದ್ ಮಾಲ ಕಾರ್ಯಕ್ರಮ