Radio Panchajanya 90.8 FM

Leaf
Leaf
This venture of Vivekananda Vidyavardhaka Sangha Puttur ® has been started for the benefit of the local community. The main objective of this adventure is to become public voice for the community development. On January 12, 2017 Radio Panchajanya 90.8 FM was inaugurated by Mrs. Nirmala Seetharaman, Finance Minister, Government of India. Panchajanya is broadcasting variety of programmes on Education, Agriculture, Health, Science & Technology, Sports, Literature, Art, Music, Cooking, Yakshagana, Dairy, Bhajan, etc. in the regional language. In total 36 variety programs are broadcasted. Panchajanya reaches to the audience of Puttur, Sullia, Belthangady and Bantwal Taluk. It has been so popular among the community within a very short spam. Panchajanya is also available in android application. It has also got internet streaming and archives.

Photos

ರೇಡಿಯೋ ಪಾಂಚಜನ್ಯದಲ್ಲಿ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ-ಫಲಿತಾಂಶ

ಪುತ್ತೂರು: ಸಂಸ್ಕಾರ ಭಾರತೀ ದ.ಕ. ಜಿಲ್ಲೆ ಪುತ್ತೂರು ವಿಭಾಗದ ಆಶ್ರಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವ್ಹೀಲ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ ಆ. 14ರಂದು ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಕಾರ ಭಾರತೀ ದ.ಕ. ಜಿಲ್ಲೆ ಉಪಾಧ್ಯಕ್ಷೆ ರೂಪಲೇಖಾ, ಇನ್ನರ್‍ವ್ಹೀಲ್ ಕ್ಲಬ್ ಪುತ್ತೂರು ಅಧ್ಯಕ್ಷೆ ರಾಜೇಶ್ವರಿ ಸುಧೀರ್ ಮತ್ತು ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಉದ್ಘಾಟಿಸಿದರು. ತೀರ್ಪುಗಾರರಾಗಿ ಉಷಾಮಣಿ ದಯಾನಂದ ಮತ್ತು ಚೈತ್ರಿಕಾ ಕೋಡಿಬೈಲು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಕಾರ ಭಾರತೀ ಸದಸ್ಯೆ ಶಂಕರಿ ಶರ್ಮ, ಇನ್ನರ್‍ವ್ಹೀಲ್ ಕಾರ್ಯದರ್ಶಿ ವಚನಾ ಜಯರಾಂ, ಸೆನೊರಿಟಾ ಆನಂದ್, ಸುಧಾ ಕರಿಯಪ್ಪ, ಆಶಾ ನಾಯಕ್, ಲವ್ಲಿ ಸೂರಜ್ ವೇದಾ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ರೇಡಿಯೋ ಪಾಂಚಜನ್ಯ ಸಂಯೋಜಕಿ ತೇಜಸ್ವಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ಸಲಹೆಗಾರರಾದ ಪ್ರಶಾಂತ್ ಸಹಕರಿಸಿದರು.
ವಿಜೇತರ ವಿವರ
8 ರಿಂದ 10ನೇ ತರಗತಿ ವಿಭಾಗದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಆದ್ಯ (ಪ್ರಥಮ), ಅಂಬಿಕಾ ವಿದ್ಯಾಲಯ ಬಪ್ಪಳಿಗೆ ಇಲ್ಲಿನ ವಿದ್ಯಾರ್ಥಿನಿ ರಕ್ಷಾ ಎಸ್.ಎಸ್. (ಧ್ವಿತೀಯ), ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸುಪ್ರಜಾ (ತೃತೀಯ)
5 ರಿಂದ 7ನೇ ತರಗತಿ ವಿಭಾಗದಲ್ಲಿ
ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಾದ ಸ್ಪಂದನಾ ಭಟ್ ಎಂ., ಜೀವಿಕಾ ಪಿ. ಭಟ್, ರೋಚನಾ ಎ., ರೋಚಿಕಾ ಎ., ಮಯೂರ್ ಎಸ್. ಮಯ್ಯ, ಶ್ರೀಯಾ ವಿ. ಎಂ., ಎಂ. ಆದಿಶ್ರೀ (ಪ್ರಥಮ), ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ವೈಷ್ಣವಿ, ಶ್ರೀರಕ್ಷಾ, ಸಂಹಿತಾ, ಚಿರಾಗ್, ಚೇತಸ್, ಗೌತಮ್ (ದ್ವಿತೀಯ), ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಾದ ಅನುಪ್ರಿಯಾ ಎನ್.ಕೆ., ತನ್ವಿ ಜೆ.ಪಿ., ಹನಿಕ್ಷಾ ಯು., ಆದ್ಯ ಪಿ. ಶೆಟ್ಟಿ, ವಿಹಾ, ಮನ್ವಿ ನಾಯಕ್, ಫಾತಿಮತ್ ರಫೀಲಾ (ತೃತೀಯ) ಬಹುಮಾನವನ್ನು ಪಡೆದಿರುತ್ತಾರೆ.