ಮಕರ ಸಂಕ್ರಮಣ ಉತ್ಸವ

ಉಪ್ಪಿನಂಗಡಿ : ಪ್ರಾಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳ ಮಕರ ಸಂಕ್ರಮಣ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾಜದ ಸ್ವಾಸ್ಥ್ಯ ಬೆಳಗುವುದು. ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುವ ಈ ಸಮಯದಲ್ಲಿದೇವತಾ ಶಕ್ತಿ ಯಾ ಸಾತ್ವಿಕ ಶಕ್ತಿಗಳು ಮೇಲೈಸಲಿರುವ ಸಂಕೇತವೂ ಇದೆ. ಎಂದುಉದ್ಯಮಿ, ಚಿಂತಕ ಮಿತ್ರಸೇನ್ ಜೈನ್ ತಿಳಿಸಿದರು. ಅವರು ಸೋಮವಾರದಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶುಮಂದಿರದಲ್ಲಿ ನಡೆದ ಮಕರ ಸಂಕ್ರಮಣ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ […]
ವಿವೇಕಾನಂದರ ಆದರ್ಶ ಪಾಲಕರಾಗೋಣ – ಯು ವಿ ಭಟ್

ಉಪ್ಪಿನಂಗಡಿ : ಜಗತ್ತಿಗೆ ಭಾರತೀಯಜೀವನ ಮೌಲ್ಯಗಳನ್ನು ತಿಳಿಸಿದ, ಹಿಂದೂಧರ್ಮದ ಶ್ರೇಷ್ಠತೆಯನ್ನು ಪರಿಚಯಿಸಿದ ಸ್ವಾಮಿ ವಿವೇಕಾನಂದರು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಕನಸು ಕಂಡವರು. ಇದೀ ದೇಶ ಮೌಡ್ಯಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ, ಅಂಘಟಿತರಾಗಿ ದುರ್ಬಲರಾಗಿದ್ದಾಗ ಅವರುಗಳ ಉದ್ದಾರಕ್ಕೆ ಶ್ರಮಿಸಿದವರು. ದೇಶದ ಸನ್ಯಾಸಿ ಪರಂಪರೆಗೆ ಮೆರಗು ತಂದುಕೊಟ್ಟ ಈ ಮಹಾನ್ ಚೇತನದ ನೂರೈವತ್ತು ವರ್ಷಾಚರಣೆ ಅವರ ಆದರ್ಶ ಪಾಲನೆಯ ಬದ್ದತೆಯನ್ನು ನೆನಪಿಸುವಂತಾಗಲಿ ಎಂದು ಹಿರಿಯ ಮುತ್ಸದ್ದಿ ಸಾಮಾಜಿಕ ಮುಂದಾಳು ಸಾಹುಕಾರ್ ಯು ವಿ ಭಟ್ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ […]
ಸೇವಾ ದಿನ ಆಚರಣೆ

ಉಪ್ಪಿನಂಗಡಿ : ಮೌಲ್ಯಗಳ ಕುಸಿತಕ್ಕೆ ಒಳಗಾಗಿರುವ ಇಂದಿನ ಆಧುನಿಕಜೀವನದಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಕಾರ್ಯ ಅತ್ಯಗತ್ಯವಾದದ್ದು ಹಾಗೂ ದೇವತಾಕಾರ್ಯಕ್ಕೆ ಸರಿಸಮಾನವಾದದ್ದಾಗಿದೆ. ಹಿಂದೂ ಸಮಾಜದಲ್ಲಿ ಅನಪೇಕ್ಷಿತ ರೀತಿಯಲ್ಲಿ ಸೇರಿಕೊಂಡಿದ್ದ ಅನಿಷ್ಠಗಳನ್ನು ಸೇವೆಯೆಂಬ ಧ್ಯೇಯದಲ್ಲಿ ನಿವಾರಿಸಲು ಶ್ರಮಿಸಿದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಸ್ವರ್ಗೀಯ ಅಜಿತ್‌ಕುಮಾರಜೀ ಸ್ಮರಣಾರ್ಥ ನಡೆಸುವ ಸೇವಾ ದಿನ ಸಮಾಜಕ್ಕೆ ಸೇವಾ ದೀಕ್ಷೆ ನೀದಲು ಸಹಕಾರಿಯಾಗಲಿ ಎಂದು ಹಿರಿಯ ಚಿಂತಕ, ವಿಶ್ರಾಂತ ಶಿಕ್ಷಕ ಎಂ ಕೆ ಸಾಲಿಯಾನ್ ಕರೆ ನೀಡಿದ್ದಾರೆ. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ […]
ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮ

ಉಪ್ಪಿನಂಗಡಿ : ಭಾರತೀಯಜೀವನ ಪದ್ದತಿಯಲ್ಲಿ ಬೆರೆತಿರುವ ಮೌಲ್ಯಬಿಂದುಗಳ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸುವತ್ತ ಮಾತೆಯರು ಕಾಳಜಿಯುಕ್ತ ಗಮನಹರಿಸಬೇಕೆಂದು ಎಂಆರ್‌ಪಿಎಲ್ ಡೆಪ್ಯೂಟಿ ಜನರಲ್ ಮೆನೇಜರ್ ಶ್ರೀಮತಿ ಲಕ್ಷ್ಮೀ ಎಂ ಕುಮಾರನ್‌ಕರೆ ನೀಡಿದರು. ಅವರು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಶ್ರೀ ಮಾಧವ ಶಿಶುಮಂದಿರ ಸಮಿತಿ ಮತ್ತು ಮಾತೃ ಮಂಡಳಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಆದಿತ್ಯವಾರ ರಾತ್ರಿ ನಡೆದ ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ವೇದ ಪುರಾಣಗಳಲ್ಲಿ […]
ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ

ಉಪ್ಪಿನಂಗಡಿ : ದಿನಾಂಕ ೯/೮/೨೦೧೨ ರಂದು ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ ಪಂ ಸದಸ್ಯ ಕೇಶವ ಗೌಡ ಬಜತ್ತೂರು, ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಶ್ರೀ ಕೃಷ್ಣನ ಜೀವನಾದರ್ಶವನ್ನು ವಿವರಿಸಿದರು. ಶ್ರೀ ಕೃಷ್ಣವೇಷಧಾರಿ ಮಕ್ಕಳ ಮಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಹಾಗೂ ಮಾತೆಯರಿಗೆ ಮತ್ತು ಪುರುಷರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ […]
ಕೇಶವ ಕೃಪಾ ಕಟ್ಟಡ ಉದ್ಘಾಟನೆ

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಶಿಶು ಮಂದಿರದ ಬಳಿ ನಿರ್ಮಿಸಲಾದ ಕೇಶವ ಕೃಪಾ ಕಟ್ಟಡವನ್ನು ಆರ್ ಎಸ್ ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುತ್ತಿರುವುದು. ಚಿತ್ರದಲ್ಲಿ ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ , ಅಧ್ಯಕ್ಷ ಮನೋಜ್ ಶೆಟ್ಟಿ, ಮಾತಾಜಿ ರಮ್ಯಾ ಶಿರಸಿ ರವರನ್ನು ಕಾಣಬಹುದು.
ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮಗಿರಿಗೆ ಪ್ರವಾಸ

ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇಲ್ಲಿನ ಪುಟಾಣಿ ಮಕ್ಕಳ ಕಿರು ಪ್ರವಾಸವು ದಿನಾಂಕ ೫/೯/೧೨ ರಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮ ಗಿರಿಗೆ ನಡೆಯಿತು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ಸರಸ್ವತಿ ವಂದನಾ, ಕಲ್ಲಡ್ಕ ಶಿಶು ಮಂದಿರಗಳ ಪುಟಾಣಿಗಳಿಂದ ದೊರೆತ ಸ್ವಾಗತ ರೂಪಿತಗೊಂಡ ಪ್ರಹಸನ, ಮನಮೋಹಕಗೊಂಡಿತ್ತು. ಉಪಹಾರವನ್ನು ಸೇವಿಸಿ, ಈಶ್ವರ ಮಂಗಲದ ಹನುಮ ಬೆಟ್ಟಕ್ಕೆ ಹೋಗಿ ದೇವರ ದರುಶನ ಮಾಡಿ, ಪೂರ್ವ ನಿಗದಿಯಂತೆ ಈಶ್ವರ ಮಂಗಲದ ಪಂಚಲಿಂಗೇಶ್ವರ […]
ಮಾಂಗಲ್ಯ ನಿಧಿ ಧನ ಸಹಾಯ

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ವತಿಯಿಂದ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆಂದು ನೀಡಲಾಗುವ ಮಾಂಗಲ್ಯ ನಿಧಿ ಧನ ಸಹಾಯವನ್ನು ಉಪ್ಪಿನಂಗಡಿಯ ದಿವಂಗತ ನಾರಾಯಣ ಟೈಲರ್ ರವರ ಮಗಳ ಮದುವೆಗೆಂದು ಮದುಮಗಳ ತಾಯಿ ಶ್ರೀಮತಿ ಕೃಷ್ಣಮ್ಮ ರವರಿಗೆ ವಿತರಿಸುತ್ತಿರುವುದು ಚಿತ್ರದಲ್ಲಿ ಉದ್ಯಮಿ ಹಾಗೂ ನಿವೃತ್ತ ಸೇನಾನಿ ಕೆ ಸುರೇಶ್ ಮತ್ತು ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ, ಅಧ್ಯಕ್ಷ ಮನೋಜ್ ಶೆಟ್ಟಿ ರವರನ್ನು ಕಾಣಬಹುದು.