
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಈ ದೇಶದ ಮೇಲೆ ಸಾಕಷ್ಟು ಪ್ರಹಾರಗಳು ನಡೆದಿರುವುದು ಗೋಚರಿಸುತ್ತದೆ. ಕಳೆದುಕೊಂಡ ಸ್ವಾತಂತ್ರ್ಯವನ್ನು ಪುನರ್ ಸ್ಥಾಪಿಸುವುದಕ್ಕಾಗಿ ಸಾಕಷ್ಟು ಮಂದಿ ವೀರ ಹೋರಾಟಗಾರರು ಈ ನೆಲದಲ್ಲಿ ಜನ್ಮವೆತ್ತಿ ಬಂದಿರುವುದು ತಿಳಿದಿದ್ದೇವೆ. ಅಂತವರಲ್ಲಿ ವೀರ ಸಾವರ್ಕರ್ ಅವರ ಹೋರಾಟ ಅತ್ಯಂತ ಗಮನಾರ್ಹವಾದದು. ಸ್ವಂತಕ್ಕಾಗಿ ಬದುಕನ್ನು ಕಟ್ಟಿಕೊಳ್ಳದೆ, ಸಂಪೂರ್ಣವಾಗಿ ದೇಶಕ್ಕಾಗಿ ಬದುಕಿದವರು ಸಾವರ್ಕರ್. ಬಲವಾದ ಧೈಯ, ಚಿಂತನೆ, ತಾಯಿ ಭಾರತಿಗೋಸ್ಕರ ಬದುಕಬೇಕೆನ್ನುವ ಹಂಬಲ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ದೇಶದಲ್ಲಿ ಚಾಲ್ತಿಯಲ್ಲಿದ್ದ ವಿದೇಶಿ ವಸ್ತುಗಳನ್ನು ದಹನ ಮಾಡಿ ಅದರ ಬೂದಿಯನ್ನು ಹಣೆಗೆ ಹಚ್ಚುವ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿ, ಎರಡೆರಡು ಬಾರಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ ಒಬ್ಬ ಕ್ರಾಂತಿಕಾರಿ ಒಂದು ಅದ್ಭುತ ಚೈತನ್ಯ, ಅಪ್ಪಟ ದೇಶಪ್ರೇಮಿ ಈ ದೇಶದಲ್ಲಿ ಯಾರಾದರೂ ಇದ್ದರೆ ಅದು ವೀರ ಸಾವರ್ಕರ್ ಮಾತ್ರ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.