ಕಡಬ ಸರಸ್ವತೀ ಪ್ರೌಢಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿನ

ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಜೂನ್ 13ರಂದು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಪ್ರಮೀಳಾ ಲೋಕೇಶ್ ವಹಿಸಿ ಶಿವಾಜಿಯ ಜೀವನ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿದ ರೀತಿಯನ್ನು ಸ್ಪುಟವಾಗಿ ತಿಳಿಸಿದರು. ವಿದ್ಯಾರ್ಥಿಗಳಾದ ರಕ್ಷಾ ಹಾಗೂ ದಿಗಂತ್ ಹಿಂದೂ ಸಾಮ್ರಾಜ್ಯ ದಿನದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ -ಶಿಕ್ಷಕೇತರವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶಿಕ್ಷಕಿ ಶ್ರೀಮತಿ ಸೌಮ್ಯ ಕೆ.ಎ ಕಾರ್ಯಕ್ರಮ ನಿರ್ವಹಿಸಿದರು.
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ1967-70 ಸಾಲಿನ ಬಿ.ಎಸ್ಸಿಯ ಬಿಝೆಡ್ ಸಿ ಹಿರಿಯ ವಿದ್ಯಾರ್ಥಿಗಳ ಮರು ಸಮ್ಮಿಲನ

ಪುತ್ತೂರು : ‘ಸಮಾಜದ ಮೌಲ್ಯಗಳು ಕುಗ್ಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿವೇಕಾನಂದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿ ಹೊರಗೆ ಹೋದ ಹಲವು ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದು ಸೇರಿರುವುದು ಒಂದು ಉತ್ತಮ ಸಂಗತಿಯಾಗಿದೆ. ಹಿರಿಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗೆ ದೊಡ್ಡ ಅಸ್ತಿ. ಈ ಮೂಲಕ ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಪರ್ಕದಲ್ಲಿರಬೇಕು. ಹೀಗೆ ಎಲ್ಲರೂ ಸೇರಿ ಶಿಕ್ಷಣವನ್ನು ಒಗ್ಗಟ್ಟಾಗಿ ಬೆಳೆಸಬಹುದು’. ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ […]
ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ ಎಲ್ಲರಿಗೂ ಇರುತ್ತದೆ. ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ರಕ್ಷಕರ ಪಾತ್ರ ಮಹತ್ವದ್ದು. ಅವರನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸವನ್ನು ಇಬ್ಬರು ಸೇರಿಯೇ ಮಾಡಬೇಕು. ಸೈಕಲ್ ತುಳಿಯುವಾಗ ಒಂದು ಚಕ್ರದಲ್ಲಿ ಗಾಳಿ ಇದ್ದು ಇನ್ನೊಂದರಲ್ಲಿಲ್ಲ ಎಂದರೆ ಸೈಕಲ್ ಸವಾರಿ ಮಾಡಲು ಯೋಗ್ಯವಾಗಿರುವುದಿಲ್ಲ. ಮಕ್ಕಳ ವಿಷಯದಲ್ಲೂ ಅಷ್ಟೆ ಶಿಕ್ಷಕರು ಮತ್ತು ರಕ್ಷಕರು ಎರಡು ಚಕ್ರಗಳಂತೆ ಕಾರ್ಯನಿರ್ವಹಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಹೇಳಿದರು.ಅವರು ವಿವೇಕಾನಂದ ಕಲಾ, […]
ಕಲಾ ವಿಭಾಗದಲ್ಲಿ ಸಾಗರದಷ್ಟು ಅವಕಾಶವಿದೆ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

ಪುತ್ತೂರು, ಏ.28: ಅಂಕಪಟ್ಟಿಯ ಅಂಕಗಳಿಗಿಂತ ನಮ್ಮ ಕೌಶಲ್ಯ ಜೀವನಕ್ಕೆ ಅಗತ್ಯ. ಹೆಚ್ಚಿನ ಕೌಶಲ್ಯವನ್ನು ಅಭ್ಯಸಿಸಿದಷ್ಟು ನಮ್ಮ ಪದವಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಪದವಿಯ ಜೊತೆ ಜೊತೆಗೆ ಬೇರೆ ಬೇರೆ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡುವುದರಿಂದ ಕೆಲಸವನ್ನು ಪಡೆಯಲು ಸುಲಭವಾಗುತ್ತದೆ. ಅದೇ ರೀತಿ ವಿದೇಶಿ ಭಾಷೆಗಳನ್ನು ಕಲಿಯುವುದರಿಂದ ಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ಸಹಕಾರಿ. ಆನ್‍ಲೈನ್ ಕೋರ್ಸ್‍ಗಳು ಕೆಲಸವನ್ನು ಪಡೆಯಲು ಇರುವ ಸುಲಭೋಪಾಯ. ನಮ್ಮ ವೃತ್ತಿಜೀವನಕ್ಕೆ ಉಪಯೋಗವಾಗುವ ಕೋರ್ಸ್‍ಗಳನ್ನು ಆಯ್ಕೆಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು […]
ವಿವೇಕಾನಂದ ಕಾಲೇಜಿನಲ್ಲಿ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆ

ಯುವಜನತೆ ಸ್ವದೇಶಿ ಚಿಂತನೆಯನ್ನು ಮಾಡಬೇಕು: ಕಿಶೋರ್ ಕುಮಾರ್ ಬೊಟ್ಯಾಡಿ ಪುತ್ತೂರು. ಮಾ, 23: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಲಿತಂತಹ ಶಿಸ್ತು ಹಾಗೂ ಸಂಸ್ಕಾರವು ಸಮಾಜದಲ್ಲಿ ಒಂದು ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ. ವಿದ್ಯೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಿಕೊಂಡು ಸಮಾಜ ಮುಖಿ ಕೆಲಸ ಮಾಡಬೇಕು ಜೊತೆ ಪ್ರಕೃತಿಯ ನಿಯಮವನ್ನು ಬದುಕಿನಲ್ಲಿ ಅನುಸರಿಸಿಕೊಂಡು ಭ್ರಷ್ಟಾಚಾರವಿಲ್ಲದೇ ಬಾಳಬೇಕು. ಎಂದು ಹಿರಿಯ ವಿದ್ಯಾರ್ಥಿ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ, […]
ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಲ್ಲಿ ಪಾದ ಪೂಜೆ

ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಕಡಬ ಇಲ್ಲಿನ 10ನೇ ತರಗತಿ ವಿದ್ಯಾರ್ಥಿ-ಪೆÇೀಷಕರೊಂದಿಗೆ ಸಂವಾದ ಹಾಗೂ ಪಾದಪೂಜನಾ ಕಾರ್ಯಕ್ರಮವು ಫೆಬ್ರವರಿ 19ರಂದು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರೌಢ ವಿಭಾಗದ ಮೇಲ್ವಿಚಾರಕರಾದ ಶ್ರೀಮತಿ ಪುಲಸ್ತ್ಯಾ ರೈ ವಹಿಸಿ, ಇಂತಹ ಪಾದಪೂಜನಾ ಕಾರ್ಯಕ್ರಮವು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದೆ ಎಂದು ಅಧ್ಯಕ್ಷ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಘುರಾಜ್ ಉಬರಡ್ಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ಆಗಮಿಸಿ ಹಲವು ನಿದರ್ಶನ, ದೃಶ್ಯಾವಳಿಗಳೊಂದಿಗೆ ಹೆತ್ತವರು […]