ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮ

Leaf
Leaf

ಉಪ್ಪಿನಂಗಡಿ : ಭಾರತೀಯಜೀವನ ಪದ್ದತಿಯಲ್ಲಿ ಬೆರೆತಿರುವ ಮೌಲ್ಯಬಿಂದುಗಳ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸುವತ್ತ ಮಾತೆಯರು ಕಾಳಜಿಯುಕ್ತ ಗಮನಹರಿಸಬೇಕೆಂದು ಎಂಆರ್‌ಪಿಎಲ್‌ ಡೆಪ್ಯೂಟಿ ಜನರಲ್ ಮೆನೇಜರ್ ಶ್ರೀಮತಿ ಲಕ್ಷ್ಮೀ ಎಂ ಕುಮಾರನ್‌ಕರೆ ನೀಡಿದರು. ಅವರು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಶ್ರೀ ಮಾಧವ ಶಿಶುಮಂದಿರ ಸಮಿತಿ ಮತ್ತು ಮಾತೃ ಮಂಡಳಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಆದಿತ್ಯವಾರ ರಾತ್ರಿ ನಡೆದ ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 

ನಮ್ಮ ವೇದ ಪುರಾಣಗಳಲ್ಲಿ ಲಭಿಸುವಜೀವನದ ಮೌಲ್ಯಗಳನ್ನು ನಾವಿಂದು ಪಾಶ್ಚ್ಯಾತ ದೇಶಗಳ ಅನುಕರಣೆಯ ಭರದಲ್ಲಿ ಕಡೆಗಣಿಸುತ್ತಿದ್ದೇವೆ. ಆದರೆ ಅದನ್ನೇ ಅಮೇರಿಕಾ ದೇಶದವರು ಉತ್ತಮವೆಂದರೆ ನಾವದನ್ನು ಗೌರವಿಸಲು ಮುಂದಾಗುತ್ತೇವೆ ಎಂದ ಅವರು, ಋಷಿ ಮುನಿಗಳು ತಪಸ್ಸಿನಿಂದ ಕಂಡುಕೊಂಡ ಸತ್ಯವನ್ನುಇಂದು ವಿಜ್ಞಾನಿಗಳು ಪರೀಕ್ಷೆಯಿಂದ ಕಂಡುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು. ಮಾತೆಯರು ಧರಿಸುವ ಬಿಂದಿ, ಬಳೆ, ಕಾಲುಂಗುರ, ಬಟ್ಟೆ ಬರೆ ಸಹಿತ ಎಲ್ಲವೂ ಒಂದೊಂದು ಮಹತ್ವವನ್ನು ಹೊಂದಿದೆ. ನಮ್ಮ ಉಡುಗೆ ತೊಡುಗೆ ನಮ್ಮನ್ನು ಗೌರವದಿಂದ ನೋಡುವಂತಿರಬೇಕೆ ವಿನಃ ಅನ್ಯದೃಷ್ಠಿಯಿಂದ ನೋಡುವಂತಿರಬಾರದು ಎಂದವರು ಕಳಕಳಿ ವ್ಯಕ್ತಪಡಿಸಿ ತಿಳಿಸಿದರು.

 

ಮುಖ್ಯ ಭಾಷಣ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸರೋಜಿನಿ ಕೆ ಮೆನಾಲ ರವರು, ಮನೆ,  ಮಕ್ಕಳನ್ನು ಸಂಸ್ಕಾರಗೊಳಿಸುವ ಮಹಿಳೆ ಇಡೀ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ್ರವಹಿಸುತ್ತಾಳೆ. ಈ ಕಾರಣಕ್ಕೆಇಂದು ಸಮಾಜದ ಎಲ್ಲಾ ನ್ಯೂನ್ಯತೆಗಳಿಗೆ ಮಹಿಳೆಯರನ್ನೇ  ದೂಷಿಸಲಾಗುತ್ತಿದೆ. ಭಾರತೀಯ ಜೀವನದಲ್ಲಿ ಮಹಿಳೆಯರಿಗೆ ಇರುವ ಗೌರವವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿ ಮನೆಯ ಮಹಿಳೆಯೂ ಕಂಕಣಬದ್ದರಾಗಬೇಕು. ಪ್ರಕೃತಿ ಮಾತೆಯನ್ನು ಪೂಜಿಸುವ ನಮ್ಮ ಸನಾತನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸಂಗಮ ಸ್ಥಳವಾದ ಉಪ್ಪಿನಂಗಡಿಯಲ್ಲಿ ಗಂಗಾ ಪೂಜೆಯನ್ನುಧಾರ್ಮಿಕ ನೆಲೆಯಲ್ಲಿ ನಡೆಸಿಕೊಂಡು ಬರುತ್ತಿರುವುದು ಸಂತಸದಾಯಕವೆಂದರು.

 

ನೂರಾರು ಸಂಖ್ಯೆಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿದ ಮಾತೆಯರ ಪರವಾಗಿ ಪೂಜಾ ನೇತೃತ್ವವನ್ನು ಉಪ್ಪಿನಂಗಡಿ ರಾಮನಗರ ನಿವಾಸಿ ಕಿಶೋರ್ ಮತ್ತು ಸೌಮ್ಯ ದಂಪತಿಗಳು ನೆರವೇರಿಸಿದರು. ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸ್ವಾಗತಿಸಿದರು. ಕಾರ್ಯದರ್ಶಿ ಪುಷ್ಪಲತಾ ಜನಾರ್ಧನ್‌ ಧನ್ಯವಾದ ಸಲ್ಲಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದದಕ್ಷಿಣ ಮಧ್ಯಕೇತ್ರ ಸಂಪರ್ಕ ಪ್ರಮುಖ್‌ ಡಾ| ಕಲ್ಲಡ್ಕ ಪ್ರಭಾಕರ ಭಟ್  ಸಹಿತ ಸಮಾಜದ ಹಲವಾರುಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಂಗಾಮಾತೆಗೆ ಭಾಗಿನ ಸಮರ್ಪನೆಗೈದ ಬಳಿಕ ಗಂಗಾರತಿ ಬೆಳಗಿ, ಎಲ್ಲಾ ಪೂಜಾಕರ್ತರಿಂದ ಗಂಗಾರತಿ ನಡೆಸಲಾಯಿತು.

Leave a Reply

Your email address will not be published. Required fields are marked *

Related News

News
16/06/2025

ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶ

Events
16/06/2025

ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Uncategorized
16/06/2025

ಕಡಬ ಸರಸ್ವತೀ ಪ್ರೌಢಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿನ