ವಿವೇಕಾನಂದರ ಆದರ್ಶ ಪಾಲಕರಾಗೋಣ – ಯು ವಿ ಭಟ್

Leaf
Leaf

ಉಪ್ಪಿನಂಗಡಿ : ಜಗತ್ತಿಗೆ  ಭಾರತೀಯಜೀವನ ಮೌಲ್ಯಗಳನ್ನು ತಿಳಿಸಿದ, ಹಿಂದೂಧರ್ಮದ ಶ್ರೇಷ್ಠತೆಯನ್ನು ಪರಿಚಯಿಸಿದ ಸ್ವಾಮಿ ವಿವೇಕಾನಂದರು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಕನಸು ಕಂಡವರು. ಇದೀ ದೇಶ ಮೌಡ್ಯಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ, ಅಂಘಟಿತರಾಗಿ ದುರ್ಬಲರಾಗಿದ್ದಾಗ ಅವರುಗಳ ಉದ್ದಾರಕ್ಕೆ ಶ್ರಮಿಸಿದವರು. ದೇಶದ ಸನ್ಯಾಸಿ ಪರಂಪರೆಗೆ ಮೆರಗು ತಂದುಕೊಟ್ಟ ಈ ಮಹಾನ್‌ ಚೇತನದ ನೂರೈವತ್ತು ವರ್ಷಾಚರಣೆ ಅವರ ಆದರ್ಶ ಪಾಲನೆಯ ಬದ್ದತೆಯನ್ನು ನೆನಪಿಸುವಂತಾಗಲಿ ಎಂದು ಹಿರಿಯ ಮುತ್ಸದ್ದಿ ಸಾಮಾಜಿಕ ಮುಂದಾಳು ಸಾಹುಕಾರ್‌ ಯು ವಿ ಭಟ್ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ  ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ವಿವೇಕಾನಂದ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಾಮಾಜಿಕ ಮುಂದಾಳು ಯು ವಿ ಭಟ್ ಮಾತನಾಡುವುದು.

ಭಾರತದೇಶದ ಭವ್ಯಇತಿಹಾಸದ ಹೊರತಾಗಿಯೂ ದೇಶ ದಾಸ್ಯಕ್ಕೆ ಸಿಲುಕಿದ ಸಮಯದಲ್ಲಿ, ಭಾರತದ ಬಗ್ಗೆ ವಿದೇಶದಲ್ಲಿ ಕೇವಲ ಭಾವನೆ ಮೂಡಿದ್ದ ಸಮಯದಲ್ಲಿ ಭಾರತದ ಬಗ್ಗೆ ಬೆರಗುಕಣ್ಣಿನಿಂದ ನೋಡುವಂತೆ ಮಾಡಿದ ಮಹಾನ್ ಸನ್ಯಾಸಿಯಾಗಿದ್ದಾರೆ. ಧರ್ಮವನ್ನು ದುರ್ಬಳಕೆ ಮಾಡುವ ಕೃತ್ಯವನ್ನು ಖಂಡಿಸಿ,  ಧರ್ಮದ ಸಾರ ಸರ್ವಸ್ವವನ್ನು ಸಾಮಾನ್ಯ ಜನರಿಗೂ ತಲುಪಿಸುವಂತೆ ಮಾಡಿದ ಅವರ ಕಾರ್ಯಶೈಲಿ ದೇಶಕ್ಕೆಅವರ ಮಾಹನ್‌ ಕೊಡುಗೆಯಾಗಿದೆ. ಆಧ್ಯಾತ್ಮಿಕ ಜೀವನದ ರಸವನ್ನು ಜಗತ್ತಿಗೆ ಸಾರಿದರಾಷ್ತ್ರದ ಪುನರ್ ವೈಭವಕ್ಕೆ ಶ್ರಮಿಸಿದ ವಿವೇಕಾನಂದರನ್ನುಅವರ ಆದರ್ಶ ಪಾಲನೆಯೊಂದಿಗೆ, ಅವರ ಕನಸು ನನಸಾಗಿಸುವುದರೊಂದಿಗೆ ಅವರ ನೂರೈವತತ್ತನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದರು.

ವಿವೇಕಾನಂದರ ವೇಷ ತೊಟ್ಟ ಉಪ್ಪಿನಂಗಡಿ ಶ್ರೀ ಮಾಧವ ಶಿಶುಮಂದಿರ ಮತ್ತು ಇಳಂತಿಲ ಶ್ರೀ ಕೇಶವ ಶಿಶುಮಂದಿರದ ಪುಟಾಣಿ ಮಕ್ಕಳ ಪೋಟೋ .

ಮುಖ್ಯ ಭಾಷಣ ಮಾಡಿದ ರಾ ಸ್ವ ಸೇ ಸಂಘದ ಯತೀಶ್‌ ಆಚಾರ್ಯರವರು, ಎದೆಗುಂದದ, ಅಳುಕದ, ಹಿಂಜರಿಯದ , ದೃಢಮನಸ್ಸಿನ, ಗುರಿಯತ್ತ ಸಾಗುವ ಯುವಜನಾಂಗದ ನಿರ್ಮಾಣದೊಂದಿಗೆ ರಾಷ್ಟ್ರವನ್ನು ಗತ ವೈಭವಕ್ಕೆಕೊಂಡೊಯ್ಯಲು ವಿವೇಕಾನಂದರು ಬಯಸಿದ್ದರು.  ಸಾತ್ವಿಕ ಉದ್ದೇಶಕ್ಕಾಗಿ, ಸತತಯತ್ನವನ್ನು ನಡೆಸಿದಾಗ ದೇವರದಯೆ ನಿಖರವಾಗಿ ಲಭಿಸುವುದಕ್ಕೆ ವಿವೇಕಾನಂದರು ನೈಜ ಸಾಕ್ಷಿಯಾಗಿದ್ದಾರೆ ಎಂದು ವಿವರಿಸಿದರು.

ಶಿಶು ಮಂದಿರ ಅಧ್ಯಕ್ಷ ಮನೋಜ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಗದೀಶ್ ಶೆಟ್ಟಿ ಸ್ವಾಗತಿಸಿ, ಹರಿರಾಮಚಂದ್ರ ವಂದಿಸಿದರು. ಶಿಶುಮಂದಿರ ಮಾತಾಜಿ ಭಗಿನಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Related News

News
22/02/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ “Carrier selection and building”ವಿಷಯದಲ್ಲಿ ಮಾಹಿತಿ ಕರ‍್ಯಗಾರ

News
17/02/2025

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ಯುರೇಕಾ 2025”- ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ

News
17/02/2025

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಟೆಕ್ನಾಲಜಿ ವಿಷಯದಲ್ಲಿ ಸೆಮಿನಾರ್