ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ದೀಪಪ್ರದಾನ

Leaf
Leaf

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ (ಬೀಳ್ಕೊಡುಗೆ) ಕಾರ್ಯಕ್ರಮವು ಯಾದವ ಶ್ರೀ ಸಭಾಂಗಣ ಹನುಮಾನ್‍ನಗರ ಕೇವಳದಲ್ಲಿ ಮಾರ್ಚ್ 7ರಂದು ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೇಶವ ಅಮೈ ಮಾಲಕರು ಎಸ್.ಆರ್.ಕೆ ಲ್ಯಾಡರ್ಸ್ ಪುತ್ತೂರು ಇವರು ದೀಪ ಪ್ರಜ್ವಲವನ್ನು ನೆರವೇರಿಸಿ, ಪ್ರೌಢಶಾಲಾ ಶಿಕ್ಷಣ ಮರೆಯಲಾಗದ ಶಿಕ್ಷಣ, ಇಂದು ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ಈ ದೇವಾಲಯದಿಂದ ದೇವತೆ ದೇವರುಗಳಾಗಿ ಹೊರ ಹೋಗುತ್ತಿದ್ದಾರೆ. ಅಂಕಗಳ ಜೊತೆ ಕೌಶಲ್ಯಗಳು ಅಗತ್ಯ ಎಂದು ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇಲ್ಲಿನ ಸಹ ಕಾರ್ಯನಿರ್ವಹಣಾಧಿಕಾರಿ ಶ್ರೀ ವೆಂಕಟರಮಣರಾವ್ ಮಂಕುಡೆ ವಹಿಸಿ ಭಾರತಕ್ಕೋಸ್ಕರ ಜೀವನ ಮಾಡಿದರೆ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಕುಮಾರಿ ಡಾ|| ದೀಪ್ತಿ. ಕೆ.ಕೆ ಮಾತನಾಡಿ ವರ್ತಮಾನದ ಸನ್ನಿವೇಶಗಳನ್ನು ಅನುಭವಿಸಿಕೊಂಡು ಜೀವನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಶೈಲಶ್ರೀ ರೈ ಎಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಹಣತೆ ಉಳಿಸಿ ಭಾರತ ಮಾತೆಗೆ ಪುμÁ್ಪರ್ಚನೆ ಮಾಡಿ ಹಿರಿಯರ ಆಶೀರ್ವಾದ ಪಡೆದುಕೊಂಡು. ತಮ್ಮ ಜವಾಬ್ದಾರಿಯನ್ನು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡುವ ಮೂಲಕ ವಹಿಸಿಕೊಟ್ಟರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಂಸ್ಥೆಯಲ್ಲಾದ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕಿ ಶ್ರೀಮತಿ ಗೀತಾ ಎಂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್‍ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಪ್ರಮೀಳಾ ಲೋಕೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕೀರ್ತನ್ ಸ್ವಾಗತಿಸಿ, ಪೂರ್ವಿತ್. ಎನ್.ಪಿ. ವಂದಿಸಿದರು. ಸಿಂಚನ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Related News

News and Events
24/03/2025

ವಿವೇಕಾನಂದ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ

Uncategorized
24/03/2025

ವಿವೇಕಾನಂದ ಕಾಲೇಜಿನಲ್ಲಿ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆ

Events
24/03/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಭಾರತ್ ಭೋದ್ ಮಾಲ ಕಾರ್ಯಕ್ರಮ