ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮತ್ತು ನೈಪುಣ್ಯ ಸಾಧಕರ ಸಮ್ಮಿಲನ

Leaf
Leaf

ಕೊರೋನಾ ನಂತರದ ದಿನಗಳಲ್ಲಿ ಉಂಟಾದ ಸಂದಿಗ್ಧ ಪರಿಸ್ಥಿತಿಯ ನಡುವೆ ಜನ ಸಾಮಾನ್ಯರಲ್ಲಿ ಹೊಸತೊಂದು ಆಶಾಕಿರಣ ಮೂಡಿಸುವ ಸಲುವಾಗಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದಲ್ಲಿ 20 ಸ್ಥಳಗಳಲ್ಲಿ ಪ್ರತ್ಯೇಕ 27 ವಿಷಯಗಳಲ್ಲಿ 30ಗಂಟೆಗಳ ತರಬೇತಿ ನಡೆಯಿತು. ವಿವಿದ ಸಹಕಾರಿ ಸಂಘಗಳು, ಸಂಘ ಸಂಸ್ಥೆಗಳು, ದಾನಿಗಳ ಸಹಾಯದಿಂದ ಒಟ್ಟು 4536 ಜನರಿಗೆ ತರಬೇತಿ ನೀಡಲಾಯಿತು. ತರಬೇತಿ ಪಡೆದವರಲ್ಲಿ ಅನೇಕರು ಸ್ವಯಂ ಉದ್ಯೋಗ ಪ್ರಾರಂಭಿಸಿರುತ್ತಾರೆ, ಇನ್ನೂ ಕೆಲವರು ಉದ್ಯೋಗಕ್ಕೆ ಸೇರಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಉದ್ಯೋಗ ನೈಪುಣ್ಯ ಕೈಪಿಡಿ ಮುದ್ರಿಸಿಕೊಡಬೇಕೆಂದು ಸಮಾಜದ ಅಪೇಕ್ಷೆ ವ್ಯಕ್ತವಾದ ಹಿನ್ನಲೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ನ 15 ವಿಷಯಗಳಿಗೆ ಉದ್ಯೋಗ ನೈಪುಣ್ಯ ಕೈಪಿಡಿಗಳನ್ನು ರಚಿಸಿದೆ. ಸ್ವಯಂ ಉದ್ಯೋಗ ಪ್ರಾರಂಭ ಮಾಡಬಯಸುವವರಿಗೆ ಬೇಕಾದ 15 ಪ್ರತ್ಯೇಕ ವಿಷಯಗಳ ಅಗತ್ಯ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಮತ್ತು ಪ್ರಭಾವಿಯಾಗಿ ಈ ಪುಸ್ತಕಗಳ ಮೂಲಕ ನೀಡುವ ಪ್ರಯತ್ನ ಮಾಡಲಾಗಿದೆ. ತಂತ್ರಜ್ಞರು, ಕೃಷಿಕರು, ವಿವಿದ ವಿಷಯಗಳಲ್ಲಿ ಈಗಾಗಲೆ ಸ್ವಯಂ ಉದ್ಯೋಗ ನಡೆಸುತ್ತಿರುವರು ಮುಂತಾದವರ ಅನುಭವಗಳನ್ನು ಕ್ರೂಢಿಕರಿಸಿ ಪಠ್ಯದೊಂದಿಗೆ ಸೇರಿಸಲಾಗಿದೆ.

ಪ್ರತಿ ಪುಸ್ತಕದ ಬೆಲೆ 30ರೂ ಇದ್ದು, ಲೋಕಾರ್ಪಣೆಯ ದಿನ ಎಲ್ಲಾ ವಿಷಯಗಳ ಒಟ್ಟು 15 ಪುಸ್ತಕಗಳು ರೂ. 400/- ಸಿಗಲಿದೆ. ಅದೇ ದಿನ ಬೆಳಿಗ್ಗೆಯಿಂದ ಈಗಾಗಲೆ ನಾವು ನಡೆಸಿರುವ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದು ಸ್ವಯಂ ಉದ್ಯೋಗದ ಪ್ರಾರಂಭಿಸಿರುವವರ ಉತ್ಪನ್ನಗಳ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಲೋಕಾರ್ಪಣೆಗೊಳ್ಳಲಿರುವ ಪುಸ್ತಗಳು:
1. ಮಧು ಮಾಹಿತಿ
2. ಕಸಿ ಕಟ್ಟುವಿಕೆ ಮತ್ತು ಅಣಬೆ ಕೃಷಿ
3. ಫ್ಯಾಶನ್ ಡಿಸೈನ್ ಮತ್ತು ಗಾರ್ಮೆಂಟ್ ಮೇಕಿಂಗ್
4. ವೆಲ್ಡಿಂಗ್ ಮತ್ತು ಅಲ್ಯುಮಿನಿಯಮ್ ಫ್ಯಾಭ್ರಿಕೇಷನ್
5. ನೆಲಹಾಸು (ಟೈಲ್ಸ್ ಹಾಕುವ ಕ್ರಮಗಳು)
6. ಗೃಹ ಶುಶ್ರೂಷೆ (Home Nursing)
7. ಪ್ಲಂಬಿಂಗ್
8. ಫುಡ್ ಟೆಕ್ನಾಲಜಿ (ಅಹಾರ ಮೌಲ್ಯವರ್ಧನೆ)
9. ಮೊಬೈಲ್ ಫೋನ್ ಸರ್ವೀಸಿಂಗ್
10. ಸಿ.ಸಿ.ಟಿ.ವಿ ಅಳವಡಿಕೆ
11. ವಿದ್ಯುತ್ ಉಪಕರಣಗಳ ದುರಸ್ತಿ
12. ಹೈನುಗಾರಿಕೆ
13. ಇಲೆಕ್ಟ್ರಿಕಲ್ ವಯರಿಂಗ್
14. ಗ್ರಾಹಕ ಮಾಹಿತಿ ಸೇವಾಕೇಂದ್ರ ನಿರ್ವಹಣೆ
15. ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ

Leave a Reply

Your email address will not be published. Required fields are marked *

Related News

News
08/02/2025

ವಿವೇಕ ಜಯಂತಿ ಆಚರಣೆ-2025 ಗುರುವಿನಿಂದ ಪಡೆದ ಉತ್ಕೃಷ್ಟ ವಿಚಾರಗಳ ಚೈತನ್ಯ ರೂಪ ಶಿಷ್ಯರು – ಡಾ. ಜಿ.ಬಿ ಹರೀಶ್.

ವೀರಸಾವರ್ಕರ್ ಹೋರಾಟದ ಹಾದಿ ಯುವ ಜನತೆಗೆ ಮಾದರಿಯಾಗಲಿ
News
11/01/2025

ವೀರಸಾವರ್ಕರ್ ಹೋರಾಟದ ಹಾದಿ ಯುವ ಜನತೆಗೆ ಮಾದರಿಯಾಗಲಿ: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಕಸಿತ ಭಾರತ – ವೀರ ಸಾವರ್ಕರ್ ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಸಮಾರೋಪ
News
11/01/2025

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಸಮಾರೋಪ