ಉಪ್ಪಿನಂಗಡಿ : ಸಮಾಜದ ಶ್ರದ್ಧಾ ಬಿಂದುಗಳಲ್ಲಿ ಒಂದಾಗಿರುವ ಮಾತೃಶಕ್ತಿಯ ಜಾಗೃತಿಯಿಂದ ರಾಷ್ಟ್ರದ ನವೋತ್ಥಾನ ಸಾಧ್ಯ. ನಮ್ಮ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ ವೀರ ವನಿತೆಯರ ಬಗ್ಗೆ, ರಾಷ್ಟ್ರ ಪುರುಷರಿಗೆ ಜನ್ಮವಿತ್ತ ಮಹಾ ಮಾತೆಯರ ಬಗ್ಗೆ ಮರೆವು ಸಲ್ಲದು. ರಾಷ್ಟ್ರ್ರದೆದುರಿನ ಸವಾಲುಗಳನೆದುರಿಸಲು ಸಾಂಘಿಕ ಹೋರಾಟ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಪರ್ಕ ಪ್ರಮು ಖ್ ರವೀಂದ್ರರವರು ಕರೆ ನೀಡಿದರು. ಅವರು, ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಾಧಾರ
ಉಪ್ಪಿನಂಗಡಿ : ಇಲ್ಲಿನ ಶ್ರೀಮಾಧವ ಶಿಶು ಮಂದಿರ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ನಡೆದ ಗಂಗಾ ಪೂಜನಾ ಕಾರ್ಯಕ್ರಮದಲ್ಲಿ ಮಾತೆಯರಿಂದ ಪೂಜಿಸಲ್ಪಟ್ಟ ನೇತ್ರಾವತಿ ನದಿ ಕಂಗೊಳಿಸಿದ ಬಗೆ ಇದು. ಕುಂಜ್ಞ ನಲಿಕೆ ದಂಪತಿಗಳ ಪೂಜಾ ನೇತೃತ್ವದಲ್ಲಿ ಗಂಗೆ ಸ್ವರೂಪಿ ನೇತ್ರಾವತಿಗೆ ಭಾಗೀನ ಸಮರ್ಪಣೆ, ಪ್ರತಿಯೋರ್ವ ಭಕ್ತರು ಗಂಗೆಯನ್ನು ಪೂಜಿಸಿ ಬಿಟ್ಟ ಹಣತೆಗಳು ನದಿಯಲ್ಲಿ ಸಾಲುಗಟ್ಟಿ ಸಾಗಿದ ದೃಶ್ಯಗಳು ಮನೋಹರವಾಗಿತ್ತು.
ಉಪ್ಪಿನಂಗಡಿ : ಪ್ರಾಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳ ಮಕರ ಸಂಕ್ರಮಣ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾಜದ ಸ್ವಾಸ್ಥ್ಯ ಬೆಳಗುವುದು. ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುವ ಈ ಸಮಯದಲ್ಲಿದೇವತಾ ಶಕ್ತಿ ಯಾ ಸಾತ್ವಿಕ ಶಕ್ತಿಗಳು ಮೇಲೈಸಲಿರುವ ಸಂಕೇತವೂ ಇದೆ. ಎಂದುಉದ್ಯಮಿ, ಚಿಂತಕ ಮಿತ್ರಸೇನ್ ಜೈನ್ ತಿಳಿಸಿದರು. ಅವರು ಸೋಮವಾರದಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶುಮಂದಿರದಲ್ಲಿ ನಡೆದ ಮಕರ ಸಂಕ್ರಮಣ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್
ಉಪ್ಪಿನಂಗಡಿ : ಜಗತ್ತಿಗೆ ಭಾರತೀಯಜೀವನ ಮೌಲ್ಯಗಳನ್ನು ತಿಳಿಸಿದ, ಹಿಂದೂಧರ್ಮದ ಶ್ರೇಷ್ಠತೆಯನ್ನು ಪರಿಚಯಿಸಿದ ಸ್ವಾಮಿ ವಿವೇಕಾನಂದರು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಕನಸು ಕಂಡವರು. ಇದೀ ದೇಶ ಮೌಡ್ಯಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ, ಅಂಘಟಿತರಾಗಿ ದುರ್ಬಲರಾಗಿದ್ದಾಗ ಅವರುಗಳ ಉದ್ದಾರಕ್ಕೆ ಶ್ರಮಿಸಿದವರು. ದೇಶದ ಸನ್ಯಾಸಿ ಪರಂಪರೆಗೆ ಮೆರಗು ತಂದುಕೊಟ್ಟ ಈ ಮಹಾನ್ ಚೇತನದ ನೂರೈವತ್ತು ವರ್ಷಾಚರಣೆ ಅವರ ಆದರ್ಶ ಪಾಲನೆಯ ಬದ್ದತೆಯನ್ನು ನೆನಪಿಸುವಂತಾಗಲಿ ಎಂದು ಹಿರಿಯ ಮುತ್ಸದ್ದಿ ಸಾಮಾಜಿಕ ಮುಂದಾಳು ಸಾಹುಕಾರ್ ಯು ವಿ ಭಟ್ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ
ಉಪ್ಪಿನಂಗಡಿ : ಮೌಲ್ಯಗಳ ಕುಸಿತಕ್ಕೆ ಒಳಗಾಗಿರುವ ಇಂದಿನ ಆಧುನಿಕಜೀವನದಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಕಾರ್ಯ ಅತ್ಯಗತ್ಯವಾದದ್ದು ಹಾಗೂ ದೇವತಾಕಾರ್ಯಕ್ಕೆ ಸರಿಸಮಾನವಾದದ್ದಾಗಿದೆ. ಹಿಂದೂ ಸಮಾಜದಲ್ಲಿ ಅನಪೇಕ್ಷಿತ ರೀತಿಯಲ್ಲಿ ಸೇರಿಕೊಂಡಿದ್ದ ಅನಿಷ್ಠಗಳನ್ನು ಸೇವೆಯೆಂಬ ಧ್ಯೇಯದಲ್ಲಿ ನಿವಾರಿಸಲು ಶ್ರಮಿಸಿದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಸ್ವರ್ಗೀಯ ಅಜಿತ್‌ಕುಮಾರಜೀ ಸ್ಮರಣಾರ್ಥ ನಡೆಸುವ ಸೇವಾ ದಿನ ಸಮಾಜಕ್ಕೆ ಸೇವಾ ದೀಕ್ಷೆ ನೀದಲು ಸಹಕಾರಿಯಾಗಲಿ ಎಂದು ಹಿರಿಯ ಚಿಂತಕ, ವಿಶ್ರಾಂತ ಶಿಕ್ಷಕ ಎಂ ಕೆ ಸಾಲಿಯಾನ್ ಕರೆ ನೀಡಿದ್ದಾರೆ. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ
ವಿವೇಕಾನಂದ ಶಿಶುಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವು ಶಾರದಾಪೂಜೆಯ ಸಂದರ್ಭದಲ್ಲಿ ನಡೆಯಿತು.
ವಿವೇಕಾನಂದ ಶಿಶುಮಂದಿರದಲ್ಲಿ ಮಾತಾಜಿಗಳಿಗೆ ಮತ್ತು ಪೋಷಕರಿಗೆ 10ದಿನದ ಸಂಸ್ಕೃತ ಸಂಭಾಷಣ ಶಿಬಿರವು ನಡೆಯಿತು.
ಉಪ್ಪಿನಂಗಡಿ : ಭಾರತೀಯಜೀವನ ಪದ್ದತಿಯಲ್ಲಿ ಬೆರೆತಿರುವ ಮೌಲ್ಯಬಿಂದುಗಳ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸುವತ್ತ ಮಾತೆಯರು ಕಾಳಜಿಯುಕ್ತ ಗಮನಹರಿಸಬೇಕೆಂದು ಎಂಆರ್‌ಪಿಎಲ್ ಡೆಪ್ಯೂಟಿ ಜನರಲ್ ಮೆನೇಜರ್ ಶ್ರೀಮತಿ ಲಕ್ಷ್ಮೀ ಎಂ ಕುಮಾರನ್‌ಕರೆ ನೀಡಿದರು. ಅವರು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಶ್ರೀ ಮಾಧವ ಶಿಶುಮಂದಿರ ಸಮಿತಿ ಮತ್ತು ಮಾತೃ ಮಂಡಳಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಆದಿತ್ಯವಾರ ರಾತ್ರಿ ನಡೆದ ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ವೇದ ಪುರಾಣಗಳಲ್ಲಿ